2016 ಆಟೋ ಎಕ್ಸ್‌ಪೋದಲ್ಲಿ ಮಾರುತಿ ವಿಟಾರಾ ಮಿನಿ ಎಸ್‌ಯುವಿ ಎಂಟ್ರಿ

By Nagaraja

ಭಾರತದ ಅತಿ ಜನಪ್ರಿಯ ಹಾಗೂ ನಂ.1 ಪ್ರಯಾಣಿಕ ಕಾರು ಸಂಸ್ಥೆ ಆಗಿರುವ ಮಾರುತಿ ಸುಜುಕಿ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ಬಹುನಿರೀಕ್ಷಿತ 2016 ಆಟೋ ಎಕ್ಸ್ ಪೋದಲ್ಲಿ ಮಗದೊಂದು ಆಕರ್ಷಕ ಕಾರನ್ನು ಪರಿಚಯಿಸಲಿದೆ.

Also Read: ಮಾರುತಿ ಬಲೆನೊ ಭರ್ಜರಿ ಬಿಡುಗಡೆ

ಈಗಾಗಲೇ ಸುದ್ದಿಯಲ್ಲಿರುವ ಮಾರುತಿ ವಿಟಾರಾ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವು (ಎಸ್‌ಯುವಿ) ಹೊಸ ವರ್ಷದಲ್ಲಿ ಭಾರತಕ್ಕೆ ಭರ್ಜರಿ ಪಾದಾರ್ಪಣೆ ಮಾಡಲಿದೆ. ತದಾ ಬಳಿಕ ಬಿಡುಗಡೆ ಭಾಗ್ಯವನ್ನು ಕಾಣಲಿದೆ. ಪ್ರಸ್ತುತ ಕಾರು 2015 ಟೋಕಿಯೋ ಮೋಟಾರು ಶೋದಲ್ಲಿ ಭರ್ಜರಿ ಪ್ರದರ್ಶನವನ್ನು ಕಂಡಿರುವುದು ಗಮನಾರ್ಹವೆನಿಸಿದೆ.

ಪ್ರತಿಸ್ಪರ್ಧಿ

ಪ್ರತಿಸ್ಪರ್ಧಿ

ಪ್ರಮುಖವಾಗಿಯೂ ಹ್ಯುಂಡೈ ಕ್ರೆಟಾ, ರೆನೊ ಡಸ್ಟರ್ ಮತ್ತು ಇನ್ನಷ್ಟೇ ಆಗಮನವಾಗಲಿರುವ ಹೋಂಡಾ ಬಿಆರ್-ವಿ ಮಾದರಿಗಳಿಗೆ ನೂತನ ವಿಟಾರಾ ಪ್ರತಿಸ್ಪರ್ಧಿಯಾಗಲಿದೆ.

ಉಪಯುಕ್ತ ವಾಹನ

ಉಪಯುಕ್ತ ವಾಹನ

ಈಗಷ್ಟೇ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಮತ್ತು ಎಸ್-ಕ್ರಾಸೋವರ್ ಮಾದರಿಗಳನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಿರುವ ಮಾರುತಿ ನಿಧಾನವಾಗಿ ಉಪಯುಕ್ತ ವಾಹನ ವಿಭಾಗದಲ್ಲೂ ತನ್ನ ಸಾನಿಧ್ಯವನ್ನು ಭದ್ರವಾಗಿಸುತ್ತದೆ.

ಮಿನಿ ಎಸ್‌ಯುವಿ

ಮಿನಿ ಎಸ್‌ಯುವಿ

ಸಣ್ಣ ಕಾರುಗಳಿಂದ ನಿಧಾನವಾಗಿ ಎಲ್ಲ ಕಾರು ವಿಭಾಗದಲ್ಲೂ ತನ್ನ ಸಾನಿಧ್ಯ ವ್ಯಕ್ತಪಡಿಸಿರುತ್ತಿರುವ ಮಾರುತಿಯ ಹೊಸ ನೀತಿಗೆ ವಿಟಾರಾ ಹೊಸ ಪ್ರವೇಶವಾಗಲಿದೆ. ಇದು ದೇಶದಲ್ಲಿ ಅತಿ ಹೆಚ್ಚು ಬೇಡಿಕೆಯಿರುವ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ಗುರುತಿಸಿಕೊಳ್ಳಲಿದೆ.

