ಪ್ರಸಕ್ತ ಸಾಲಿನಲ್ಲೇ ಹೊಸ ಮಾರುತಿ ಇಕೊ ಎಂಟ್ರಿ

By Nagaraja

ಪ್ರಯಾಣಿಕ ಕಾರು ವಿಭಾಗಗಳಲ್ಲಿ ನಂ.1 ಸ್ಥಾನ ಕಾಪಾಡಿಕೊಂಡಿರುವ ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ನಿಧಾನವಾಗಿ ಉಪಯುಕ್ತ ವಾಹನ ವಿಭಾಗದತ್ತ ಕಣ್ಣಿಟ್ಟಿದೆ.

ಇದರ ಫಲಶ್ರುತಿಯೆಂಬಂತೆ ಕಳೆದ ಕೆಲವು ವರ್ಷಗಳಲ್ಲಿ ಮಾರುತಿ ಎರ್ಟಿಗಾ ಜೊತೆಗೆ ಇಕೊ ವಾಹನ ಪರಿಯಚವಾಗಿದೆ. ದೊಡ್ಡ ಕುಟುಂಬ ಹೊಂದಿರುವ ಮಧ್ಯಮ ವರ್ಗದ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ಮಾರುತಿ ಇಕೊ ಪರಿಚಯಿಸಲಾಗಿತ್ತು.

maruti eco

ಈಗ ಪ್ರಸಕ್ತ ಸಾಲಿನಲ್ಲಿ ಇಕೊ ಹೊಸ ಸ್ವರೂಪ ಪಡೆದುಕೊಳ್ಳಲಿದೆ. ಇಕೊ ಬೇಸ್ ವೆರಿಯಂಟ್ ಬೆಲೆ 3.36 ಲಕ್ಷ ರು.ಗಳಿಷ್ಟಿದೆ (ಎಕ್ಸ್ ಶೋ ರೂಂ ಮುಂಬೈ). ಇದು ಕೈಗೆಟುಕುವ ಬೆಲೆಗಳಳಲ್ಲಿ ಗ್ರಾಹಕರನ್ನು ತಲುಪಲು ಸಾಧ್ಯವಾಗಿತ್ತು. ಅದೇ ರೀತಿ ಟಾಪ್ ಎಂಡ್ ವೆರಿಯಂಟ್ 4.43 ಲಕ್ಷ ರು.ಗಳಷ್ಟು (ಎಕ್ಸ್ ಶೋ ರೂಂ ಮುಂಬೈ) ದುಬಾರಿಯೆನಿಸಿದೆ.

ವಾಣಿಜ್ಯ ಜೊತೆಗೆ ವೈಯಕ್ತಿಕ ಬಳಕೆಗಾಗಿ ಇಕೊ ವಾಹನವನ್ನು ಬಳಕೆ ಮಾಡಲಾಗುತ್ತದೆ. ಇದರ 1.2 ಲೀಟರ್ ಪೆಟ್ರೋಲ್ ಎಂಜಿನ್ 73 ಅಶ್ವಶಕ್ತಿ ಉತ್ಪಾದಿಸುವ (101 ಎನ್‌ಎಂ ಟಾರ್ಕ್) ಸಾಮರ್ಥ್ಯ ಹೊಂದಿದೆ. ಅಂತೆಯೇ ಸಿಎನ್‌ಜಿ ವೆರಿಯಂಟ್‌ನಲ್ಲೂ ಲಭ್ಯವಿರುತ್ತದೆ.

ಇನ್ನು 2015 ಇಕೊ ವಿನ್ಯಾಸದಲ್ಲಿ ಗಮನಾರ್ಹ ಬದಲಾವಣೆ ಕಂಡುಬರುವ ಸಾಧ್ಯತೆಯಿದೆ. ಒಟ್ಟಾರೆ ಹೊರಮೈ ವಿನ್ಯಾಸದಲ್ಲಿ ಹೆಚ್ಚು ಆಕರ್ಷಣೆ ತರಲಾಗುವುದು. ಇನ್ನು ಟಾಪ್ ಎಂಡ್ ವೆರಿಯಂಟ್‌ನಲ್ಲಿ ಎಸಿ ಸೌಲಭ್ಯವೂ ಇಲ್ಲಿದೆ. ಅಂತೆಯೇ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕೊಡಲಾಗುವುದು.

ಗ್ರಾಹಕರಿಗೆ ಹಣಕ್ಕೆ ತಕ್ಕ ಮೌಲ್ಯ ಕೊಡುವುದು ಇಕೊ ಗುರಿಯಾಗಿದೆ. ಒಟ್ಟಿನಲ್ಲಿ 2015 ವರ್ಷಾಂತ್ಯದೊಳಗೆ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.

More from DriveSpark

Article Published On: Saturday, January 31, 2015, 10:35 [IST]
English summary
Japanese automobile giant, Maruti Suzuki has had a successful year in India during 2014. They plan to continue the momentum into 2015 by launching new products and refreshing most of the products in their portfolio.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+