ವಜಾಗೊಳಿಸಿದ ನೌಕರರಿಗೆ ತಲಾ 1 ಲಕ್ಷ ಪಾವತಿಸಲು ಕೋರ್ಟ್ ಆದೇಶ

By Nagaraja

ಕೆಲಸದಿಂದ ತೆಗೆದು ಹಾಕಲಾದ 425ರಷ್ಟು ನೌಕರರಿಗೆ ತಲಾ ಒಂದು ಲಕ್ಷ ರುಪಾಯಿಗಳನ್ನು ಪಾವತಿಸುವಂತೆ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಸಂಸ್ಥೆಗೆ ಕಾರ್ಮಿಕ ನ್ಯಾಯಾಲಯ ಆದೇಶ ಹೊರಡಿಸಿದೆ.

2012ನೇ ಮಾನೇಸರ್ ಘಟಕದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನೀಡಿರುವ ಮಹತ್ವದ ತೀರ್ಪಿನಲ್ಲಿ ಗುರ್ಗಾಂವ್‌ನ ಕಾರ್ಮಿಕ ನ್ಯಾಯಾಲಯವು ಈ ಮಹತ್ತರ ತೀರ್ಪು ನೀಡಿದೆ.

maruti dzire

ಅಂದು ನಡೆದ ಘಟನೆಯ ಬಳಿಕ ಸಂಸ್ಥೆಯ 425 ನೌಕರರರನ್ನು ಮಾರುತಿ ಕೆಲಸದಿಂದ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಕಾರ್ಮಿಕರ ಸಂಘ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಮಹತ್ವದ ತೀರ್ಪು ನೀಡಿರುವ ನ್ಯಾಯಾಲಯವು ಪರಿಹಾರ ಮೊತ್ತವಾಗಿ ಎಲ್ಲ ನೌಕರರಿಗೆ ತಲಾ ಒಂದು ಲಕ್ಷ ನೀಡುವಂತೆ ಆದೇಶಿಸಿದೆ.

ವಜಾಗೊಂಡ ನೌಕರರಿಗೆ ಮಾನಸಿಕ ಹಿಂಸೆಯನ್ನು ನೀಡಲಾಗುತ್ತಿದೆ ಎಂಬುದನ್ನು ಕೋರ್ಟ್ ಮನಗಂಡಿದೆ. ಅಲ್ಲದೆ ನೌಕರರಿಗೆ ಪರಿಹಾರ ಮೊತ್ತ ನೀಡುವುದಕ್ಕೆ ಸಂಬಂಧಪಟ್ಟಂತೆ 4.25 ಕೋಟಿ ರು. ಠೇವಣಿ ಇಡುವಂತೆ ಆದೇಶಿಸಿದೆ. ಕೋರ್ಟ್ ಆದೇಶದ ಪ್ರಕಾರ 85,000 ರು. ನೌಕರರ ಕೈ ಸೇರಲಿದ್ದು, ಉಳಿದ 15,000 ರು.ಗಳನ್ನು ಕೋರ್ಟ್ ವೆಚ್ಚಗಳಿಗೆ ವ್ಯಯಿಸಲಾಗುವುದು.

More from DriveSpark

Article Published On: Saturday, March 7, 2015, 7:29 [IST]
English summary
A labour court in Gurgaon has passed judgement that Maruti Suzuki will have to compensate every of those employees that were stripped of their duties.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+