ನ್ಯಾನೋ ಜೆನ್ ಎಕ್ಸ್ ಬಿಡುಗಡೆಗೆ ಕ್ಷಣಗಣನೆ
ದೇಶದ ಅತಿ ಕಡಿಮೆ ಬೆಲೆಯ ನ್ಯಾನೋ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಅಥವಾ ಈಸಿ ಶಿಫ್ಟ್ ಜೆನ್ ಎಕ್ಸ್ ಕಾರು ನಾಳೆ ಮಂಗಳವಾರದಂದು (2015 ಮೇ 19) ಬಿಡುಗಡೆಯಾಗಲಿದೆ.
ಸಣ್ಣ ಕಾರಿನ ದೊಡ್ಡತನ; ಇದುವೇ ಟಾಟಾ ನ್ಯಾನೋ ಜೆನ್ ಎಕ್ಸ್
ಪ್ರಮುಖವಾಗಿಯೂ ಎರಡು ಪ್ರಮುಖ ಬದಲಾವಣೆಗಳು ಹೊಸ ನ್ಯಾನೋ ಜೆನ್ ಎಕ್ಸ್ ಕಾರಿನಲ್ಲಿ ಕಂಡುಬರಲಿದೆ. ಅವುಗಳೆಂದರೆ,
ಎಎಂಟಿ ಅಥವಾ ಈಸಿ ಶಿಫ್ಟ್ ಮತ್ತು
ತೆರೆಯಬಹುದಾದ ಢಿಕ್ಕಿ ಬಾಗಿಲು

ಇವೆಲ್ಲದರ ಜೊತೆಗೆ ಇನ್ನಷ್ಟು ದೊಡ್ಡ ಎಂಜಿನ್ ಟ್ಯಾಂಕ್ ಹೊಸ ನ್ಯಾನೋ ಕಾರಿನಲ್ಲಿ ಕೊಡಲಾಗಿದೆ. ಇದು ಪರಿಪೂರ್ಣ ಸಿಟಿ ಕಾರೆನಿಸಿಕೊಳ್ಳಸಲು ಸಹಕಾರಿಯಾಗಲಿದೆ. ಇನ್ನು ಎಲೆಕ್ಟ್ರಿಕ್ ಪವರ್ ಅಸಿಸ್ಟಡ್ ಸ್ಟೀರಿಂಗ್ (ePAS), ಸ್ಪೈಲಿಂಗ್ ಗ್ರಿಲ್, ಪರಿಷ್ಕೃತ ಬಂಪರ್, ಸ್ಪೋಕ್ಡ್ ಹೆಡ್ ಲೈಟ್ ಹಾಗೂ ಫಾಗ್ ಲ್ಯಾಂಪ್ ಹೊಸ ನ್ಯಾನೋದ ಆಕರ್ಷಣೆಯಾಗಿರಲಿದೆ.
ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಇದು 624 ಸಿಸಿ ಟ್ವಿನ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 38.19 ಅಶ್ವಶಕ್ತಿ (51 ತಿರುಗುಬಲ) ಉತ್ಪಾದಿಸಲಿದೆ. ಅಂತಿಮವಾಗಿ ಹೊಸ ನ್ಯಾನೋ ಜೆನ್ ಎಕ್ಸ್ 2.5 ಲಕ್ಷ ರು.ಗಳಿಂದ 3 ಲಕ್ಷ ರು.ಗಳಷ್ಟು ದುಬಾರಿಯಾಗುವ ಸಾಧ್ಯತೆಯಿದೆ. ಅಂತೆಯೇ ಟಾಪ್ ಎಂಡ್ ವೆರಿಯಂಟ್ ನಲ್ಲಿ ಮಾತ್ರ ಎಎಂಟಿ ಸೌಲಭ್ಯವಿರಲಿದೆ.


Click it and Unblock the Notifications








