ಟಾಟಾ ನ್ಯಾನೋ ಟ್ವಿಸ್ಟ್ ಮಗದೊಂದು ಅಗ್ಗದ ವೆರಿಯಂಟ್ ಬಿಡುಗಡೆ

Written By:

ಭಾರತದ ಅತಿ ದೊಡ್ಡ ವಾಹನ ತಯಾರಿಕ ಸಂಸ್ತೆಯಾಗಿರುವ ಟಾಟಾ ಮೋಟಾರ್ಸ್, ಜನಪ್ರಿಯ ನ್ಯಾನೋ ಟ್ವಿಸ್ಟ್ ಮಾದರಿಯಲ್ಲಿ ಮಗದೊಂದು ಅಗ್ಗದ ವೆರಿಯಂಟ್ ಬಿಡುಗಡೆ ಮಾಡಿದೆ. ನೂತನ ಟಾಟಾ ನ್ಯಾನೋ ಟ್ವಿಸ್ಟ್ ಬೇಸ್ ವೆರಿಯಂಟ್ ಟ್ವಿಸ್ಟ್ ಎಕ್ಸ್‌ಇ ಎಂದು ಅರಿಯಲ್ಪಡಲಿದೆ.

ದರ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)

 • ನ್ಯಾನೋ ಟ್ವಿಸ್ಟ್ ಎಕ್ಸ್‌ಇ ಬೇಸ್ ವೆರಿಯಂಟ್: 2.18 ಲಕ್ಷ ರು.
 • ನ್ಯಾನೋ ಟ್ವಿಸ್ಟ್ ಎಕ್ಸ್‌ಟಿ - 2.55 ಲಕ್ಷ ರು.

ಎಂಜಿನ್ ತಾಂತ್ರಿಕತೆ

ಟಾಟಾ ನ್ಯಾನೋ ಎಕ್ಸ್‌ಇ 624 ಸಿಸಿ ಟು ಸಿಲಿಂಡರ್ ಎಂಪಿಎಫ್‌ಐ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 37.46 ಅಶ್ವಶಕ್ತಿ (51 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 4 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇರಲಿದ್ದು, ಗಂಟೆಗೆ ಗರಿಷ್ಠ 105 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ವಿನ್ಯಾಸ

ಸಾಮಾನ್ಯ ಮಾದರಿಗೆ ವಿನ್ಯಾಸ ಸಾಮತ್ಯೆಯನ್ನು ಹೊಂದರುವ ಹೊಸ ಟ್ವಿಸ್ಟ್ ಎಂಟ್ರಿ ಲೆವೆಲ್ ವೆರಿಯಂಟ್ ವರ್ಣಮಯ ಬಂಪರ್ ಹಾಗೂ ಮಿರರ್ ಪಡೆಯಲಿದೆ. ಆದರೆ ವೀಲ್ ಕ್ಯಾಪ್ ಕೊರತೆ ಅನುಭವಿಸಲಿದೆ.

ಬಣ್ಣಗಳು

 • ಮೀಟಿಯರ್ ಸಿಲ್ವರ್,
 • ರಾಯಲ್ ಗೋಲ್ಡ್,
 • ಸೈರನ್ ವೈಟ್

ವೈಶಿಷ್ಟ್ಯಗಳು

 • ಎಲೆಕ್ಟ್ರಿಕ್ ಪವರ್ ಅಸಿಸ್ಟಡ್ ಸ್ಟೀರಿಂಗ್,
 • ಎಲೆಕ್ಟ್ರಾನಿಕ್ ಟ್ರಿಪ್ ಮೀಟರ್,
 • ಸರಾಸರಿ ಇಂಧನ ಕ್ಷಮತೆ,
 • ಎಲ್‌ಇಡಿ ಡಿಜಿಟಲ್ ಕ್ಲಾಕ್,
 • ಎಸಿ,
 • ಹಿಂಬದಿ ಸೀಟು ಮಡಚುವುದು

ಸುರಕ್ಷತೆ

 • ರೇಡಿಯಲ್ ಟ್ಯೂಬ್‌ಲೆಸ್ ಬ್ರೇಕ್,
 • ಬೂಸ್ಟರ್ ಅಸಿಸ್ಟಡ್ ಬ್ರೇಕ್,
 • ಸೆಂಟರ್ ಹೈ ಮೌಂಟ್ ಸ್ಟಾಂಪ್ ಲ್ಯಾಂಪ್,
 • ಮುಂಭಾಗ ಹಾಗೂ ಹಿಂಭಾಗದಲ್ಲಿ ಸೀಟು ಬೆಲ್ಟ್.

ಕಾರು ಹೋಲಿಸಿ

ಟಾಟಾ ನ್ಯಾನೊ
ಟಾಟಾ ನ್ಯಾನೊ ಮಾದರಿ ಆಯ್ಕೆ ಮಾಡಿ
-- ಹೋಲಿಕೆಗಾಗಿ ಆಯ್ಕೆ ಮಾಡು --
English summary
Indian automobile giant Tata Motors has launched the base model for its Nano Twist. This new trim level is being called as the Twist XE variant.
Story first published: Friday, February 13, 2015, 12:28 [IST]
Please Wait while comments are loading...

Latest Photos