ಬಿಎಂಡಬ್ಲ್ಯು ತಳಹದಿಯಲ್ಲಿ ಹೊಸ ರೋಲ್ಸ್ ರಾಯ್ಸ್ ಲಗ್ಷುರಿ ಕಾರು?
ವಾಹನೋದ್ಯಮದ ಮೂಲಗಳಿಂದ ಬಂದಿರುವ ತಾಜಾ ವರದಿಗಳ ಪ್ರಕಾರ ಬಿಎಂಡಬ್ಲ್ಯು 7 ಸಿರೀಸ್ ತಳಹದಿಯಲ್ಲಿ ನೂತನ ರೋಲ್ಸ್ ರಾಯ್ಸ್ ಐಷಾರಾಮಿ ಕಾರು ಸಿದ್ಧಗೊಳ್ಳಲಿದೆ.
ರೋಲ್ಸ್ ರಾಯ್ಸ್ ಮುಂದಿನ ಐಷಾರಾಮಿ ಕ್ರೀಡಾ ಬಳಕೆಯ ವಾಹನವು ಕಲ್ಲಿನನ್ (Cullinan) ಎಂದೆನಿಸಿಕೊಳ್ಳಲಿದ್ದು, ಜರ್ಮನಿಯ ಐಷಾರಾಮಿ ಬಿಎಂಡಬ್ಲ್ಯು ಫ್ಲ್ಯಾಟ್ ಫಾರ್ಮ್ ನಲ್ಲಿ ನಿರ್ಮಾಣವಾಗಲಿದೆ.

ನೂತನ ವಾಹನವನ್ನು ಹೈ ಸೈಡಡ್ ಆಲ್ ಟರೈನ್ ವಾಹನ ಎಂದು ಗುರುತಿಸಿರುವ ರೋಲ್ಸ್ ರಾಯ್ಸ್ ನೂತನ ವಾಹನವನ್ನು ಅಭಿವೃದ್ಧಿಪಡಿಸುವುದರಲ್ಲಿ ಎಂಜಿನಿಯರ್ ಗಳು ಕಾರ್ಯಮಗ್ನವಾಗಿದ್ದಾರೆ.
2016ರ ವೇಳೆಯಾಗುವ ಅನಾವರಣಗೊಳ್ಳುವ ಹೊಸ ರೋಲ್ಸ್ ರಾಯ್ಸ್ ಕಾರು 2018ರ ಅವಧಿಯಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ. ಈ ಮೂಲಕ ಹೊಸ ವಿನ್ಯಾಸ ನೀತಿಗೆ ರೋಲ್ಸ್ ರಾಯ್ಸ್ ಮೊರೆ ಹೋಗಲಿದೆ.

ಜಾಗತಿಕ ಮಾರುಕಟ್ಟೆಯನ್ನು ಗಮನಿಸಿದಾಗ ಹಲವಾರು ವರ್ಷಗಳಿಂದ ಬಿಎಂಡಬ್ಲ್ಯು ಹಾಗೂ ರೋಲ್ಸ್ ರಾಯ್ಸ್ ಮಾದರಿಗಳು ತನ್ನದೇ ಆದ ಛಾಪು ಮೂಡಿಸಿದೆ. ಇದು ಪ್ರೀಮಿಯಂ ವಿಭಾಗದ ಗ್ರಾಹಕರಲ್ಲಿ ಅತಿ ಹೆಚ್ಚು ಜನಮನ್ನಣೆಗೆ ಪಾತ್ರವಾಗಿದೆ.


Click it and Unblock the Notifications








