ಭಾರತವನ್ನು ಶ್ರೀಮಂತವಾಗಿಸಲಿರುವ 7 ಕ್ರೀಡಾ ಬಳಕೆಯ ವಾಹನಗಳು
ಕ್ಷಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ಭಾರತ ವಾಹನ ಮಾರುಕಟ್ಟೆಯ ಅಪಾರ ಸಾಮರ್ಥ್ಯವನ್ನು ಅರಿತುಕೊಂಡಿರುವ ಜಗತ್ತಿನೆಲ್ಲ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಗಳು ಇತ್ತ ಕಣ್ಣಾಯಿಸಿದೆ.
ಈ ಪೈಕಿ ಕ್ರೀಡಾ ಬಳಕೆಯ ವಾಹನಗಳಿಗೆ (ಎಸ್‌ಯುವಿ) ಅತಿ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ಇದನ್ನೇ ಗುರಿಯಾಗಿರಿಕೊಂಡಿರುವ ಕೆಲವು ಪ್ರಮುಖ ಸಂಸ್ಥೆಗಳು ನಿಕಟ ಭವಿಷ್ಯದಲ್ಲೇ ಗಮನಾರ್ಹ ಮಾದರಿಗಳನ್ನು ದೇಶದಲ್ಲಿ ಬಿಡುಗಡೆ ಮಾಡಲಿದೆ. ಇಂದಿನ ಈ ಲೇಖನದಲ್ಲಿ ಭಾರತವನ್ನು ಶ್ರೀಮಂತವಾಗಿಸಲಿರುವ ಮುಂಬರುವ ಏಳು ಐಷಾರಾಮಿ ಎಸ್‌ಯುವಿಗಳ ಬಗ್ಗೆ ಮಾಹಿತಿಯನ್ನು ಕೊಡುವ ಪ್ರಯತ್ನ ಮಾಡಲಿದ್ದೇವೆ.

ಟೊಯೊಟಾ ಫಾರ್ಚ್ಯುನರ್
ನಮ್ಮ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ದೇಶದಲ್ಲಿ ಹೆಚ್ಚು ಜನಪ್ರಿಯತೆ ಕಾಯ್ದುಕೊಂಡಿರುವ ಟೊಯೊಟಾ ಫಾರ್ಚ್ಯುನರ್ ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ.

ಟೊಯೊಟಾ ಫಾರ್ಚ್ಯುನರ್
ಹಿಂದಿನಗಿಂತಲೂ ಹೆಚ್ಚು ಆಕ್ರಮಣಕಾರಿ ಹಾಗೂ ಕ್ರೀಡಾತ್ಮಕ ವಿನ್ಯಾಸವನ್ನು ಟೊಯೊಟಾ ಫಾರ್ಚ್ಯುನರ್ ಕಾಪಾಡಿಕೊಳ್ಳಲಿದೆ. ಇದರ 2755ಸಿಸಿ ಡೀಸೆಲ್ ಎಂಜಿನ್ 450 ಎನ್‌ಎಂ ತಿರುಗುಬಲದಲ್ಲಿ 177 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ ಟು ವೀಲ್ ಹಾಗೂ ಫೋರ್ ವೀಲ್ ಜೊತೆಗೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೂ ಲಭ್ಯವಿರಲಿದೆ. ಇದರಲ್ಲಿರುವ ಮಗದೊಂದು 2393ಸಿಸಿ ಡೀಸೆಲ್ ಎಂಜಿನ್ 150 ಅಶ್ವಶತ್ತಿ (400 ಎನ್‌ಎಂ ತಿರುಗುಬಲ) ಉತ್ಪಾದಿಸಲಿದೆ.

ಮಿಟ್ಸುಬಿಸಿ ಪಜೆರೊ ಸ್ಪೋರ್ಟ್
ಭಾರತದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಿಟ್ಸುಬಿಸಿ ಯಶ ಸಾಧಿಸದೇ ಹೋಗಿರಬಹುದು. ಆದರೆ ಇಲ್ಲಿಗೆ ಜಪಾನ್ ಮೂಲದ ಸಂಸ್ಥೆಯು ತನ್ನ ಪ್ರಯತ್ನವನ್ನು ನಿಲ್ಲಿಸಿಲ್ಲ. ಅತಿ ಶೀಘ್ರದಲ್ಲೇ ಹೊಚ್ಚ ಹೊಸ ವಿನ್ಯಾಸದ ಪಜೆರೊ ಸ್ಪೋರ್ಟ್ ಭಾರತಕ್ಕೆ ರಿ ಎಂಟ್ರಿ ಕೊಡಲಿದೆ.

