ಜನಪ್ರಿಯ ಆಲ್ಟೊಗೆ ತಟ್ಟಿದ ಸಮಸ್ಯೆ; 33,098 ಕಾರುಗಳಿಗೆ ಹಿಂದಕ್ಕೆ ಕರೆ
ಗಮನಾರ್ಹ ಬೆಳವಣಿಗೆಯೊಂದರಲ್ಲಿ ಬಾಗಿಲಿನ ಬೀಗ ಜೋಡಣೆಯಲ್ಲಿ ಕಂಡುಬಂದಿರುವ ತೊಂದರೆಯ ಹಿನ್ನೆಲೆಯಲ್ಲಿ ದೇಶದ ಅತ್ಯಂತ ಜನಪ್ರಿಯ ಮಾರುತಿ ಸುಜುಕಿ ಸಂಸ್ಥೆಯು ಆಲ್ಟೊ 800 ಹಾಗೂ ಆಲ್ಟೊ ಕೆ10 ಮಾದರಿಗಳನ್ನು ಭಾರಿ ಸಂಖ್ಯೆಯಲ್ಲಿ ಹಿಂಪಡೆದಿದೆ.
ಏನಿದು ಸಮಸ್ಯೆ?
ವರದಿಗಳ ಪ್ರಕಾರ ಬಲಬದಿಯ ಬೀಗ ಆಸ್ಲೆಂಬಿ ವೇಳೆ ದೋಷ ಕಂಡುಬಂದಿದ್ದು, ಇದರಿಂದಾಗಿ 33,098 ಯುನಿಟ್‌ಗಳಷ್ಟು ಆಲ್ಟೊ ಮಾದರಿಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಾಗಿದೆ.

ನಿರ್ಮಾಣ ಯಾವಾಗ?
2014 ಡಿಸೆಂಬರ್ 8ರಿಂದ 2015 ಫೆಬ್ರವರಿ 18ರ ನಡುವೆ ನಿರ್ಮಾಣವಾದ ಮಾದರಿಗಳಿಗೆ ಇಂತಹದೊಂದು ಸಮಸ್ಯೆ ತಟ್ಟಿರುವುದನ್ನು ಸಂಸ್ಥೆ ಸ್ಪಷ್ಟಪಡಿಸಿದೆ.
ಯಾವೆಲ್ಲ ಮಾದರಿಗಳು?
ಈ ಪೈಕಿ 19,780 ಆಲ್ಟೊ 800 ಹಾಗೂ 13,318 ಯುನಿಟ್‌ಗಳಷ್ಟು ಆಲ್ಟೆ ಕೆ10 ಯುನಿಟ್‌ಗಳನ್ನು ಹಿಂಪಡೆಯಲಾಗಿದೆ. ಈಗ ಸಂಪೂರ್ಣ ಉಚಿತವಾಗಿ ಸಮಸ್ಯೆ ಬಗೆಹರಿಸಿ ಕೊಡಲಾಗುವುದು. ಈ ಸಂಬಂಧ ಸಂಸ್ಥೆಯು ಗ್ರಾಹಕರ ಸಂಪರ್ಕದಲ್ಲಿದೆ.

ನಿಮ್ಮ ಆಲ್ಟೊ ಕಾರಿನಲ್ಲೂ ಸಮಸ್ಯೆಯಿದೆಯೇ?
ಹಾಗಿದ್ದರೆ ಮೇಲಿನ ಅವಧಿಯಲ್ಲಿ ನೀವು ಕೂಡಾ ಆಲ್ಟೊ ಕಾರನ್ನು ಖರೀದಿಸಿದ್ದರೆ ನಿಮ್ಮ ಕಾರಿನಲ್ಲೂ ಸಮಸ್ಯೆ ಇದೆಯೇ ಎಂಬುದನ್ನು ಇಲ್ಲಿ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ ಪರೀಕ್ಷಿಸಿ ನೋಡಬಹುದು. ಇದಕ್ಕಾಗಿ ಕಂಪ್ಯೂಟರ್ ಪರದೆಯಲ್ಲಿ ತೆರೆದುಕೊಳ್ಳುವ ಸ್ಕ್ರೀನ್ ಮೇಲೆ ನಿಮ್ಮ ಕಾರಿನ ಚಾಸೀ ನಂಬರ್ (ಎಂಎ3 ಬಳಿಕ 14 ಅಂಕಿಗಳು) ದಾಖಲಿಸಬೇಕಾಗುತ್ತದೆ. ಚಾಸೀ ನಂಬರ್ ವಾಹನದ ಐಡಿ ಪ್ಲೇಟ್ ಅಥವಾ ವಾಹನ ದಾಖಲಾತಿ ಪುಸಕ್ತದಿಂದ ಪಡೆಯಬಹುದಾಗಿದೆ.


Click it and Unblock the Notifications








