2016ರಲ್ಲಿ ಹೋಂಡಾ ಅಕಾರ್ಡ್ ಹೈಬ್ರಿಡ್ ಬಿಡುಗಡೆ ಸಾಧ್ಯತೆ

By Nagaraja

ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ 2016 ಮಧ್ಯಂತರ ಅವಧಿಯಲ್ಲಿ ಎಲ್ಲ ಹೊಸತನದಿಂದ ಕೂಡಿರುವ ಅಕಾರ್ಡ್ ಕಾರನ್ನು ಭಾರತ ಮಾರುಕಟ್ಟಯಲ್ಲಿ ಬಿಡುಗಡೆ ಮಾಡಲಿದೆ.

ಈ ಮೂಲಕ ಭಾರತ ಮಾರುಕಟ್ಟೆಯಲ್ಲಿ ಮಾರಾಟವನ್ನು ಕುದುರಿಸಿಕೊಳ್ಳುವ ಇರಾದೆಯನ್ನು ಸಂಸ್ಥೆ ಹೊಂದಿದೆ. ವರದಿಗಳ ಪ್ರಕಾರ 2016 ಆಟೋ ಎಕ್ಸ್ ಪೋದಲ್ಲಿ ಹೊಸ ಅಕಾರ್ಡ್ ಪ್ರದರ್ಶನ ಕಾಣಲಿದ್ದು, ತದಾ ಬಳಿಕ ಬಿಡುಗಡೆ ಭಾಗ್ಯ ಕಾಣಲಿದೆ.

ಹೋಂಡಾ ಅಕಾರ್ಡ್

ಭಾರತದಲ್ಲಿ ಟ್ವಿನ್ ಎಂಜಿನ್ ಆಯ್ಕೆಯೊಂದಿಗೆ ಅಕಾರ್ಡ್ ಲಭ್ಯವಾಗುವ ಸಾಧ್ಯತೆಯಿದೆ. ಅಂದರೆ 2.4 ಲೀಟರ್ ಪೆಟ್ರೋಲ್ ಜೊತೆಗೆ ಹೈಬ್ರಿಡ್ ಎಂಜಿನ್ ಆಯ್ಕೆಯೂ ಇದರಲ್ಲಿರಲಿದೆ.

ಈ ಹಿಂದೆ 2013ರಲ್ಲಿ ಕಳಪೆ ಮಾರಾಟದ ಹಿನ್ನೆಲೆಯಲ್ಲಿ 2013 ಅಕಾರ್ಡ್ ಕಾರನ್ನು ಹಿಂಪಡೆಯಲಾಗಿತ್ತು. ಅಲ್ಲದೆ ಅಮೇಜ್, ಸಿಟಿ, ಮೊಬಲಿಯೊಗಳಂತಹ ಹೊಸ ಮಾದರಿಗಳತ್ತ ಹೆಚ್ಚಿನ ಗಮನ ಕೇಂದ್ರಿಕರಿಸಿತ್ತು.

ನಿಮ್ಮ ಮಾಹಿತಿಗಾಗಿ ಅತಿ ಶೀಘ್ರದಲ್ಲೇ ಪ್ರೀಮಿಯಂ ಜಾಝ್ ಕಾರು ಭಾರತ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿದೆ. ಇನ್ನು ಸದ್ಯಕ್ಕೆ 2016 ಹೋಂಡಾ ಅಕಾರ್ಡ್ ಬಗ್ಗೆ ಹೆಚ್ಚಿನ ಮಾಹಿತಿಗಳು ಹೊರಬಂದಿಲ್ಲ. ಬಿಡುಗಡೆ ವೇಳೆ ಮತ್ತಷ್ಟು ಮಾಹಿತಗಳು ಲಭ್ಯವಾಗಲಿದೆ.

Most Read Articles

Kannada
Read more on ಹೋಂಡಾ honda
English summary
Japanese automobile manufacturer is set on launching a variety of products in India. Honda has planned on improving their sales in India by offering more products in the market.
Story first published: Saturday, May 30, 2015, 14:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X