ದಾಖಲೆಯ 1,70,00,000 ಕಾರು ಹೊರತರಲಿರುವ ಸ್ಕೋಡಾ

By Nagaraja

ನಿಮಗಿದರ ಬಗ್ಗೆ ತಿಳಿದಿದೆಯೋ ಗೊತ್ತಿಲ್ಲ. 1895ನೇ ಇಸವಿಯಲ್ಲಿ ವಾಕ್ಲೆವ್ ಲೌರಿನ್ ಮತ್ತು ವಾಕ್ಲೆವ್ ಕ್ಲೆಮೆಂಟ್ ಅವರಿಂದ ಜನ್ಮತಾಳಿದ ಜೆಕ್ ಗಣರಾಜ್ಯದ ಐಕಾನಿಕ್ ಸ್ಕೋಡಾ ಸಂಸ್ಥೆಯು ಈಗಲೂ ಜನಪ್ರಿಯ ಕಾರುಗಳನ್ನು ಉತ್ಪಾದಿಸುವುದರಲ್ಲಿ ನಿಸ್ಸೀಮವಾಗಿದೆ.

ತದಾ ಬಳಿಕ ಜಗತ್ತಿನ್ನೆಲ್ಲ ರಾಷ್ಟ್ರಗಳಿಗೆ ತನ್ನ ರೆಕ್ಕೆ ಪಸರಿಸಿರುವ ಸ್ಕೋಡಾ ಸಂಸ್ಥೆಯೀಗ ವಾಹನ ಇತಿಹಾಸದಲ್ಲೇ ಹೊಸ ಮೈಲುಗಲ್ಲು ಸೃಷ್ಟಿಸಿದ್ದು, 1,70,00,000ನೇ ಕಾರನ್ನು ಹೊರತರುತ್ತಿದೆ. ಅದು ಕೂಡಾ ಸ್ಕೋಡಾ ಮುಖ್ಯ ಕಚೇರಿ ಮಾಲ್ಡಾ ಬೊಲೆಸ್ಲಾವ್‌ನಿಂದ ಹೊರಬಂದಿದೆ.

Skoda Rapid

ಈ ಅದೃಷ್ಟ ಸ್ಕೋಡಾ ರಾಪಿಡ್ ಸ್ಪೇಸ್ ಬ್ಯಾಕ್ ಕಾರಿಗೆ ದೊರಕಿದ್ದು, ವಿಶೇಷ ಕೊರಿಡಾ ರೆಡ್ ಬಣ್ಣವನ್ನು ಪಡೆದುಕೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಕೋಡಾ ಸಿಇಒ ವಿನ್‌ಫ್ರೈಡ್ ವಾಲ್ಯಾಂಡ್, '1905ನೇ ಇಸವಿಯಿಂದ ಇದುವರೆಗೆ 1,70,00,000 ವಾಹನಗಳನ್ನು ಉತ್ಪಾದಿಸಿರುವುದು ಸಂಸ್ಥೆಯ ಬಲ ಹಾಗೂ ನಿರಂತರ ಯಶಸ್ಸನ್ನು ಸೂಚಿಸುತ್ತದೆ' ಎಂದಿದ್ದಾರೆ.

1991ರಲ್ಲಿ ಫೋಕ್ಸ್‌ವ್ಯಾಗನ್ ಬತ್ತಳಿಕೆಗೆ ಸೇರಿಕೊಂಡಿದ್ದ ಸ್ಕೋಡಾ ತದಾ ಬಳಿಕ 12 ದಶಲಕ್ಷಗಳಷ್ಟು ಕಾರುಗಳನ್ನು ನಿರ್ಮಿಸಿದೆ. ಅಲ್ಲದೆ ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಆಕರ್ಷಕ ಮಾದರಿಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ.

ಪ್ರಸ್ತುತ ಏಳು ವಾಹನಗಳ ಶ್ರೇಣಿಯ ಮೂಲಕ 40 ರಾಷ್ಟ್ರಗಳಲ್ಲಿ ತನ್ನ ಸಾನಿಧ್ಯವನ್ನು ಹೊಂದಿರುವ ಸ್ಕೋಡಾ ವರ್ಷಂಪ್ರತಿ 1.5 ಮಿಲಿಟನ್ ವಾಹನಗಳ ಮಾರಾಟದ ಗುರಿಯಿರಿಸಿಕೊಂಡಿದೆ.

More from DriveSpark

Article Published On: Tuesday, February 3, 2015, 10:09 [IST]
English summary
Skoda has manufactured its 1,70,00,000th vehicle, it was built at their headquarters in Mlada Boleslav. Their milestone car is Skoda's Rapid Spaceback and sports their Corrida Red paint scheme.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+