ವರ್ಷಂಪ್ರತಿ ಎರಡು ಮಾದರಿ ಬಿಡುಗಡೆ: ಟಾಟಾ ಯೋಜನೆ
ಭಾರತದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಮುಂಬರುವ ವರ್ಷಗಳಿಗೆ ಸ್ಪಷ್ಟವಾದ ಯೋಜನೆ ಹೊಂದಿದ್ದು, 2020ರ ವರೆಗೆ ವರ್ಷಂಪ್ರತಿ ಎರಡು ಪ್ರಮುಖ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.
ಕಳೆದ ಸಾಲಿನಲ್ಲಿ ಹೊಸತಾದ ಹೊರಿಝೋನ್ ನೆಕ್ಸ್ಟ್ ಸಿದ್ಧಾಂತದಲ್ಲಿ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಬಿಡುಗಡೆ ಮಾಡಿದ್ದ ಟಾಟಾ ಸಂಸ್ಥೆಯು ಹೊಸ ವರ್ಷದಲ್ಲಿ ಈಗಷ್ಟೇ ಬೋಲ್ಟ್ ಹ್ಯಾಚ್‌ಬ್ಯಾಕ್ ಕಾರನ್ನು ಬಿಡುಗಡೆ ಮಾಡಿದೆ.

ಈ ಮೂಲಕ ಪ್ರತಿಸ್ಪರ್ಧಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿರುವ ಟಾಟಾ ಮುಂಬರುವ ದಿನಗಳಷ್ಟು ಇನ್ನಷ್ಟು ಆಕ್ರಮಣಕಾರಿ ಮಾರಾಟ ತಂತ್ರವನ್ನು ಅನುಸರಿಸಲಿರುವುದು ಖಚಿತಗೊಂಡಿದೆ.
ಕಳೆಗುಂದಿರುವ ಮಾದರಿಗಳನ್ನು ಬದಿಗಿರಿಸಿ ಹೊಸ ಹೊಸ ಕಾರುಗಳನ್ನು ಬಿಡುಗಡೆ ಮಾಡುವುದು ಟಾಟಾ ಗುರಿಯಾಗಿದೆ. ಅಂತೆಯೇ ಉತ್ಪನ್ನದ ಗುಣಮಟ್ಟವನ್ನು ಕಾಯ್ದುಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದೆ.


Click it and Unblock the Notifications








