ಮಹಿಳೆಯರಿಂದ ಮಹಿಳೆಯರಿಗಾಗಿ ಮೆರು ಈವ್ ಕ್ಯಾಬ್ ಸೇವೆ

By Nagaraja

ದೇಶದಲ್ಲೇ ಮೊದಲ ಬಾರಿಗೆ ಕೇರಳದ ಕೊಚ್ಚಿಯಲ್ಲಿ ಮಹಿಳೆಯರಿಂದ ಮಹಿಳೆಯರಿಗಾಗಿ 'ಶೀ ಟ್ಯಾಕ್ಸಿ' ಸೇವೆಯನ್ನು ಆರಂಭಿಸಲಾಗಿತ್ತು. ಇನ್ನೊಂದೆಡೆ ಮಹಿಳೆಯರ ಸುರಕ್ಷತೆ ಪ್ರಯಾಣದ ಬಗ್ಗೆ ಆಂತಕಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಶಿ ಟ್ಯಾಕ್ಸಿ ಮಾದರಿಯ ಟ್ಯಾಕ್ಸಿ ಸೇವೆಗಳು ಹೆಚ್ಚೆಚ್ಚು ಜನಪ್ರಿಯವಾಗತೊಡಗಿದೆ.

ಇದರಂತೆ ದೇಶದ ಜನಪ್ರಿಯ ಟ್ಯಾಕ್ಸಿ ಸೇವೆ ಸಂಸ್ಥೆಯಾಗಿರುವ ಮೆರು, ರಾಷ್ಟ್ರ ರಾಜಧಾನಿಯಲ್ಲಿ 'ಈವ್' ಎನ್ನುವ ಮಹಿಳೆಯರಿಂದ ಮಹಿಳೆಯರಿಗಾಗಿ ಕ್ಯಾಬ್ ಸೇವೆಯನ್ನು ಆರಂಭಿಸಿದೆ.

ಇದರ ವೈಶಿಷ್ಟ್ಯವೆಂದರೆ ಮಹಿಳೆಯರೇ ಚಾಲಕಿಯರಾಗಿರುವ ಈವ್ ಕ್ಯಾಬ್ ಸೇವೆಯಲ್ಲಿ ಮಹಿಳಾ ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸುವ ಅವಕಾಶವಿರುತ್ತದೆ. ಇದಕ್ಕಾಗಿ 20 ಮಹಿಳಾ ಚಾಲಕರಿಯನ್ನು ಮೆರು ನೇಮಕಗೊಳಿಸಿದೆ.

meru eve cab

ಇಂತಹ ಮಹಿಳಾ ಚಾಲಕಿಯರಿಗೆ ದೆಹಲಿ ಪೊಲೀಸ್ ಸ್ವಯಂ ರಕ್ಷಣಾ ತರಬೇತಿಯನ್ನು ನೀಡಲಿದ್ದಾರೆ. ಇದು ಉಬೆರ್ ಕ್ಯಾಬ್‌ನಲ್ಲಿ ನಡೆದಂತಹ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ನೆರವಾಗಲಿದೆ.

ಇನ್ನು ಹೆಚ್ಚಿನ ಸುರಕ್ಷತೆಗಾಗಿ ವೀಡಿಯೋ ಕ್ಯಾಮೆರಾಗಳನ್ನು ಇದರಲ್ಲಿ ಆಳವಡಿಸಲಾಗುವುದು. ಹಾಗೆಯೇ ಗುಲಾಬಿ ವಸ್ತ್ರಗಳನ್ನು ತೊಟ್ಟ ಚಾಲಕಿಯರಿಗೆ 3ಜಿ ಸೇವೆ ಲಭ್ಯವಿರುವ ಮೊಬೈಲ್‌ಗಳನ್ನು ನೀಡಲಾಗುತ್ತದೆ.

ಆದರೆ ದರದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಈಗಿರುವ ಮೊಬೈಲ್ ಆಪ್ ಸರ್ವಿಸ್ ಮುಖಾಂತರ ಗ್ರಾಹಕರು ಬುಕ್ ಮಾಡಿಕೊಳ್ಳಬಹುದಾಗಿದೆ. ಪ್ರಸ್ತುತ ರಾಷ್ಟ್ರ ರಾಜಧಾನಿಯಲ್ಲಿ ಮಾತ್ರ ಆರಂಭವಾಗಿರುವ ಮೆರು ಈವ್ ಕ್ಯಾಬ್ ಸೇವೆಯು ಸದ್ಯದಲ್ಲೇ ದೇಶದ ಇತರ ಪ್ರಮುಖ ನಗರಗಳನ್ನು ತಲುಪುವ ನಿರೀಕ್ಷೆಯಿದೆ.

More from DriveSpark

Article Published On: Thursday, January 22, 2015, 11:43 [IST]
English summary
Meru is by far the most popular cab service in several major cities of India. As a positive step forward they have launched a new service. They have named it as Meru Eve cabs which, will be available only to women and will also be driven by women.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+