ಟಾಟಾ ಸೂಪರ್ ಏಸ್ ಮಿಂಟ್ ಸಣ್ಣ ಪಿಕಪ್ ಬಿಡುಗಡೆ

By Nagaraja

ವಾಣಿಜ್ಯ ವಿಭಾಗದಲ್ಲಿ ಉತ್ತುಂಗಕ್ಕೇರಿರುವ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಮಗದೊಂದು 'ಸೂಪರ್ ಏಸ್ ಮಿಂಟ್' ಸಣ್ಣ ಪಿಕಪ್ ಟ್ರಕ್ ಅನ್ನು ಬಿಡುಗಡೆಗೊಳಿಸಿದೆ. ಇದು ನಿರ್ವಹಣೆ, ಸ್ಥಿರತೆ, ಆರಾಮ, ಉನ್ನತ ಸವಾರಿ, ಹ್ಯಾಂಡ್ಲಿಂಗ್, ಶೈಲಿ ಮತ್ತು ಮಾಲಿಕತ್ವ ವೆಚ್ಚದಲ್ಲಿ ವಿಶಿಷ್ಟ ಸಂಯೋಜನೆಯನ್ನು ಪಡೆದುಕೊಂಡಿರಲಿದೆ.

ಇಂದಿನ ವಿಪರೀತ ವಾಹನ ದಟ್ಟಣೆಯ ನಡುವೆ ಟಾಟಾ ಮೋಟಾರ್ಸ್ ಸೂಪರ್ ಏಸ್ ಮಿಂಟ್ ಟ್ರಕ್ ಹೆಚ್ಚು ಸುರಕ್ಷಿತ, ದೃಢವಾದ, ಆರ್ಥಿಕ ಹಾಗೂ ಅನುಕೂಲಕಾರ ಸಾರಿಗೆಯನ್ನು ಒದಗಿಸಲಿದೆ. ಇದು ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಸಣ್ಣ ವ್ಯವಹಾರದ ಉದ್ಯಮಗಳಿಗೆ ಹೆಚ್ಚು ಯೋಗ್ಯವೆನಿಸಲಿದೆ.

tata superace mint

ಮುಖ್ಯಾಂಶಗಳು
  • ಬೆಲೆ: 5.09 ಲಕ್ಷ ರು. (ಎಕ್ಸ್ ಶೋರೂಂ ಥಾಣೆ)
  • ಉನ್ನತ ಸವಾರಿ, ಹ್ಯಾಂಡ್ಲಿಂಗ್,
  • 1.4 ಲೀಟರ್ ಡಿಕೋರ್ (DiCOR) ಕಾಮನ್ ರೈಲ್ ಬಿಎಸ್4 ಎಂಜಿನ್,
  • 70 ಅಶ್ವಶಕ್ತಿ,
  • ಮೈಲೇಜ್ 17.9 kmpl
  • ಗಂಟೆಗೆ ಗರಿಷ್ಠ ವೇಗ 125 kmph

ಗ್ರಾಹಕರ ಬೇಡಿಕೆಯನ್ನು ಅರಿತುಕೊಂಡು ಸಂಸ್ಥೆಯು ಹೊಸ ವಿಭಾಗವನ್ನು ರಚಿಸಿದೆ. ಇದು ಶಕ್ತಿ, ಮೈಲೇಜ್ ಹಾಗೂ ಲೋಡ್ ಸಾಮರ್ಥ್ಯದಲ್ಲಿ ಅತ್ಯುತ್ತಮ ಸಂಯೋಜನೆಯನ್ನು ಹೊಂದಿರಲಿದೆ. ಈ ಮೂಲಕ ಟಾಟಾ ಏಸ್ ಕುಟುಂಬದಲ್ಲಿ ಹೊಸ ಆತಿಥಿಯ ಸೇರ್ಪಡೆಯಾಗಲಿದೆ.

tata superace mint

ಟಾಟಾ ಸೂಪರ್ ಏಸ್ ಮಿಂಟ್ ಸಣ್ಣ ಪಿಕಪ್ ಟ್ರಕ್‌ನಲ್ಲಿ 1.4 ಲೀಟರ್ ಡಿಕೋರ್ (ಕಾಮನ್ ರೈಲ್) ಬಿಎಸ್‌4 ಎಂಜಿನ್ ಬಳಕೆ ಮಾಡಲಾಗಿದ್ದು, 70 ಅಶ್ವಶಕ್ತಿ ಉತ್ಪಾದಿಸುತ್ತದೆ. ಹಾಗೆಯೇ ಸ್ಟ್ಯಾಂಡರ್ಡ್ ಪವರ್ ಸ್ಟೀರಿಂಗ್, ಹೊಂದಾಣಿಸಬಹುದಾದ ಚಾಲಕ ಹಾಗೂ ಸಹ ಚಾಲಕ ಫ್ಯಾಬ್ರಿಕ್ ಸೀಟು ಜೊತೆ ಹೆಡ್ ರೆಸ್ಟ್ ಮುಂತಾದ ಸೌಲಭ್ಯಗಳು ಇರಲಿದೆ.

ಅಷ್ಟೇ ಅಲ್ಲದೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಇದರಲ್ಲಿ ಮೂರು ಪಾಯಿಂಟ್ ಹಿಂತೆಗೆದುಕೊಳ್ಳುವ ಸೀಟು ಬೇಲ್ಟ್, ಸೈಡ್ ಇಂಪಾಕ್ಟ್ ಬೀಮ್ (ಢಿಕ್ಕಿ ವೇಳೆಯಲ್ಲಿ ರಕ್ಷಣೆಗಾಗಿ), ಉದ್ದವಾದ ಚಕ್ರಾಂತರ (2380 ಎಂಎಂ) ಮುಂತಾದ ವ್ಯವಸ್ಥೆಗಳು ಇರಲಿದೆ. ಇನ್ನು ಮುಂಭಾಗದಲ್ಲಿ ಡಿಸ್ಕ್ ಹಾಗೂ ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಇರಲಿದೆ.

ಅಂದ ಹಾಗೆ ನಾಲ್ಕು ಆಖರ್ಷಕ ಬಣ್ಣಗಳಲ್ಲಿ ಲಭ್ಯವಿರುವ ಟಾಟಾ ಸೂಪರ್ ಏಸ್ ಮಿಂಟ್ ಪಿಕಪ್ ಟ್ರಕ್ (ಬ್ಲೇಜಿಂಗ್ ರೆಡ್, ಕಾಸ್ಟಲ್ ಗ್ರೇ, ಆರ್ಕಟಿಕ್ ವೈಟ್, ಮಿಟಿಯರ್ ಸಿಲ್ವರ್) ಥಾಣೆ ಎಕ್ಸ್ ಶೋ ರೂಂ ಬೆಲೆ 5.09 ಲಕ್ಷ ರು.ಗಳಾಗಿರಲಿದೆ. ಅಲ್ಲದೆ ಇಂದಿನಿಂದಲೇ ಟಾಟಾ ಅಧಿಕೃತ ಡೀಲರುಗಳ ಬಳಿ ಮಾರಾಟಕ್ಕೆ ಲಭ್ಯವಿರಲಿದೆ.

More from DriveSpark

Article Published On: Wednesday, March 4, 2015, 7:34 [IST]
English summary
Tata Motors today announced the launch of a new Small Pick-up, the Tata SuperAce Mint, Launched at a starting price of Rs. 5.09 Lakhs, ex-showroom, Thane.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+