ಸ್ಕೋಡಾದಿಂದ ಬರಲಿದೆ ಏಳು ಸೀಟುಗಳ ಎಸ್‌ಯುವಿ

By Nagaraja

ಜೆಕ್ ಗಣರಾಜ್ಯದ ಐಕಾನಿಕ್ ವಾಹನ ತಯಾರಿಕ ಸಂಸ್ಥೆಯಾಗಿರುವ ಸ್ಕೋಡಾ ದೇಶದಲ್ಲಿ ಗುಣಮಟ್ಟದ ಕಾರುಗಳನ್ನು ಪರಿಚಯಿಸುವುದರಲ್ಲಿ ಹೆಸರು ಪಡೆದಿದೆ.

ಇನ್ನೊಂದೆಡೆ ವಾಹನ ಖರೀದಿ ಬಳಿಕದ ಸರ್ವೀಸ್ ವೆಚ್ಚ ಹೆಚ್ಚಾಗಿದೆ ಎಂಬ ಅಪವಾದವೂ ಇದೆ. ಹಾಗಿದ್ದರೂ ದೇಶದ ಒಂದು ವಿಭಾಗದ ಶ್ರೀಮಂತ ವ್ಯಕ್ತಿಗಳ ಪಾಲಿಗೆ ಇಂದಿಗೂ ಸ್ಕೋಡಾ ನೆಚ್ಚಿನ ಕಾರಾಗಿದೆ.

ತನ್ನ ಗ್ರಾಹಕರಲ್ಲಿ ನಂಬಿಕೆಯನ್ನು ಉಳಿಸಿಕೊಂಡಿರುವ ಸ್ಕೋಡಾ ಸಂಸ್ಥೆಯು ದೇಶಕ್ಕಾಗಿ ಏಳು ಸೀಟಿನ ಕ್ರೀಡಾ ಬಳಕೆಯ ವಾಹನ ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ವರದಿಗಳ ಪ್ರಕಾರ ಸ್ಕೋಡಾ ಎಸ್‌ಯುವಿ 2016 ಅಥವಾ 2017ನೇ ವರ್ಷದಲ್ಲಷ್ಟೇ ಭಾರತ ಮಾರುಕಟ್ಟೆಯನ್ನು ತಲುಪಲಿದೆ.

skoda suv

ವಿಶೇಷವೆಂದರೆ ಇದು ಸ್ಕೋಡಾ ಯೆಟಿ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿದೆ. ಇದು ಮಾತೃಸಂಸ್ಥೆ ಫೋಕ್ಸ್‌ವ್ಯಾಗನ್‌ನ ಎಂಕ್ಯೂಬಿ ತಳಹದಿಯಲ್ಲಿ ನಿರ್ಮಾಣವಾಗಲಿದ್ದು, ಮೂರು ಸಾಲುಗಳ ಆಸನ ವ್ಯವಸ್ಥೆಯನ್ನು ಪಡೆದುಕೊಳ್ಳಲಿದೆ.

'ಎ ಪ್ಲಸ್ ಎಸ್‌ಯುವಿ' ಎಂದು ಕೋಡ್ ಪಡೆದುಕೊಂಡಿರುವ ಸ್ಕೋಡಾದ ಹೊಸ ಕಾರು, ಪಟ್ಟಣ ಎಸ್‌ಯುವಿ ಎನಿಸಿಕೊಳ್ಳಲಿದೆ. ಇದು 4.6 ಮೀಟರ್ ಉದ್ದವನ್ನು ಹೊಂದಿರಲಿದ್ದು, ಸೂಪರ್ಬ್ ಸೆಡಾನ್‌ನ ಕೆಲವು ವೈಶಿಷ್ಟ್ಯಗಳನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ.

ಇನ್ನು ಕಾರಿನಡಿಯಲ್ಲಿ 4 ಸಿಲಿಂಡರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಹೊಂದಿರಲಿದೆ. ಹಾಗೆಯೇ ಮ್ಯಾನುವಲ್ ಜೊತೆಗೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೂ ಲಭ್ಯವಿರಲಿದೆ. ಅಷ್ಟೇ ಯಾಕೆ ಟು ವೀಲ್ ಜೊತೆಗೆ ಫೋರ್ ವೀಲ್ ಡ್ರೈವ್ ವ್ಯವಸ್ಥೆಯು ಆಫ್ ರೋಡ್ ಪ್ರಿಯರ ಮನ ಗೆಲ್ಲಲು ಸಹಕಾರಿಯಾಗಲಿದೆ.

ಬಲ್ಲ ಮೂಲಗಳ ಪ್ರಕಾರ ಭವಿಷ್ಯದಲ್ಲಿ ಹೈಬ್ರಿಡ್ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿರುತ್ತದೆ. ಇದು ಪ್ರಮುಖವಾಗಿಯೂ ಹ್ಯುಂಡೈ ಸಾಂಟಾಫೆ ಮಾದರಿಗೆ ಪ್ರತಿಸ್ಪರ್ಧಿಯಾಗಲಿದ್ದು, 25ರಿಂದ 30 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

More from DriveSpark

Article Published On: Monday, January 5, 2015, 7:22 [IST]
English summary
Skoda is working on a new premium suv model to compete with Toyota Fortuner. The rendering is based on the actual 7-seater and will be the new flagship SUV for Skoda, priced on the lines of the Superb sedan. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+