ಮಿಟ್ಸುಬಿಸಿ ಪಜೆರೂ ಸ್ಪೋರ್ಟ್
2.4 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ನಿಂದ (178.45 ಅಶ್ವಶಕ್ತಿ, 430 ಎನ್‌ಎಂ ತಿರುಗುಬಲ) ನಿಯಂತ್ರಿಸಲ್ಪಡುವ ಹೊಸ ಪಜೆರೊ ಸ್ಪೋರ್ಟ್ ಗೆ ದೇಶದಲ್ಲಿ ಉತ್ತಮ ಬೇಡಿಕೆ ವ್ಯಕ್ತವಾಗುವ ಸಾಧ್ಯತೆಯಿದೆ. ಇದು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೊತೆಗೆ ಸೂಪರ್ ಸೆಲೆಕ್ಟ್ 4 ವೀಲ್ ಡ್ರೈವ್ ಆಯ್ಕೆಯೂ ಇರಲಿದೆ.

ಫೋರ್ಡ್ ಎಂಡೀವರ್
ದೀರ್ಘ ಕಾಲದಿಂದ ಮಾರುಕಟ್ಟೆಯಲ್ಲಿರುವ ಫೋರ್ಡ್ ಎಂಡೀವರ್ ಗೆ ಹೊಸ ಚೇತನ ತುಂಬಲು ಅಮೆರಿಕ ಮೂಲದ ಸಂಸ್ಥೆಯು ನಿರ್ಧರಿಸಿದೆ.

ಫೋರ್ಡ್ ಎಂಡೀವರ್
ಹೊಸ ಫೋರ್ಡ್ ಎಂಡೀವರ್ ಕಾರಿನಲ್ಲಿರುವ 2.2 ಲೀಟರ್ 4 ಸಿಲಿಂಡರ್ ಡೀಸೆಲ್ 160 ಅಶ್ವಶಕ್ತಿ (385 ಎನ್‌ಎಂ ತಿರುಗುಬಲ) ಉತ್ಪಾದಿಸಲಿದೆ. ಹಾಗೆಯೇ ಇದರ 3.2 ಲೀಟರ್ 5 ಸಿಲಿಂಡರ್ ಡೀಸೆಲ್ ಎಂಜಿನ್ 470 ಎನ್‌ಎಂ ತಿರುಗುಬಲದಲ್ಲಿ 200 ಅಶ್ವಶಕ್ತಿ ಉತ್ಪಾದಿಸಲಿದೆ. ಫೋರ್ ವೀಲ್ ಡ್ರೈವ್ ಆಯ್ಕೆಯೂ ಇದರಲ್ಲಿರುತ್ತದೆ.

ನಿಸ್ಸಾನ್ ಎಕ್ಸ್ ಟ್ರೈಲ್
ನಿಸ್ಸಾನ್ ಎಕ್ಸ್ ಟ್ರೈಲ್ ಪ್ರೀಮಿಯಂ ಎಸ್‌ಯುವಿಗಳ ಸಾಲಿಗೆ ತಾಜಾ ಸೇರ್ಪಡೆಯಾಗಿದೆ. ಇದರೊಂದಿಗೆ ಕಳಪೆ ಮಾರಾಟದಿಂದಾಗಿ ಹಿಂದಕ್ಕೆ ಸರಿದಿದ್ದ ಎಕ್ಸ್ ಟ್ರೈಲ್ ಭಾರತಕ್ಕೆ ರಿ ಎಂಟ್ರಿ ಕೊಡಲು ಸಜ್ಜಾಗುತ್ತಿದೆ.

ನಿಸ್ಸಾನ್ ಎಕ್ಸ್ ಟ್ರೈಲ್
ನಿಸ್ಸಾನ್ ಎಕ್ಸ್ ಟ್ರೈಲ್ ಬಗ್ಗೆ ಮಾತನಾಡುವುದಾದ್ದಲ್ಲಿ 2.0 ಲೀಟರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಸಾಧ್ಯತೆಯಿದೆ. ಅಲ್ಲದೆ ಸಂಸ್ಥೆಯ ಹೆಸರಾಂತ ಸಿವಿಟಿ ಗೇರ್ ಬಾಕ್ಸ್ ಮತ್ತು ಎಲೆಕ್ಟ್ರಾನಿಕ್ ಫೋರ್ ವೀಲ್ ಡ್ರೈವ್ ಆಯ್ಕೆಯೂ ಇರಲಿದೆ.

