ಬೆಂಝ್ ಬುಲೆಟ್ ಫ್ರೂಪ್ ಗಾಡಿಯ ಮೈಕಟ್ಟು ಪ್ರದರ್ಶನ

By Nagaraja

ಜರ್ಮನಿಯ ಐಷಾರಾಮಿ ಕಾರು ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್‌ನ ಜನಪ್ರಿಯ ಜಿ63 ಎಎಂಜಿ ಕಾರಿಗೆ ವಿನೂತನ ಸ್ಪರ್ಶ ನೀಡುವ ಪ್ರಯತ್ನವನ್ನು ಕೆನಡಾದ ವಾಹನ ಸಂಸ್ಥೆಯೊಂದು ಮಾಡಿದೆ.

ಕೆನಡಾದ ವಾಹನ ತಯಾರಿಕ ಸಂಸ್ಥೆಯಾಗಿರುವ ಇಂಕಸ್, ಅತಿ ಶಕ್ತಿಶಾಲಿ ಬೆಂಝ್ ಕಾರಿಗೆ ಆರ್ಮರ್ಡ್ ರಕ್ಷಣಾ ಕವಚವನ್ನು ಒದಗಿಸಿದೆ. ಇದು ಹೊಸ ಜಿ63 ಎಎಂಜಿ ಕಾರಿನ ಮೈಕಟ್ಟು ವೃದ್ಧಿಗೆ ಕಾರಣವಾಗಿದೆ.

Inkas Mercedes Benz G63 AMG

ಕಾರಿನ ಒಳಗಡೆ ಪಂಚಾತಾರ ಹೋಟೆಲ್‌ಗೆ ಹೋಲಿಕೆಯಾಗುವಂತೆಹ ಸೌಲಭ್ಯಗಳನ್ನು ಹೊಂದಿರುವ ಮರ್ಸಿಡಿಸ್ ಬೆಂಝ್ ಜಿ63 ಎಎಂಜಿ, ಬುಲೆಟ್ ಹಾಗೂ ಗ್ರೇನೆಡ್ ದಾಳಿಗಳನ್ನು ತಡೆಯುವ ಶಕ್ತಿ ಹೊಂದಿದೆ. ಇದರಿಂದಲೇ ಕಾರಿನಲ್ಲಿ ಬಳಕೆ ಮಾಡುವ ತಂತ್ರಜ್ಞಾನವನ್ನು ಅಂದಾಜಿಸಬಹುದಾಗಿದೆ.
Inkas Mercedes Benz G63 AMG

ಅಷ್ಟಕ್ಕೂ 2015ನೇ ಆವೃತ್ತಿಯ ಮರ್ಸಿಡಿಸ್ ಬೆಂಝ್ ಜಿ63 ಎಎಂಜಿ ಕಾರು ಭಾರತೀಯ ರುಪಾಯಿ ಪ್ರಕಾರ 6.21 ಕೋಟಿ ರು.ಗಳಷ್ಟು ದುಬಾರಿಯೆನಿಸುತ್ತದೆ. ಮರ್ಸಿಡಿಸ್ ಬೆಂಝ್ ಜಿ63 ಎಎಂಜಿ ಕಾರು ಲಿಮೊ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆ. ಇದರಂತೆ ಕಾರಿನಲ್ಲಿ ಸಂಚರಿಸುವ ಪ್ರಯಾಣಿಕರು ಐಪ್ಯಾಂಡ್ ಮಿನಿ ಮುಖಾಂತರ ಕ್ಯಾಮೆರಾ, ಲೈಟಿಂಗ್ ಮುಂತಾದ ಕ್ರಿಯಾತ್ಮಕತೆಗಳ ನಿಯಂತ್ರಣ ಸಾಧಿಸಬಹುದಾಗಿದೆ.
Inkas Mercedes Benz G63 AMG

ವಿಶಿಷ್ಟತೆ
  • ಗರಿಷ್ಠ ಭದ್ರತೆ,
  • ಕಸ್ಟಮೈಸ್ಡ್ ವಿನ್ಯಾಸ,
  • ಸಂಪೂರ್ಣವಾಗಿ ಒರಗಬಲ್ಲ ಕಾಪ್ಟನ್ ಶೈಲಿಯ ಸೀಟು,
  • ಸ್ಯಾಟಲೈಟ್ ಟಿವಿ ವ್ಯವಸ್ಥೆ,
  • ಎಸಿ, ರೆಫ್ರಿಜಿರೇಟರು,
  • ಎಲ್‌ಇಡಿ,
  • ಲೆಥರ್, ವುಡ್ ಹಾಗೂ ಮೆಟಲ್ ಮೇಲ್ಮೈ,
  • ಬುಲೆಟ್ ಫ್ರೂಪ್ ಗ್ಲಾಸ್,
  • ಹೊರಮೈ ಕ್ಯಾಮೆರಾ,
  • ಆರ್ಮರ್ ಪ್ಲೇಟಿಂಗ್,
  • ಗ್ರೇನೆಡ್ ಫ್ರೂಪ್,
  • ಆಮ್ಲಜನಕ ಪೂರೈಕೆ,

More from DriveSpark

Article Published On: Wednesday, February 11, 2015, 12:28 [IST]
English summary
Inkas, a Canadian armored vehicle manufacturer has revealed its latest creation- an armoured, stretched Mercedes-Benz G63 AMG.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+