ಅತಿ ಶೀಘ್ರದಲ್ಲಿ ಮಾರುತಿ ಪ್ರೀಮಿಯಂ ಹ್ಯಾಚ್ ಬ್ಯಾಕ್ 'ಬಲೆನೊ' ಬಿಡುಗಡೆ

By Nagaraja

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಅತಿ ಶೀಘ್ರದಲ್ಲೇ ಮಗದೊಂದು ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರನ್ನು ಬಿಡುಗಡೆ ಮಾಡಲಿದೆ. ನೂತನ ವೈಆರ್‌ಎ ತಳಹದಿಯಲ್ಲಿ ನಿರ್ಮಾಣವಾಗಿರುವ ಕಾರು 'ಬಲೆನೊ' (Baleno) ಎಂಬ ನಾಮಕರಣ ಪಡೆದುಕೊಂಡಿದೆ.

ಪ್ರೀಮಿಯಂ ಕಾರುಗಳನ್ನು ಮಾರಾಟ ಮಾಡಲು ನೆಕ್ಸಾ ಶೋ ರೂಂಗಳನ್ನು ದೇಶದ್ಯಾಂತ ತೆರೆದುಕೊಂಡಿರುವ ಬೆನ್ನಲ್ಲೇ ಎಸ್-ಕ್ರಾಸ್ ಕ್ರಾಸೋವರ್ ಕಾರನ್ನು ಬಿಡುಗಡೆಗೊಳಿಸಿದ್ದ ಮಾರುತಿ, ಈಗ ಮಗದೊಂದು ದೊಡ್ಡ ಲಾಂಚ್‌ಗೆ ಸಿದ್ಧವಾಗುತ್ತಿದೆ.

ಅತಿ ಶೀಘ್ರದಲ್ಲಿ ಮಾರುತಿ ಪ್ರೀಮಿಯಂ ಹ್ಯಾಚ್ ಬ್ಯಾಕ್ 'ಬಲೆನೊ' ಬಿಡುಗಡೆ

ಮಾರುತಿಯ ಹ್ಯಾಚ್ ಬ್ಯಾಕ್ ಬಲೆನೊ ಸಹ ಪ್ರೀಮಿಯಂ ನೆಕ್ಸಾ ಶೋ ರೂಂಗಳಲ್ಲಿ ಮಾರಾಟವಾಗಲಿದೆ. ಅಲ್ಲದೆ ಮುಂಬರುವ ದೀಪಾವಳಿ ಹಬ್ಬದ ಆವೃತ್ತಿಯ ವೇಳೆ ಬಿಡುಗಡೆಯಾಗುವುದು ಬಹುತೇಕ ಖಚಿತವೆನಿಸಿದೆ.

ಅತಿ ಶೀಘ್ರದಲ್ಲಿ ಮಾರುತಿ ಪ್ರೀಮಿಯಂ ಹ್ಯಾಚ್ ಬ್ಯಾಕ್ 'ಬಲೆನೊ' ಬಿಡುಗಡೆ

ಇದಕ್ಕೂ ಮೊದಲು ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ 66ನೇ ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲಿ ಮಾರುತಿ ಬಲೆನೊ ಭರ್ಜರಿ ಪ್ರದರ್ಶನ ಕಾಣಲಿದೆ. ಹಾಗಿದ್ದರೂ ಇವೆಲ್ಲವನ್ನೂ ಮಾರುತಿ ಸಂಸ್ಥೆಯು ಇನ್ನಷ್ಟೇ ಖಚಿತಪಡಿಸಬೇಕಾಗಿದೆ.

ಅತಿ ಶೀಘ್ರದಲ್ಲಿ ಮಾರುತಿ ಪ್ರೀಮಿಯಂ ಹ್ಯಾಚ್ ಬ್ಯಾಕ್ 'ಬಲೆನೊ' ಬಿಡುಗಡೆ

ಬಲ್ಲ ಮೂಲಗಳ ಪ್ರಕಾರ ಮಾರುತಿ ಬಲೆನೊ ಪೆಟ್ರೋಲ್ ಜೊತೆ ಡೀಸೆಲ್ ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ಇವೆರಡು ಅನುಕ್ರಮವಾಗಿ 2.0 ಲೀಟರ್ 3 ಸಿಲಿಂಡರ್ ಪೆಟ್ರೋಲ್ ಮತ್ತು 1.3 ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಯಿದೆ.

ಅತಿ ಶೀಘ್ರದಲ್ಲಿ ಮಾರುತಿ ಪ್ರೀಮಿಯಂ ಹ್ಯಾಚ್ ಬ್ಯಾಕ್ 'ಬಲೆನೊ' ಬಿಡುಗಡೆ

ಸಣ್ಣ ಕಾರು ವಿಭಾಗದಲ್ಲಿ ತನ್ನ ಅಧಿಪತ್ಯ ಸಾಧಿಸಿರುವ ಮಾರುತಿ ಈಗ ಪ್ರೀಮಿಯಂ ವಿಭಾಗದಲ್ಲೂ ತನ್ನ ಸಾಮರ್ಥ್ಯ ತೋರ್ಪಡಿಸಲು ಹೊರಟಿದೆ. ನಂಬಿಕೆಗ್ರಸ್ತ ಸಂಸ್ಥೆ ಎಂಬ ಪಟ್ಟ ಕಟ್ಟಿಕೊಂಡಿರುವ ಮಾರುತಿ ಪ್ರೀಮಿಯಂ ಗ್ರಾಹಕರನ್ನು ಹೇಗೆ ಮನಸೆಳೆಯಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಅತಿ ಶೀಘ್ರದಲ್ಲಿ ಮಾರುತಿ ಪ್ರೀಮಿಯಂ ಹ್ಯಾಚ್ ಬ್ಯಾಕ್ 'ಬಲೆನೊ' ಬಿಡುಗಡೆ

ಒಟ್ಟಿನಲ್ಲಿ ಮಾರುತಿ ಬಲೆನೊ ಆಗಮನದೊಂದಿಗೆ ಹ್ಯುಂಡೈ ಎಲೈಟ್ ಐ20 ಮತ್ತು ಈಗಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ಹೋಂಡಾ ಜಾಝ್ ಪ್ರಬಲ ಪೈಪೋಟಿಯನ್ನು ಎದುರಿಸಲಿದೆ ಎಂಬುದಂತೂ ಸ್ಪಷ್ಟ.


Article Published On: Saturday, August 8, 2015, 10:33 [IST]
English summary
Maruti Suzuki YRA Premium Hatchback To Be Sold As Baleno
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+