ಫೋಕ್ಸ್ ವ್ಯಾಗನ್ ಟೈಗ್ವಾನ್
ಮೇಲೆ ತಿಳಿಸಿರುವ ಎಸ್‌ಯುವಿಗಿಂತಲೂ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಫೋಕ್ಸ್ ವ್ಯಾಗನ್ ಟೈಗ್ವಾನ್ ಭಾರತ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುವ ಸಾಧ್ಯತೆಯಿದೆ. ಯಾಕೆಂದರೆ ಜರ್ಮನಿಯ ಐಷಾರಾಮಿ ಸಂಸ್ಥೆಯ ಹೊಚ್ಚ ಹೊಸ ಫ್ಲ್ಯಾಟ್ ಫಾರ್ಮ್ ನಲ್ಲಿ ಟೈಗ್ವಾನ್ ನಿರ್ಮಾಣವಾಗುತ್ತಿದೆ.

ಫೋಕ್ಸ್ ವ್ಯಾಗನ್ ಟೈಗ್ವಾನ್
ಒಂದು ಪ್ರೀಮಿಯಂ ಎಸ್‌ಯುವಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಹೊಂದಿರಲಿರುವ ಫೋಕ್ಸ್ ವ್ಯಾಗನ್ ಟೈಗ್ವಾನ್ ಈಗಾಗಲೇ ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.

ಷೆವರ್ಲೆ ಟ್ರೈಲ್‌ಬ್ಲೇಜರ್
ಭಾರತದಲ್ಲಿ ಭದ್ರ ಅಡಿಪಾಯ ಹಾಕಲು ನಿರಂತರ ಪ್ರಯತ್ನದಲ್ಲಿರುವ ಷೆವರ್ಲೆಗೆ ನೂತನ ಟ್ರೈಲ್ ಬ್ಲೇಜರ್ ಹೊಸ ಹುರುಪು ತುಂಬಲಿದೆ.

ಷೆವರ್ಲೆ ಟ್ರೈಲ್‌ಬ್ಲೇಜರ್
ಪ್ರಸಕ್ತ ಸಾಲಿನಲ್ಲೇ ಬಿಡುಗಡೆಯಾಗುವ ನಿರೀಕ್ಷೆ ಹೊಂದಿರುವ ಟ್ರೈಲ್ ಬ್ಲೇಜರ್, ದೇಶದ ಪ್ರೀಮಿಯಂ ಕ್ರೀಡಾ ಬಳಕೆಯ ವಾಹನಗಳಿಗೆ ಹೊಸ ಆಯಾಯವನ್ನುಂಟು ಮಾಡಲಿದೆ. ಇದರ 2.5 ಲೀಟರ್ ಡೀಸೆಲ್ ಎಂಜಿನ್ 350 ಎನ್‌ಎಂ ತಿರುಗುಬಲದಲ್ಲಿ 150 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ 2.8 ಲೀಟರ್ ಡೀಸೆಲ್ ಎಂಜಿನ್ 470 ಎನ್‌ಎಂ ತಿರುಗುಬಲದಲ್ಲಿ 180 ಅಶ್ವಶಕ್ತಿ ಉತ್ಪಾದಿಸಲಿದೆ.

ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್
ಇಲ್ಲಿಗೆ ಎಸ್‌ಯುವಿಗಳ ಪಟ್ಟಿ ಕೊನೆಗೊಳ್ಳುವುದಿಲ್ಲ. ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಸಹ ಬಿಡುಗಡೆಗೆ ಮೊದಲೇ 200ರಷ್ಟು ಬುಕ್ಕಿಂಗ್ ಗಿಟ್ಟಿಸಿಕೊಳ್ಳುವ ಮೂಲಕ ಸುದ್ದಿಗೆ ಗ್ರಾಸವಾಗಿದೆ.

ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್
ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್2.2 ಲೀಟರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ 140 ಹಾಗೂ 180 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ 9 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೊತೆಗೆ ಟು ವೀಲ್ ಹಾಗೂ ಫೋರ್ ವೀಲ್ ಡ್ರೈವ್ ಆಯ್ಕೆಯೂ ಇರುತ್ತದೆ.

ಈಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.


Click it and Unblock the Notifications








