ನ್ಯಾನೋ ಎಎಂಟಿ ಕಾರನ್ನು ನಿಮ್ಮದಾಗಿಸುವುದು ಹೇಗೆ?

By Nagaraja

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರು ಟಾಟಾ ಮೋಟಾರ್ಸ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ನ್ಯಾನೋ ಕಾರಿನ ಬಿಡುಗಡೆಗೂ ಮುಂಚಿತವಾಗಿ ವಿಶೇಷ ಅಭಿಯಾನವೊಂದನ್ನು ಆರಂಭಿಸಿದೆ. ಇದರಂತೆ ಈಗಿರುವ ನ್ಯಾನೋ ಗ್ರಾಹಕರು ನೆಕ್ಸ್ಟ್ ಜನರೇಷನ್ ಕಾರಿಗೆ ಅಪ್ ಗ್ರೇಡ್ ಮಾಡಿಕೊಳ್ಳಬಹುದಾಗಿದೆ.

ನ್ಯಾನೋ ಆರಂಭಿಸಿರುವ ನೂತನ ಪವರ್ ಆಫ್ 1+1 ಕಾರ್ಯಕ್ರಮದಂತೆ (Power of 1+1 programme) ಈಗಿರುವ ಗ್ರಾಹಕರು ಹೊಸತಾದ ನ್ಯಾನೋ (new GenX Nano)ಕಾರನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಇದರಂತೆ ಹಳೆಯ ನ್ಯಾನೋ ಗ್ರಾಹಕರಿಗೆ ಅತ್ಯುತ್ತಮ ಮಾರುಕಟ್ಟೆ ಬೆಲೆ ಸಿಗುವುದಲ್ಲದೆ ಹೆಚ್ಚುವರಿ 20,000 ರು.ಗಳ ವಿಶೇಷ ಬೋನಸ್ ಪಡೆಯುವ ಅವಕಾಶವಿರುತ್ತದೆ.

ಟಾಟಾ ನ್ಯಾನೋ

ಅಷ್ಟೇ ಯಾಕೆ ನೀವು ಇನ್ನೊಬ್ಬರಿಗೆ ಸಲಹೆ ಮಾಡುವ ಮೂಲಕ (referral) 5,000 ರು. ಗೆಲ್ಲಬಹುದಾಗಿದೆ. ಹಾಗೆಯೇ ಹಣಕಾಸು ಸಂಸ್ಥೆಗಳೊಂದಿಗೆ ಕೈಜೋಡಿಸಿಕೊಂಡಿರುವ ಟಾಟಾ ಆಕರ್ಷಕ ಬಡ್ಡಿದರಗಳಲ್ಲಿ ಕಾರು ಸಾಲವನ್ನು ಒದಗಿಸಲಿದೆ.

ಇವೆಲ್ಲವೂ ಟಾಟಾನ ನೂತನ ಹೊರಿಝೋನೆಕ್ಸ್ಟ್ ತಂತ್ರಜ್ಞಾನದ ಪಯಣದ ಭಾಗವಾಗಿರಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಾಯಾಂಕ್ ಪರೀಕ್ ತಿಳಿಸಿದ್ದಾರೆ. ಈಗ ಬರುವ ನೆಕ್ಸ್ಟ್ ಜನರೇಷನ್ ನ್ಯಾನೋದಲ್ಲಿ ಗರಿಷ್ಠ ತಂತ್ರಗಾರಿಕೆ ಹಾಗೂ ವಿನ್ಯಾಸ ನೀತಿಯನ್ನು ಅನುಸರಿಸಲಾಗಿದೆ.

ಇವೆಲ್ಲದಕ್ಕೂ ಮಿಗಿಲಾಗಿ ಬಡ ಹೆಣ್ಮಕ್ಕಳ ಒಂದು ವರ್ಷದ ವಿದ್ಯಾಭ್ಯಾಸಕ್ಕಾಗಿ ನೆರವು ಅವಕಾಶ ದೊರಕಲಾಗಿದೆ. ಇಲ್ಲಿ ನ್ಯಾನೋ ‘awesomeness'ವಿಭಿನ್ನತೆಗೆ ಕಾರಣವಾಗಲಿದೆ. ಇದಕ್ಕಾಗಿ ಸಂಸ್ಥೆಯು ಚೈಲ್ಡ್ ರೈಟ್ಸ್ ಆ್ಯಂಡ್ ಯೂ (ಸಿಆರ್ ವೈ) ಯೋಜನೆ ಆರಂಭಿಸಿದ್ದು, ಗ್ರಾಹಕರ ಪರವಾಗಿ ಹೆಣ್ಮಕ್ಕಳಿಗೆ ನೆರವು ಮಾಡಲಿದೆ. ಅಲ್ಲದೆ ಗ್ರಾಹಕರಿಗೆ ಸರ್ಟಿಫಿಕೇಟ್ ಸಹ ವಿತರಿಸಲಿದೆ.

More from DriveSpark

Article Published On: Wednesday, April 22, 2015, 9:27 [IST]
English summary
Tata Motors will be launching its all-new GenX Nano with AMT soon. They have now decided to provide a special offer for existing Nano customers. This new campaign is called Power of 1+1 programme.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+