ರೋಲ್ಸ್ ರಾಯ್ಸ್ ಮಗದೊಂದು ಐಕಾನಿಕ್ ಕಾರು ಅನಾವರಣಕ್ಕೆ ಸಿದ್ಧ

Written By:

ಜಗತ್ತಿನ ಅತಿ ಪುರಾತನ ಹಾಗೂ ಪ್ರತಿಷ್ಠಿತ ಸಂಸ್ಥೆಯಾಗಿರುವ ರೋಲ್ಸ್ ರಾಯ್ಸ್, ಮಗದೊಂದು ಐಕಾನಿಕ್ ಕಾರನ್ನು ಮುಂಬರುವ 2015 ಸೆಪ್ಟೆಂಬರ್ 08ರಂದು ಅನಾವರಣಗೊಳಿಸಲಿದೆ. ಇದು ಈಗಿರುವ ವ್ರೈತ್ ಮಾದರಿಯ ಕನ್ವರ್ಟಿಬಲ್ ವರ್ಷನ್ ಆಗಿರಲಿದೆ.

ನೂತನ ರೋಲ್ಸ್ ರಾಯ್ಸ್ ಡಾನ್ (Dawn) ರೋಚಕ ಟೀಸರ್ ಚಿತ್ರಗಳನ್ನು ಬಿಡುಗಡೆಗೊಳಿಸಿರುವುದು ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಕುತೂಹಲ ಮನೆ ಮಾಡಿದೆ. ಐಷಾರಾಮಿ ಪಯಣ ಇಷ್ಟಪಡುವವರಿಗೆ ಹೊಸ ಕಾರು ಪರಿಪೂರ್ಣ ಆಯ್ಕೆಯಾಗಿರಲಿದೆ.

ರೋಲ್ಸ್ ರಾಯ್ಸ್ ಡಾನ್
  • ಎಂಜಿನ್: 6.6 ಲೀಟರ್ ವಿ12, ಟ್ವಿನ್ ಟರ್ಬೊಚಾರ್ಜ್ಡ್,
  • ಅಶ್ವಶಕ್ತಿ: 621.13
  • ಗರಿಷ್ಠ ವೇಗ: ಗಂಟೆಗೆ 250 ಕೀ.ಮೀ.
ರೋಲ್ಸ್ ರಾಯ್ಸ್ ಡಾನ್

ಎಕ್ಸ್ ಕ್ಲೂಸಿವ್ ಚಿತ್ರಗಳು ಸಾರುತ್ತಿರುವಂತೆಯೇ ಗರಿಷ್ಠ ಗುಣಮಟ್ಟ ಹಾಗೂ ತನ್ನ ಐತಿಹಾಸಿಕ ಪರಂಪರೆಯನ್ನು ರೋಲ್ಸ್ ರಾಯ್ಸ್ ಸಾರುತ್ತಿದೆ. ಇದು ಮಾಲಿಕನ ಹೆಮ್ಮೆಯ ಕಾರಾಗಿರಲಿದ್ದು, ತನ್ನ ಪ್ರತಿಷ್ಠೆಯನ್ನು ವೃದ್ಧಿಸಿಕೊಳ್ಳಬಹುದಾಗಿದೆ.

ರೋಲ್ಸ್ ರಾಯ್ಸ್ ಡಾನ್

ಬಹುನಿರೀಕ್ಷಿತ ರೋಲ್ಸ್ ರಾಯ್ಸ್ ಡಾನ್ ಮಾದರಿಯು ಜಗತ್ತಿನ ಅತಿ ದೊಡ್ಡ ವಾಹನ ಪ್ರದರ್ಶನ ಮೇಳವಾಗಿರುವ ಜರ್ಮನಿಯಲ್ಲಿ ನಡೆಯಲಿರುವ ಫ್ರಾಂಕ್ ಫರ್ಟ್ ಮೋಟಾರು ಶೋದಲ್ಲೂ ತನ್ನ ಶಕ್ತಿ ಪ್ರದರ್ಶನ ನಡೆಸಲಿದೆ.

English summary
Rolls-Royce Dawn Set For Global Unveil On 8th September
Story first published: Saturday, September 5, 2015, 13:33 [IST]
Please Wait while comments are loading...

Latest Photos