ಪ್ರಸಕ್ತ ಸಾಲಿನಲ್ಲೇ ಮಾರುತಿ 'ಸೂಪರ್ ಕ್ಯಾರಿ' ಬಿಡುಗಡೆ

Written By:

ಹಗುರ ವಾಣಿಜ್ಯ ವಿಭಾಗದಲ್ಲಿಯೂ ನಿಧಾನವಾಗಿ ಬಲ ವರ್ಧಿಸಿಕೊಳ್ಳುತ್ತಿರುವ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಪ್ರಸಕ್ತ ಸಾಲಿನಲ್ಲಿ ಉಪಯುಕ್ತ ವಾಹನವೊಂದನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ವರದಿಗಳ ಪ್ರಕಾರ 'ಸೂಪರ್ ಕ್ಯಾರಿ' ಎಂಬ ಹೆಸರಿನಿಂದ ಅರಿಯಲ್ಪಡುವ ಮಾರುತಿ ಸುಜುಕಿ ಹಗುರ ವಾಣಿಜ್ಯ ವಾಹನವು 2015ನೇ ಆರ್ಥಿಕ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಯಾಗಲಿದೆ.

maruti suzuki super carry

ಎಪ್ರಿಲ್‌ನಿಂದ ಜೂನ್ ಅವಧಿಯೊಳಗೆ ಯಾವಾಗ ಬೇಕಾದರೂ ಮಾರುತಿ ಸುಜುಕಿ ಸೂಪರ್ ಕ್ಯಾರಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಅಲ್ಲದೆ ಇದಕ್ಕೆ ಪೂರಕವಾದ ಬೆಳವಣಿಯಲ್ಲಿ ಸಂಸ್ಥೆಯು ತನ್ನ ಗುರ್ಗಾಂವ್ ಘಟಕದಲ್ಲಿ ಒಂದು ಲಕ್ಷ ಯುನಿಟ್‌ಗಳಷ್ಟು ಹಗುರ ವಾಣಿಜ್ಯ ವಾಹನಗಳನ್ನು ಉತ್ಪಾದಿಸಲು ನಿರ್ಧರಿಸಿದೆ.

ಮಾರುತಿ ಸುಜುಕಿ ಮುಖ್ಯಸ್ಥರಾದ ಆರ್‌ಸಿ ಭಾರ್ಗವ ಪ್ರಕಾರ "ಇಂದೊಂದು ಸೀಮಿತ ಬಿಡುಗಡೆಯಾಗಲಿದೆ" ಎಂದಿದ್ದಾರೆ.

ಆರಂಭದಲ್ಲಿ 800 ಸಿಸಿ ಡೀಸೆಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿರುವ ಸೂಪರ್ ಕ್ಯಾರಿ ಎಲ್‌ಸಿವಿ ಬಳಿಕ 1.2 ಲೀಟರ್ ಸಿಎನ್‌ಜಿ ವೆರಿಯಂಟ್ ಕೂಡಾ ಪಡೆಯಲಿದೆ.

ಇವೆಲ್ಲದರೊಂದಿಗೆ ಪ್ರಾಯಾಣಿಕ ಕಾರು ವಿಭಾಗದಲ್ಲಿ ಕಳೆದ ಹಲವಾರು ವರ್ಷಗಳಿಂದ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾರುತಿ ಈಗ ಹಗುರ ವಾಣಿಜ್ಯ ವಿಭಾಗದಲ್ಲಿ ದೇಶದ ಮುಂಚೂಣಿಯ ಸಂಸ್ಥೆಗಳಾದ ಟಾಟಾ ಮೋಟಾರ್ಸ್ ಹಾಗೂ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಗಳಿಗೆ ಪೈಪೋಟಿ ಒಡ್ಡಲಿದೆ.

English summary
Maruti Suzuki will launch its Light Commercial Vehicle (LCV), most likely called the Super Carry during the April to June quarter this year.
Story first published: Monday, February 2, 2015, 9:31 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark