ಸ್ಕೋಡಾ ರಾಪಿಡ್ ವಾರ್ಷಿಕ ಆವೃತ್ತಿ ಬಿಡುಗಡೆ

By Nagaraja

ಜೆಕ್ ಗಣರಾಜ್ಯದ ಪ್ರಖ್ಯಾತ ಕಾರು ಸಂಸ್ಥೆ ಸ್ಕೋಡಾ ಭಾರತದಲ್ಲಿ ತನ್ನ ಜನಪ್ರಿಯ ರಾಪಿಡ್ ವಾರ್ಷಿಕ ಆವೃತ್ತಿಯನ್ನು ಬಿಡುಗಡೆ ಮಾಡಿದೆ. 2015 ಸ್ಕೋಡಾ ರಾಪಿಡ್ ಕಾರಿನಲ್ಲಿ ಇದೇ ಮೊದಲ ಬಾರಿಗೆ ರಿಮೋಟ್ ಟ್ರ್ಯಾಕಿಂಗ್ ಸಿಸ್ಟಂಗಳಂತಹ ವ್ಯವಸ್ಥೆಗಳಿರಲಿದೆ.

ಬೆಲೆ ಮಾಹಿತಿ: 6.99 ಲಕ್ಷ ರು. (ಎಕ್ಸ್ ಶೋ ರೂಂ)

ಪ್ರಮುಖವಾಗಿಯೂ ಸ್ಕೋಡಾ ಅಭಿಮಾನಿಗಳಿಗಾಗಿ ರಾಪಿಡ್ ಕಾರನ್ನು ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ ಅದ್ಭುತ ಚಾಲನಾ ಅನುಭವ ನೀಡುವುದರತ್ತ ಸಂಸ್ಥೆಯು ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ.

ಸ್ಕೋಡಾ ರಾಪಿಡ್ ವಾರ್ಷಿಕ ಆವೃತ್ತಿ

ವಿಶೇಷ ಬಣ್ಣಗಳು ಹಾಗೂ ವೈಶಿಷ್ಟ್ಯಗಳು ಸ್ಕೋಡಾ ರಾಪಿಡ್ ಕಾರನ್ನು ವಿಶಿಷ್ಟವಾಗಿಸಲಿದೆ. ಅಲ್ಲದೆ ಡ್ಯುಯಲ್ ಏರ್ ಬ್ಯಾಗ್ ಸಹ ಸ್ಟ್ಯಾಂಡರ್ಡ್ ರೂಪದಲ್ಲಿ ದೊರಕಲಿದೆ.

ಟ್ರ್ಯಾಕ್ ಪ್ರೊ ಕಾರ್ ಟ್ರ್ಯಾಕಿಂಗ್ ಸಿಸ್ಟಂ ಸೌಲಭ್ಯದೊಂದಿಗೆ ದಿನದ 24 ತಾಸಿನಲ್ಲೂ ನಿಮ್ಮ ವಾಹನ ಎಲ್ಲಿದೆ ಎಂಬುದನ್ನು ಟ್ರ್ಯಾಕ್ ಮಾಡಬಹುದಾಗಿದೆ. ಅಲ್ಲದೆ ಈ ಸಿ ಸೆಗ್ಮೆಂಟ್ ಕಾರಿನಲ್ಲಿ ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಪಾಲಿಸಲಾಗಿದೆ.

2015 ಸ್ಕೋಡಾ ರಾಪಿಡ್ 7 ಸ್ಪೀಡ್ ಡಿಎಸ್‌ಜಿ ಜೊತೆ ಟಿಪ್ ಟ್ರಾನಿಕ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಲಭ್ಯವಾಗಲಿದೆ. ಅಲ್ಲದೆ ಕ್ರೂಸ್ ಕಂಟ್ರೋಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಮತ್ತು ಎತ್ತರ ಹೊಂದಾಣಿಸಬಹುದಾದ ಸ್ಟೀರಿಂಗ್ ವೀಲ್ ಇರಲಿದೆ.

ಇನ್ನುಳಿದಂತೆ 2 ಡಿನ್ ಆಡಿಯೋ ಪ್ಲೇಯರ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಹಿಂದುಗಡೆಯೂ ಹೊಂದಾಣಿಸಬಹುದಾದ ಡ್ಯುಯಲ್ ಎಸಿ ವೆಂಟ್ಸ್ ಸೌಲಭ್ಯವೂ ಇರಲಿದೆ. ಅಲ್ಲದೆ ಈ ವಿಶೇಷ ಆವೃತ್ತಿಯ ಮಾರಾಟವು ಸೆಪ್ಟೆಂಬರ್ ತಿಂಗಳಿಗೆ ಮಾತ್ರ ಸೀಮಿತಗೊಳ್ಳಲಿದೆ.

Article Published On: Wednesday, September 2, 2015, 14:32 [IST]
English summary
Skoda India has launched its Rapid ‘Anniversary Edition' on 1st of September, 2015. It will sport new features and a first-ever remote tracking system in the sedan segment.
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+