ಕಾನ್ಸೆಪ್ಟ್

ಕಾನ್ಸೆಪ್ಟ್

10 ಲಕ್ಷ ರು.ಗಳ ಬೆಲೆ ಪರಿಧಿಯೊಳಗೆ ಬಿಡುಗಡೆಯಾಗಲಿರುವ ವಿಟಾರಾ, 2014 ಪ್ಯಾರಿಸ್ ಮೋಟಾರು ಶೋದಲ್ಲಿ ಪಾದಾರ್ಪಣೆ ಮಾಡಿರುವ ಐವಿ-4 ಕಾನ್ಸೆಪ್ಟ್ ಮಾದರಿಗೆ ಸಾಮ್ಯತೆಯನ್ನು ಪಡೆದುಕೊಂಡಿದೆ. ಹಾಗಿದ್ದರೂ ವಿಟಾರಾ ಮಾದರಿಯು 2013 ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ಮಾರುತಿ ಎಕ್ಸ್‌ಎ ಆಲ್ಪಾ ಕಾನ್ಸೆಪ್ಟ್ ಮಾದರಿಯ ತಳಹದಿಯಲ್ಲಿ ನಿರ್ಮಾಣವಾಗಲಿದೆ.

ಬೆಲೆ ಪರಿಧಿ

ಬೆಲೆ ಪರಿಧಿ

ನಾಲ್ಕು ಮೀಟರ್ ಉದ್ದ ಪರಿಧಿಯೊಳಗೆ ವಿಟಾರಾ ಬಿಡುಗಡೆ ಮಾಡುವ ಮೂಲಕ ಸರಕಾರದ ತೆರಿಗೆ ವಿನಾಯಿತಿ ಜೊತೆಗೆ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳುವುದು ಸಂಸ್ಥೆಯ ಇರಾದೆಯಾಗಿದೆ. ಆದರೆ ಕ್ರೆಟಾ ಯಶಸ್ಸಿನಿಂದ ಆಕರ್ಷಿತವಾಗಿರುವ ಸಂಸ್ಥೆಯು ನಾಲ್ಕು ಮೀಟರ್ ಮೀರಿದರೂ ಪರವಾಗಿಲ್ಲವೆಂಬಂತೆ ಅತ್ಯುತ್ತಮ ಕಾರನ್ನು ಕೊಡುಗೆಯಾಗಿ ನೀಡುವ ಇರಾದೆಯಲ್ಲಿದೆ.

ಎಂಜಿನ್

ಎಂಜಿನ್

ಇನ್ನು ಎಂಜಿನ್ ಬಗ್ಗೆ ಮಾತನಾಡುವುದಾದ್ದಲ್ಲಿ ಹೊಸ ವಿಟಾರಾ ಡೀಸೆಲ್ ಹಾಗೂ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ 1.4 ಲೀಟರ್ ವಿವಿಟಿ ಪೆಟ್ರೋಲ್ ಹಾಗೂ 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಹಾಗೂ 1.6 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಇದರಲ್ಲಿರಲಿದೆ.

ಇವನ್ನೂ ಓದಿ

ಬಲೆನೊ ಭಲ್ಲೇ..ಭಲ್ಲೇ; 2 ದಿನಗಳಲ್ಲಿ 4500 ಬುಕ್ಕಿಂಗ್ಸ್ ಮುಂದಕ್ಕೆ ಓದಿ

Article Published On: Wednesday, November 4, 2015, 12:13 [IST]
English summary
Maruti Suzuki Vitara compact SUV to be unveiled at 2016 Auto Expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+