ಅತಿ ಶೀಘ್ರದಲ್ಲೇ ಹೊಸ ಸ್ವಿಫ್ಟ್ ಡಿಜೈರ್ ಬಿಡುಗಡೆ
ದೇಶದ ಅತಿ ದೊಡ್ಡ ಹಾಗೂ ಜನಪ್ರಿಯ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ಅತಿ ಶೀಘ್ರದಲ್ಲಿ ಪರಿಷ್ಕೃತ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರನ್ನು ಬಿಡುಗಡೆ ಮಾಡಲಿದೆ.
ಪ್ರತಿ ತಿಂಗಳಲ್ಲಿ ಸರಾಸರಿ 15,000ಕ್ಕೂ ಹೆಚ್ಚು ಮಾರಾಟವನ್ನು ಗಿಟ್ಟಿಸಿಕೊಳ್ಳುತ್ತಿರುವ ಸ್ವಿಫ್ಟ್ ಡಿಜೈರ್ ಕಾರಿಗೆ ಹೊಸ ಸ್ವರೂಪವನ್ನು ನೀಡಲು ಮಾರುತಿ ಮುಂದಾಗಿದೆ. ಅಷ್ಟೇ ಯಾಕೆ ಮಾರುತಿ ಡೀಲರುಗಳ ಬಳಿ ಈಗಿರುವ ಸ್ವಿಫ್ಟ್ ಡಿಜೈರ್‌ಗೆಂದು ಬುಕ್ ಮಾಡಲು ತೆರಳುವ ಗ್ರಾಹಕರಲ್ಲಿ ಹೊಸ ಡಿಜೈರ್‌ಗೆ ಖರೀದಿಸುವಂತೆಯೇ ಮನವೊಳಿಸುವ ಪ್ರಯತ್ನವು ನಡೆಯುತ್ತಿದೆ.

ಈ ಎಲ್ಲ ಬೆಳವಣಿಗೆಯನ್ನು ನೋಡಿದಾಗ ಹೊಸ ಸ್ವಿಫ್ಟ್ ಡಿಜೈರ್ ಸದ್ಯದಲ್ಲೇ ಮಾರುಕಟ್ಟೆ ಪ್ರವೇಶಿಸುವುದು ಖಚಿತವೆನಿಸಿದೆ. ಈ ಬಗ್ಗೆ ಸಂಸ್ಥೆಯಿಂದ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬರಬೇಕಾಗಿದೆ. ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಇದೇ ತಿಂಗಳಲ್ಲಿ ಹೊಸ ಡಿಜೈರ್ ರಸ್ತೆ ಪ್ರವೇಶ ಮಾಡಲಿದೆ.
ಪ್ರಮುಖವಾಗಿಯೂ ಆಧುನಿಕತೆಗೆ ತಕ್ಕಂತೆ ಕಾರಿನ ಅಂದತೆಯಲ್ಲಿ ಬದಲಾವಣೆ ತರಲಾಗುತ್ತಿದೆ. ಮುಂಭಾಗದ ನೋಟ, ಹೆಡ್‌ಲೈಟ್, ಫಾಗ್ ಲ್ಯಾಂಪ್ ಜೊಟೆಗೆ ಹೆಚ್ಚಿನ ಕ್ರೋಮ್ ಸ್ಪರ್ಶವನ್ನು ನೀಡಲಾಗುತ್ತದೆ. ಇನ್ನುಳಿದಂತೆ ಕಾರಿನೊಳಗೆ ಹೊಸತಾದ ಮನರಂಜನಾ ವ್ಯವಸ್ಥೆ ಬ್ಲೂಟೂತ್ ಪಡೆಯುವ ನಿರೀಕ್ಷೆಯಿದೆ. ಅಂತೆಯೇ ಪುಶ್ ಸ್ಟ್ಯಾರ್ಟ್/ಸ್ಟಾಪ್ ಬಟನ್, ಮಡಚಬಹುದಾದ ಹಿಂಬದಿಯ ಮಿರರ್ ಜೊತೆಗೆ ಹೆಚ್ಚಿನ ಸೌಕರ್ಯಕ್ಕೆ ಆದ್ಯತೆ ಕೊಡಲಾಗುತ್ತಿದೆ.

ಹಾಗಿದ್ದರೂ ಎಂಜಿನ್ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದು ವಿವಿಟಿ 1197 ಸಿಸಿ ಕೆ ಸಿರೀಸ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 85 ಅಶ್ವಶಕ್ತಿ (114 ಎನ್‌ಎಂ) ಟಾರ್ಕ್ ಉತ್ಪಾದಸಿಲಿದೆ. ಇದು ಐದು ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ (ಐಚ್ಛಿಕ) ಪಡೆಯಲಿದೆ.
ಪೆಟ್ರೋಲ್ ಮೈಲೇಜ್
ಮ್ಯಾನುವಲ್ ಡಿಜೈರ್ - 19.1 kpl
ಆಟೋಮ್ಯಾಟಿಕ್ ಡಿಜೈರ್ - 17.4 kpl
ಏತನ್ಮಧ್ಯೆ ಡಿಜೈರ್ 1248 ಸಿಸಿ ಡಿಡಿಐಎಸ್ ಡೀಸೆಲ್ ಎಂಜಿನ್ ಸಹ ಹೊಂದಿದ್ದು, 74 ಅಶ್ವಶಕ್ತಿ (190 ತಿರುಗುಬಲ) ಉತ್ಪಾದಿಸುತ್ತದೆ. ಡೀಸಲ್ ಎಂಜಿನ್‌ನಲ್ಲಿ ಮ್ಯಾನುವಲ್ 5 ಸ್ಪೀಡ್ ಗೇರ್ ಬಾಕ್ಸ್ ಮಾತ್ರ ಹೊಂದಿರುವ ಡಿಜೈರ್ ಪ್ರತಿ ಲೀಟರ್‌ಗೆ 23.4 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.


Click it and Unblock the Notifications