ಸಂಗೀತ ಪ್ರಿಯರಿಗಾಗಿ ರೋಲ್ಸ್ ರಾಯ್ಸ್ ವ್ರೈತ್
ಬ್ರಿಟನ್ ನ ಐಕಾನಿಕ್ ಸಂಸ್ಥೆಯಾಗಿರುವ ರೋಲ್ಸ್ ರಾಯ್ಸ್ ಸಂಗೀತ ಪ್ರಿಯರಿಗಾಗಿ ವ್ರೈತ್ ಕಾರನ್ನು ಪರಿಚಯಿಸುತ್ತಿದೆ. ಇದು ವಿಶಿಷ್ಟ ಹಾಗೂ ಸೃಜನಶೀಲ ಕಾರನ್ನು ಇಷ್ಟಪಡುವವರನ್ನು ಹೆಚ್ಚು ಹೊಂದಿಕೆಯಾಗಲಿದೆ.
ಸಮಕಾಲೀನ ಸಂಗೀತ ಲೋಕಕ್ಕೆ ಸದಾ ತನ್ನ ಕೊಡುಗೆಯನ್ನು ಸಲ್ಲಿಸುತ್ತಾ ಬಂದಿರುವ ರೋಲ್ಸ್ ರಾಯ್ಸ್ ಇದರಿಂದಲೇ ಪ್ರೇರಣೆ ಪಡೆದಿರುವ ವ್ರೈತ್ ಕಾರನ್ನು ಪರಿಚಯಿಸುತ್ತಿದೆ.

2013ರಲ್ಲಿ ಮೊದಲ ಬಾರಿಗೆ ಪರಿಚಯವಾಗಿದ್ದ ವ್ರೈತ್ ಬಿಸ್ಪೋಕ್ ಆಡಿಯೋ ಸಿಸ್ಟಂ ಸಂಗೀತ ಪ್ರೇಮಿಗಳ ಮನ ಸೆಳೆದಿತ್ತು. ಕಾರಿನ ಡೋರ್ ತೆರೆದು ಒಳ ಪ್ರವೇಶಿಸುವಾಗಲೇ ಡೋರ್ ನಲ್ಲಿ ಲಗತ್ತಿಸಿರುವ ಸೌಂಡ್ ಸಿಸ್ಟಂ ನಿಮ್ಮ ಗಮನ ಸೆಳೆಯಲಿದೆ.
ಎರಡು ವರ್ಷಗಳ ನಿರಂತರ ಪ್ರಯತ್ನದ ಬಳಿಕ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಚಾಲಕರಿಗೆ ನೈಜ ಅನುಭವ ಖಾತ್ರಿಪಡಿಸಲಾಗಿದೆ. ಒಟ್ಟಿನಲ್ಲಿ ಎಲ್ಲ ಅರ್ಥದಲ್ಲೂ ರೋಲ್ಸ್ ರಾಯ್ಸ್ ಮಗದೊಮ್ಮ ತನ್ನ ಐಕಾನಿಕ್ ಪಟ್ಟವನ್ನು ಕಾಯ್ದುಕೊಂಡಿದೆ.


Click it and Unblock the Notifications








