2015 ಸ್ಕೋಡಾ ಸೂಪರ್ಬ್ ಬಿಡುಗಡೆ ಯಾವಾಗ ಗೊತ್ತೇ?

By Nagaraja

ದೇಶದ ವಾಹನ ಪ್ರೇಮಿಗಿಂತಲೂ ವಿದೇಶಿಗರು ಈ ವಿಷಯ ಕೇಳಿ ಹೆಚ್ಚು ಖುಷಿಪಟ್ಟುಕೊಳ್ಳುತ್ತಿರಬಹುದು. ಏಕೆಂದರೆ ಚೆಕ್ ಗಣರಾಜ್ಯದ ಪ್ರಖ್ಯಾತ ಕಾರು ಸಂಸ್ಥೆಯಾಗಿರುವ ಸ್ಕೋಡಾ, ಸದ್ಯದಲ್ಲೇ 2015 ಸೂಪರ್ಬ್ ಮಾದರಿಯನ್ನು ಅನಾವರಣ ಮಾಡಲಿದೆ.

ಬಲ್ಲ ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ ಮುಂಬರುವ ಫೆಬ್ರವರಿ 17ರಂದು ಸ್ಕೋಡಾ ಸೂಪರ್ಬ್ ಅನಾವರಣಗೊಳ್ಳಲಿದೆ. ಸ್ಕೋಡಾ ಸಂಸ್ಥೆಯ ಫ್ಲ್ಯಾಗ್ ಶಿಪ್ ಮಾದರಿಯಾಗಿರುವ ಹೊಸ ಸೂಪರ್ಬ್‌ನಲ್ಲಿ ಹೆಚ್ಚಿನ ಬದಲಾವಣೆ ಕಂಡುಬರಲಿದೆ.

2015 skoda superb

ಫೋಕ್ಸ್ ವ್ಯಾಗನ್ ಪಸ್ಸಾಟ್ ಬಿ8 ತಳಹದಿಯಲ್ಲಿ ನಿರ್ಮಾಣವಾಗಿರುವ ಹೊಸ ಸೂಪರ್ಬ್ ಕಾರನ್ನು ಜಿನೆವಾ ಮೋಟಾರು ಶೋಗಿಂತಲೂ ಮುಂಚಿತವಾಗಿ ಅನಾವರಣಗೊಳಿಸಲಾಗಿದೆ. ಹಾಗಿದ್ದರೂ ಜಿನೆವಾದಲ್ಲೂ ತನ್ನ ಮೈಕಟ್ಟನ್ನು ತೋರಿಸಲಿದೆ.

ವಿಶೇಷವೆಂದರೆ ಐದು ಪೆಟ್ರೋಲ್ ಹಾಗೂ ಮೂರು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಹೊಸ ಸ್ಕೋಡಾ ಸೂಪರ್ಬ್ ಲಭ್ಯವಾಗಲಿದೆ. ಇದರ ಪೆಟ್ರೋಲ್ 1.4 ಲೀಟರ್‌ನಿಂದ 2.0 ಲೀಟರ್ ವರೆಗಿನ ಟರ್ಬೊ ಎಂಜಿನ್ 123ರಿಂದ 276ರ ವರೆಗೆ ಅಶ್ವಶಕ್ತಿ ಉತ್ಪಾದಿಸಲಿದೆ.

ಹಾಗೆಯೇ 1.6 ಲೀಟರ್‌ನಿಂದ 2.0 ಲೀಟರ್ ಡೀಸೆಲ್ ಎಂಜಿನ್‌ಗಳು 118ರಿಂದ 187ರ ವರೆಗೆ ಅಶ್ವಶಕ್ತಿ ಉತ್ಪಾದಿಸಲಿದೆ. ಅಂತೆಯೇ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳು ಡಿಎಸ್‌ಜಿ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಪಡೆಯಲಿದೆ. ಇನ್ನು ವೆರಿಯಂಟ್‌ಗೆ ಅನುಗುಣವಾಗಿ ಟು ವೀಲ್ ಹಾಗೂ ಫೋರ್ ವೀಲ್ ಡ್ರೈವ್ ವ್ಯವಸ್ಥೆಯಿರಲಿದೆ.

ವಿಶಿಷ್ಟತೆಗಳು
ಗರಿಷ್ಠ ತಂತ್ರಜ್ಞಾನದ ಬಳಕೆ,

  • ಹಿಂಬದಿ ಪ್ರಯಾಣಿಕರಿಗೂ ಇನ್ಪೋಟೈನ್ಮೆಂಟ್ ಸಿಸ್ಟಂ ನಿಯಂತ್ರಣ,
  • ಆಪಲ್ ಕಾರ್ ಪ್ಲೇ ವ್ಯವಸ್ಥೆ,
  • ಸಾಮಾನಿಡುವ ಜಾಗ - 625 ಲೀಟರ್,
  • ಪರಿಷ್ಕೃತ ವಿನ್ಯಾಸ,
  • ಲೆಥರ್ ಸೀಟು,
  • ಸ್ಟೀರಿಂಗ್ ವೀಲ್ ಹೊಸತನ, ಸೆಂಟ್ರಾಲ್ ಕನ್ಸಾಲ್

More from DriveSpark

Article Published On: Wednesday, February 11, 2015, 11:13 [IST]
English summary
Skoda has announced that the all new Skoda Superb will be revealed to the world on the 17th of February. The Skoda Superb is Skoda's flagship model.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+