ಬೆಂಝ್‌ ಐಷಾರಾಮಿ ಕಾರುಗಳಿಗೆ ಹೆಚ್ಚಿದ ಬೇಡಿಕೆ

Written By:

ಭಾರತದಲ್ಲಿ ಐಷಾರಾಮಿ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಪುಷ್ಠಿ ನೀಡುವಂತೆಯೇ ಜರ್ಮನಿಯ ಪ್ರೀಮಿಯಂ ವಾಹನ ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ಇತಿಹಾಸದಲ್ಲೇ ಮೊದಲ ಬಾರಿಗೆ ದೇಶದಲ್ಲಿ ದಾಖಲೆ ಸಂಖ್ಯೆಯ ಮಾರಾಟ ದಾಖಲಿಸಿಕೊಂಡಿದೆ.

2014ನೇ ವರ್ಷವನ್ನು ದೇಶದಲ್ಲಿ 'ಇಯರ್ ಆಫ್ ಎಕ್ಸ್‌ಲೆನ್ಸ್' ಎಂದು ಆಚರಿಸಿಕೊಂಡಿದ್ದ ಬೆಂಝ್, ಮಾರಾಟದಲ್ಲೂ ಭಾರಿ ಏರಿಕೆ ಸಾಧಿಸಿತ್ತು. ಇದೀಗ ಬಂದಿರುವ ಸೇಲ್ಸ್ ವರದಿಯ ಪ್ರಕಾರ ಬೆಂಝ್ ಸಂಸ್ಥೆಯು 2014 ಡಿಸೆಂಬರ್ ತಿಂಗಳಲ್ಲಿ ಒಟ್ಟು 10,201 ಯುನಿಟ್‌ಗಳ ಮಾರಾಟ ದಾಖಲಿಸಿದೆ.

mercedes benz

2013ನೇ ಸಾಲಿನ ಇದೇ ಅವಧಿಯಲ್ಲಿ ಈ ಸಂಖ್ಯೆಯು 9,003 ಯುನಿಟ್‌ಗಳಾಗಿತ್ತು. ಈ ಮೂಲಕ ಶೇಕಡಾ 13ರಷ್ಟು ಮಾರಾಟ ಏರುಗುತಿ ಸಾಧಿಸುವಲ್ಲಿ ಯಶ ಕಂಡಿದೆ.

ಈ ಎಲ್ಲದರ ಮೂಲಕ ಸತತವಾಗಿ ಎರಡನೇ ವರ್ಷವೂ ಎರಡಂಕಿಯ ವೃದ್ಧಿ ದಾಖಲಿಸುವಲ್ಲಿ ಬೆಂಝ್ ಯಶಸ್ವಿಯಾಗಿದೆ. ಇದಕ್ಕಾಗಿ ಗ್ರಾಹಕರಿಗೆ ಬೆಂಝ್ ಆಡಳಿತ ವರ್ಗ ಕೃತಜ್ಞತೆ ಸಲ್ಲಿಸಿದೆ.

2014ನೇ ಸಾಲಿನಲ್ಲಿ ಸಂಸ್ಥೆಯು 10 ಹೊಸ ಮಾದರಿಗಳನ್ನು ಪರಿಚಯಿಸಿತ್ತಲ್ಲದೆ ಮಾರಾಟ ವೃದ್ಧಿಗಾಗಿ 14 ಹೊ ಔಟ್ಲೆಟ್‌ಗಳನ್ನು ತೆರೆದುಕೊಂಡಿತ್ತು.

English summary
Mercedes-Benz India today announced its strongest sales year in the company's history in India by posting 10,201 units of sales
Story first published: Monday, January 5, 2015, 10:01 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark