ಹೊಸ ವರ್ಷದಲ್ಲಿ ಸ್ಕೋಡಾ ಕಾರುಗಳು ದುಬಾರಿ

By Nagaraja

ಭಾರತದಲ್ಲಿರುವ ತನ್ನ ಶ್ರೇಣಿಯ ಕಾರುಗಳ ಬೆಲೆ ಏರಿಕೆಗೊಳಿಸಲು ಜೆಕ್ ಗಣರಾಜ್ಯದ ಸ್ಕೋಡಾ ಸಂಸ್ಥೆ ನಿರ್ಧರಿಸಿದೆ. ನೂತನ ದರ ನೀತಿಯು 2016 ಜನವರಿ 01ರಂದು ಅನ್ವಯವಾಗಲಿದೆ.

ಸ್ಕೋಡಾ ಮಾದರಿಗೆ ಅನುಗುಣವಾಗಿ ಶೇಕಡಾ ಎರಡರಿಂದ ಮೂರರಷ್ಟು ಬೆಲೆ ಏರಿಕೆಗೊಂಡಿದೆ. ಹಾಗಿದ್ದರೂ ಯಾವೆಲ್ಲ ಮಾದರಿಗೆ ಎಷ್ಟೆಷ್ಟು ಬೆಲೆ ಹೆಚ್ಚಳಗೊಳ್ಳಲಿದೆ ಎಂಬುದನ್ನು ಸ್ಕೋಡಾ ಸ್ಪಷ್ಟಪಡಿಸಿಲ್ಲ.

ಸ್ಕೋಡಾ

ದೇಶದಲ್ಲಿ ಸ್ಕೋಡಾ ಕಾರುಗಳು 14,000 ರು.ಗಳಿಂದ ಆರಂಭವಾಗಿ ಗರಿಷ್ಠ 50,000 ರು.ಗಳ ವರೆಗೆ ಬೆಲೆ ಬಾಳುತ್ತದೆ. ನೂತನ ಬೆಲೆಯು 2016 ಜನವರಿ 01ರಿಂದಲೇ ಜಾರಿಗೆ ಬರಲಿದೆ.

ಸದ್ಯಕ್ಕೆ ಭಾರತದಲ್ಲಿ ಸ್ಕೋಡಾ ಸಂಸ್ಥೆಯು ರಾಪಿಡ್ ಕಾರಿನಿಂದ ಆರಂಭವಾಗಿ ಒಕ್ಟವಿಯಾ, ಯೆಟಿ ಮತ್ತು ಸೂಪರ್ಬ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಅಲ್ಲದೆ ಮುಂಬರುವ 2016 ಆಟೋ ಎಕ್ಸ ಪೋದಲ್ಲಿ ಮತ್ತಷ್ಟು ಮತ್ತಷ್ಟು ಮಾದರಿಗಳ ಪ್ರದರ್ಶನವಾಗಲಿದೆ.

ನಿರ್ಮಾಣ ವೆಚ್ಚ ಹೆಚ್ಚಾಗಿರುವುದು ಹಾಗೂ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರುಪಾಯಿ ಮೌಲ್ಯ ಇಳಿಕೆಯಾಗಿರುವುದು ಸ್ಕೋಡಾ ದರ ಏರಿಕೆಗೆ ಕಾರಣವಾಗಿದೆ. ಇತರ ವಾಹನ ಸಂಸ್ಥೆಗಳಾದ ಹ್ಯುಂಡೈ, ಮಾರುತಿ ಸುಜುಕಿ, ನಿಸ್ಸಾನ್, ದಟ್ಟನ್ ಈಗಾಗಲೇ ಬೆಲೆ ಏರಿಕೆಯನ್ನು ಘೋಷಿಸಿದೆ.

Article Published On: Tuesday, December 15, 2015, 15:36 [IST]
English summary
Skoda To Hike Price Of Models In India By Rs. 50,000 Max
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+