ಹೊಸ ರೇಂಜ್ ರೋವರ್ ಇವೋಕ್ ಅನಾವರಣ
ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆ ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ರೇಂಜ್ ರೋವರ್ ನೂತನ ಫೇಸ್‌ಲಿಫ್ಟ್ ಇವೋಕ್ ಮಾದರಿಯನ್ನು ಅನಾವರಣಗೊಳಿಸಿದೆ.
2015 ಮಾರ್ಚ್ ತಿಂಗಳಲ್ಲಿ ಆರಂಭವಾಗಲಿರುವ ಜಿನೆವಾ ಮೋಟಾರು ಶೋಗಿಂತಲೂ ಮುಂಚಿತವಾಗಿ ಹೊಸ ರೇಂಜ್ ರೋವರ್ ಇವೋಕ್ ಪ್ರದರ್ಶನ ಕಂಡಿದೆ.

ಹೊಸ ಮಾದರಿಯು ಸ್ಟೈಲಿಂಗ್‌ನಲ್ಲಿ ಕೆಲವು ಬದಲಾವಣೆಗಳನ್ನು ಕಂಡಿದೆ. ಇನ್ನು ಕಾರಿನೊಳಗೆ ಹೆಚ್ಚಿನ ಸೌಕರ್ಯಗಳಿಗೆ ಆದ್ಯತೆ ಕೊಡಲಾಗಿದೆ.
ವರದಿಗಳ ಪ್ರಕಾರ ಮುಂದಿನ ವರ್ಷದಲ್ಲಿ ಹೊಸ ರೇಂಜ್ ರೋವರ್ ಇವೋಕ್ ಆಸ್ಟ್ರೇಲಿಯಾ ಮಾರುಕಟ್ಟೆಯನ್ನು ತಲುಪಲಿದೆ. ಇದು ಹೊಸ ಎಲ್‌ಇಡಿ ಲೈಟಿಂಗ್, ಮುಂಭಾಗದಲ್ಲಿ ಪರಿಷ್ಕೃತ ಡೇಟೈಮ್ ಲೈಟ್ ಹಾಗೂ ಎಲ್‌ಇಡಿ ಲೈಟ್‌ಗಳನ್ನು ಪಡೆಯಲಿದೆ.
ಲ್ಯಾಂಡ್ ರೋವರ್‌ನ ಹೊಸತಾದ ಎಂಟು ಇಂಚುಗಳ ಟಚ್ ಸ್ಕ್ರೀನ್ ಡಿಸ್‌ಪ್ಲೇ ಕೂಡಾ ಪಡೆಯಲಿದೆ. ಹಾಗೆಯೇ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ ಟಿಎಫ್‌ಟಿ ಡಿಸ್‌ಪ್ಲೇ ಇರಲಿದೆ.


Click it and Unblock the Notifications








