ಸ್ಕೋಡಾ ಒಕ್ಟಾವಿಯಾ 'ವಾರ್ಷಿಕ ಆವೃತ್ತಿ' ಬಿಡುಗಡೆ
ಇದೀಗಷ್ಟೇ ಒಕ್ಟಾವಿಯಾ 'ಸ್ಟೈಲ್ ಪ್ಲಸ್' [ಸ್ಕೋಡಾ ಒಕ್ಟಾವಿಕಾ ಸ್ಟೈಲ್ ಪ್ಲಸ್ ವೆರಿಯಂಟ್ ಬಿಡುಗಡೆ] ವೆರಿಯಂಟ್ ಪರಿಚಯಿಸಿದ್ದ ಜೆಕ್ ಗಣರಾಜ್ಯದ ಪ್ರಖ್ಯಾತ ಕಾರು ತಯಾರಿಕ ಸಂಸ್ಥೆ ಸ್ಕೋಡಾ ಆಟೋ ಇಂಡಿಯಾ, ಇನ್ನು ಒಂದು ಹೆಜ್ಜೆ ಮುಂದಿಡುವ ಮೂಲಕ ತನ್ನ ಜನಪ್ರಿಯ ಒಕ್ಟಾವಿಯಾ ಸೆಡಾನ್ ಕಾರಿನ 'ವಾರ್ಷಿಕ ಆವೃತ್ತಿ' ಬಿಡುಗಡೆ ಮಾಡಿದೆ.
ಬೆಲೆ ಮಾಹಿತಿ: 15.75 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)
ನೂತನ ಒಕ್ಟಾವಿಯಾ ಪ್ರೀಮಿಂಯಂ ಸೆಡಾನ್ ಕಾರಿನಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ 'ಸ್ಮಾರ್ಟ್ ಲಿಂಕ್ ಕನೆಕ್ಟಿವಿಟಿ' ವೈಶಿಷ್ಟ್ಯ ಲಭ್ಯವಾಗಲಿದೆ. ಇದರ ಮುಖಾಂತರ ಗ್ರಾಹಕರು ಕಾರಿನ ಮಾಹಿತಿ ಮನರಂಜನಾ ಪರದೆ ಮೇಲೆಯೇ ಆಯ್ದ ಸ್ಮಾರ್ಟ್ ಫೋನ್ ಆಪ್ ಬಳಕೆ ಮಾಡಬಹುದಾಗಿದೆ.

ಇವೆಲ್ಲದರ ಜೊತೆಗೆ ರಿಯರ್ ವ್ಯೂ ಕ್ಯಾಮೆರಾ, ಕೀಲೆಸ್ ಎಂಟ್ರಿ, ಎಂಜಿನ್ ಸ್ಟ್ಯಾರ್ಟ್ ಸ್ಟಾಪ್, ಹಿಂಬದಿಯಲ್ಲಿ ಏರ್ ಬ್ಯಾಗ್ ಹಾಗೂ ಸ್ಟೀರಿಂಗ್ ವೀಲ್ ನಲ್ಲೇ ಗೇರ್ ಶಿಫ್ಟ್ ನಿಯಂತ್ರಣ ಮುಂತಾದ ಸೌಲಭ್ಯಗಳನ್ನು ಅನುಭವಿಸಬಹುದಾಗಿದೆ.
ಅಂತೆಯೇ ಹಿಂದುಗಡೆ ಎರಡು ಸೈಡ್ ಏರ್ ಬ್ಯಾಗ್ ಗಳನ್ನು ಒದಗಿಸಲಾಗುತ್ತಿದ್ದು, ಒಟ್ಟು ಏರ್ ಬ್ಯಾಗ್ ಗಳ ಸಂಖ್ಯೆ ಎಂಟಕ್ಕೆ ಏರಿಕೆಯಾಗಲಿದೆ. ಈ ಮೂಲಕ ಅತ್ಯಂತ ಸುರಕ್ಷಿತ ಕಾರುಗಳಲ್ಲಿ ಒಂದೆನಿಸಿಕೊಳ್ಳಲಿದೆ.


Click it and Unblock the Notifications