ಥಾಂಕ್ಸ್ ಮಹೀಂದ್ರ; ಸ್ಯಾಂಗ್ಯೊಂಗ್ ಎಸ್‌ಯುವಿ ಭಾರತಕ್ಕೆ

By Nagaraja

ದೇಶದ ಕ್ರೀಡಾ ಬಳಕೆಯ ವಾಹನಗಳ ದೈತ್ಯ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ ಎಲ್ಲ ಹೊಸತನದಿಂದ ಕೂಡಿರುವ ಕಾರೊಂದನ್ನು ಪರಿಚಯಿಸಲು ಹೊರಟಿದೆ. ನಿಮಗೆಲ್ಲರಿಗೂ ತಿಳಿದಿರುವಂತೆಯೇ ದೇಶದ ಈ ಮುಂಚೂಣಿಯ ಸಂಸ್ಥೆಯು ದಕ್ಷಿಣ ಕೊರಿಯಾದ ಸ್ಯಾಂಗ್ಯೊಂಗ್ ಸಂಸ್ಥೆಯ ಅಧೀನತೆಯನ್ನು ಹೊಂದಿದೆ.

ಈಗ ಜನಪ್ರಿಯ ಸ್ಯಾಂಗ್ಯೊಂಗ್ ಕೊರಂಡೊ ಕ್ರೀಡಾ ಬಳಕೆಯ ವಾಹನವನ್ನು ದೇಶದಲ್ಲಿ ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಪ್ರಸ್ತುತ ದೇಶದಲ್ಲಿ ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಮಾತ್ರ ಮಾರಾಟದಲ್ಲಿದೆ.

ssangyong korando

ಇದರೊಂದಿಗೆ ಸ್ಯಾಂಗ್ಯೊಂಗ್ ಶ್ರೇಣಿಯ ವಾಹನಗಳ ಸಂಖ್ಯೆಯಲ್ಲಿ ವರ್ಧನೆಯುಂಟಾಗಲಿದೆ. ಇದು ಗ್ರಾಹಕರಿಗೆ ಮಗದೊಂದು ಆಕರ್ಷಕ ವಾಹನದ ಚಾಲನಾ ಅನುಭವ ಪಡೆಯಲು ನೆರವಾಗಲಿದೆ.

ಹಾಗಿದ್ದರೂ ಈ ಕಾಂಪಾಕ್ಟ್ ಎಸ್ ಯುವಿ ಕಾರಿನ ಬಿಡುಗಡೆ ಬಗ್ಗೆ ಮಹೀಂದ್ರದಿಂದ ಸ್ಪಷ್ಟ ಮಾಹಿತಿಗಳು ಬಂದಿಲ್ಲ. ಆದರೂ ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ತನ್ನ ಸಾನಿಧ್ಯ ಇನ್ನಷ್ಟು ಬಲಪಡಿಸುವ ಇರಾದೆಯಲ್ಲಿದೆ.

ssangyong korando

ಪೆಟ್ರೋಲ್ ಜೊತೆಗೆ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಸ್ಯಾಂಗ್ಯೊಂಗ್ ಕೊರಂಡೊ ಲಭ್ಯವಾಗಲಿದೆ. ಇನ್ನು ಎಂಜಿನ್ ತಾಂತ್ರಿಕತೆ ಬಗ್ಗೆ ಮಾಹಿತಿಗಳು ಇನ್ನಷ್ಟೇ ಹೊರಬೇಕಾಗಿದೆ. ಇನ್ನು ಭಾರತದಲ್ಲಿದು ಫೋರ್ಡ್ ಇಕೊಸ್ಪೋರ್ಟ್ ಹಾಗೂ ರೆನೊ ಡಸ್ಟರ್ ಗಳಂತಹ ವಾಹನಗಳ ಸವಾಲುಗಳನ್ನು ಎದುರಿಸಲಿದೆ. ಅಲ್ಲದೆ ಇದೇ ವಿಭಾಗದಲ್ಲಿ ಇನ್ನಷ್ಟೇ ಬಿಡುಗಡೆಯಾಗಲಿರುವ ಹ್ಯುಂಡೈ ಐಎಕ್ಸ್25 ಮತ್ತು ಹೋಂಡಾ ಎಚ್ ಆರ್ ವಿ ಮಾದರಿಗಳಿಗೂ ಪೈಪೋಟಿ ಒಡ್ಡಲಿದೆ.

More from DriveSpark

Article Published On: Saturday, April 11, 2015, 15:54 [IST]
English summary
Ssangyong currently offers a single product in India in the form of Rexton SUV. The Korean automobile manufacturer is brought by Mahindra and they are planning on launching Korando in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+