ಸಿಇಎಸ್ 2015ರಲ್ಲಿ ಬೆಂಝ್ ಸ್ವಯಂ ಚಾಲಿತ ಕಾನ್ಸೆಪ್ಟ್

Written By:

ಲಾಸ್ ವೇಗಾಸ್‌ನಲ್ಲಿ ನಡೆಯಲಿರುವ 'ವಾರ್ಷಿಕ ಕನ್ಸೂಮರ್ ಎಲೆಕ್ಟ್ರಾನಿಕ್ ಶೋ 2015'ರಲ್ಲಿ ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್, ನೂತನ ಸ್ವಯಂ ಚಾಲಿತ ಕಾನ್ಸೆಪ್ಟ್ ಅನಾವರಣಗೊಳಿಸಲಿದೆ.

ಈ ಸಂಬಂಧ ಚಿತ್ರವೊಂದನ್ನು ಸಂಸ್ಥೆಯು ಬಿಡುಗಡೆ ಮಾಡಿರುವುದು ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಕುತೂಹಲ ಮನೆ ಮಾಡಲು ಕಾರಣವಾಗಿದೆ.

mercedes benz

ನಮ್ಮ ಮೊದಲ ನೋಟಕ್ಕೆ ಗೋಚರಿಸುತ್ತಿರುವಂತೆಯೇ ಇದು ಏರೋಡೈನಾಮಿಕ್ ವಿನ್ಯಾಸವನ್ನು ಪಡೆದುಕೊಂಡಿದೆ. ಈ ವಿದ್ಯುತ್ ಚಾಲಿತ ಕಾರು ಮೊಟ್ಟೆಯಿಂದ ಸ್ಪೂರ್ತಿ ಪಡೆದು ವಿನ್ಯಾಸ ಪಡೆದುಕೊಂಡಿದೆ.

ಸ್ವಯಂ ಚಾಲಿತ ಕಾರುಗಳನ್ನು ಭವಿಷ್ಯದ ಸಂಚಾರ ವಾಹಕಗಳೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ಇದನ್ನು ಬೆಂಝ್‌ನ ಎಸ್500 ಇಂಟೆಲಿಜೆಟ್ ಡ್ರೈವ್ ಸಿಸ್ಟಂನಲ್ಲಿ ಅಭಿವೃದ್ಧಿಪಡಿಸುವ ಸಾಧ್ಯತೆಯಿದೆ. ಪ್ರಸ್ತುತ ವ್ಯವಸ್ಥೆಯು 360 ಡಿಗ್ರಿ ಸ್ಟೀರಿಯೋಸ್ಕಾಪಿಕ್ ಕ್ಯಾಮೆರಾ ಮುಂತಾದ ವೈಶಿಷ್ಟ್ಯಗಳನ್ನು ಪಡೆಯಲಿದೆ.

2014ನೇ ಸಾಲಿನಲ್ಲೇ ಇದಕ್ಕೆ ಸಮಾನವಾದ ತಂತ್ರಗಾರಿಕೆಯನ್ನು ಬೆಂಝ್ ಪರಿಚಯಿಸಿತ್ತು. ಬೆಂಝ್‌ನ ಭವಿಷ್ಯದ ಟ್ರಕ್ ಜರ್ಮನಿಯ ಹೆಸರಾಂತ ಆಟೋಬಾನ್ ರಸ್ತೆಯಲ್ಲಿ ಸಂಚರಿಸುವುದು ಹೆಚ್ಚು ಸುದ್ದಿಗೆ ಕಾರಣವಾಗಿತ್ತು.

English summary
German luxury car manufacturer Mercedes-Benz is always coming with new technology to implement in its vehicles. They are at the front runners when it comes to creature comfort in their vehicles.
Story first published: Saturday, January 3, 2015, 9:41 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark