ಪ್ರೇಮಿಗಳ ದಿನಾಚರಣೆಗೆ ಮುಂಚಿತವಾಗಿ ಬೆಂಝ್ ಕೊಡುಗೆ

By Nagaraja

ಈ ಬಾರಿ ಪ್ರೇಮಿಗಳ ದಿನಾಚರಣೆಗೂ ಮುಂಚಿತವಾಗಿ ಜರ್ಮನಿಯ ಐಷಾರಾಮಿ ಕಾರು ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್ ಹೊಸ ಕೊಡುಗೆಯೊಂದಿಗೆ ಮುಂದೆ ಬರುತ್ತಿದೆ. ಹೌದು ದೇಶಕ್ಕೆ 15 ಹೊಸ ಮಾದರಿಗಳನ್ನು ಪರಿಚಯಿಸುವುದಾಗಿ ತಿಳಿಸಿರುವ ಬೆಂಝ್ ಸಂಸ್ಥೆಯೀಗ ಹೊಸತಾದ ಸಿ ಕ್ಲಾಸ್ ಡೀಸೆಲ್ ವೆರಿಯಂಟ್ ಅನ್ನು ಬಿಡುಗಡೆ ಮಾಡುತ್ತಿದೆ.

ಬೆಂಝ್ ಹೊಸ ಸಿ ಕ್ಲಾಸ್ ಡೀಸೆಲ್ ವೆರಿಯಂಟ್ ಫೆಬ್ರವರಿ 11ರಂದು ಬಿಡುಗಡೆಯಾಗಲಿದೆ. ನಿಮ್ಮ ಮಾಹಿತಿಗಾಗಿ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಸಿ ಕ್ಲಾಸ್ ಭಾರತ ಎಂಟ್ರಿ ಪಡೆದಿತ್ತು. ಬಿಡುಗಡೆ ವೇಳೆ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಾಗಿದ್ದ ಕಾರೀಗ ಡೀಸೆಲ್ ವರ್ಷನ್‌ಗೂ ಪಾದಾರ್ಪಣೆಯಾಗುತ್ತಿದೆ.

c class

ಬೆಂಝ್ ಸಿ ಕ್ಲಾಸ್ ಕಾರಿನಡಿಯಲ್ಲಿ 2.2. ಲೀಟರ್ ಡೀಸೆಲ್ ಎಂಜಿನ್ ಇರಲಿದ್ದು, 170 ಅಶ್ವಶಕ್ತಿ (400 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ ಸಂಸ್ಥೆಯ ಜನಪ್ರಿಯ 7 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ (7ಜಿ-ಟ್ರಾನಿಕ್) ಇರಲಿದೆ.

ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ದೇಶವನ್ನು ತಲುಪುತ್ತಿರುವ ಸಿ ಕ್ಲಾಸ್ ಡೀಸೆಲ್ ಕಾರು ಮುಂಬರುವ ದಿನಗಳಲ್ಲಿ ಸ್ಥಳೀಯವಾಗಿ ಜೋಡಣೆಯಾಗಲಿದ್ದು, ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಲಿದೆ.

c class

ಪ್ರಸ್ತುತ ಕಾರು ಆಡಿ ಹಾಗೂ ಬಿಎಂಡಬ್ಲ್ಯುನ ಎ4 ಹಾಗೂ 3 ಸಿರೀಸ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಅಂದ ಹಾಗೆ ಸಿ ಕ್ಲಾಸ್ ಪೆಟ್ರೋಲ್ ಮಾದರಿಯ ಬೆಲೆ 40,90 ಲಕ್ಷ ರು.ಗಳಾಗಿದ್ದು (ಎಕ್ಸ್ ಶೋ ರೂಂ ದೆಹಲಿ), ಈಗ ಬರಲಿರುವ ಡೀಸೆಲ್ ಮಾದರಿಯು ಇದಕ್ಕಿಂತಲೂ ಸ್ವಲ್ಪ ದುಬಾರಿಯೆನಿಸಲಿದೆ.

More from DriveSpark

Article Published On: Wednesday, February 4, 2015, 12:09 [IST]
English summary
German luxury car manufacturer Mercedes-Benz, had promised it would launch 15 new products for Indian market. So far, they have launched their CLA-Class in India on 22nd of January, 2015. They have now decided to launch another of their premium cars in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+