ಮಾರುತಿ ಎಸ್ ಕ್ರಾಸ್ ಪ್ರೀಮಿಯಾ ವಿಶೇಷ ಆವೃತ್ತಿ ಬಿಡುಗಡೆ

Written By:

ವರ್ಷಾಂತ್ಯದ ಈ ವೇಳೆಯಲ್ಲಿ ಕಳೆಗುಂದಿರುವ ತನ್ನ ನಿರ್ದಿಷ್ಟ ಕಾರಿನ ಮಾರಾಟಕ್ಕೆ ಉತ್ತೇಜನ ನೀಡಲು ಮುಂದಾಗಿರುವ ದೇಶದ ಜನಪ್ರಿತಯ ಮಾರುತಿ ಸುಜುಕಿ ಸಂಸ್ಥೆಯು ಅತಿ ನೂನತ ಎಸ್-ಕ್ರಾಸ್ ಪ್ರೀಮಿಯಾ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಮಾರುತಿ ಹೊಸದಾಗಿ ಆರಂಭಿಸಿರುವ ಪ್ರೀಮಿಯಂ ನೆಕ್ಸಾ ಶೋ ರೂಂಗಳಲ್ಲಿ ಮಾತ್ರ ಎಸ್ ಕ್ರಾಸ್ ಮಾರಾಟಕ್ಕೆ ಲಭ್ಯವಾಗಲಿದೆ. ಪ್ರಸ್ತುತ ಪ್ರೀಮಿಯಾ ಎಸ್-ಕ್ರಾಸ್ ಬೆಂಗಳೂರು, ಹೈದರಾಬಾದ್ ಮತ್ತು ಮುಂಬೈಗಳಂತಹ ದೇಶದ ಪ್ರಥಮ ದರ್ಜೆಯ ನಗರಗಳಲ್ಲಿ ಮಾತ್ರ ಮಾರಾಟಕ್ಕೆ ಲಭ್ಯವಾಗಲಿದೆ ಎಂಬುದು ತಿಳಿದು ಬಂದಿದೆ.

ಮಾರುತಿ ಎಸ್ ಕ್ರಾಸ್ ಪ್ರೀಮಿಯಾ

ನೂತನ ಎಸ್ ಕ್ರಾಸ್ ಪ್ರೀಮಿಯಾ ವಿಶೇಷ ಆವೃತ್ತಿಯು ದೆಹಲಿ ಎಕ್ಸ್ ಶೋ ರೂಂ ಪ್ರಕಾರ 8.99 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಇದು ಡೆಲ್ಟಾ ವೆರಿಯಂಟ್‌ ಜೊತೆ ಹೆಚ್ಚುವರಿ ಆಕ್ಸೆಸರಿಗಳನ್ನು ಪಡೆಯಲಿದ್ದು, ಡಿಡಿಐಎಸ್ 200 ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ.

ನಾಲ್ಕು ಪ್ರಮುಖ ಬದಲಾವಣೆಗಳನ್ನು ಎಸ್-ಕ್ರಾಸ್ ಪ್ರೀಮಿಯಾ ಗಿಟ್ಟಿಸಿಕೊಳ್ಳಲಿದೆ. ಅವುಗಳೆಂದರೆ, ಅಲಾಯ್ ವೀಲ್ಸ್, ಫಾಗ್ ಲ್ಯಾಂಪ್, ರಿವರ್ಸ್ ಪಾರ್ಕಿಂಗ್ ಅಸಿಸ್ಟ್ ಜೊತೆ ಕ್ಯಾಮೆರಾ ಮತ್ತು ಗಾರ್ಮಿನ್ 12.7 ಸೆಂಟಿಮೀಟರ್ (5 ಇಂಚುಗಳ) ನೇವಿಗೇಷನ್ ಸಿಸ್ಟಂ.

English summary
Maruti Suzuki Launches Premia Special Edition Priced At Rs. 8.99 Lakh
Story first published: Thursday, December 10, 2015, 14:16 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark