ಟ್ಯಾಕ್ಸಿಫಾರ್‌ಶ್ಯೂರ್‌ನಲ್ಲೀಗ ಆಟೋ ರಿಕ್ಷಾ ಬುಕ್ ಮಾಡಿ
ಆಟೋ ರಿಕ್ಷಾಗಿಂತಲೂ ಕಡಿಮೆ ದರಗಳಲ್ಲಿ ನ್ಯಾನೋ ಟ್ಸಾಕ್ಸಿ ಸೇವೆ ಒದಗಿಸುವ ಮೂಲಕ ದೇಶದ್ಯಾಂತ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಟ್ಯಾಕ್ಸಿಫಾರ್‌ಶ್ಯೂರ್ ಸಂಸ್ಥೆಯೀಗ ಮಗದೊಮ್ಮೆ ಗಮನ ಸೆಳೆಯುವಲ್ಲಿ ಯಶ ಕಂಡಿದ್ದು, ಗ್ರಾಹಕರಿಗಾಗಿ ಆಟೋ ರಿಕ್ಷಾ ಬುಕ್ಕಿಂಗ್ ಸೇವೆಯನ್ನು ಆರಂಭಿಸಿದೆ.
ನಿಮ್ಮ ಮೊಬೈಲ್‌ನಲ್ಲಿ ಟ್ಯಾಕ್ಸಿ ಫಾರ್ ಶ್ಯೂರ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿ ಇದನ್ನು ಬಳಕೆ ಮಾಡಬಹುದಾಗಿದೆ. ನ್ಯಾನೋ ಕಾರಿನ ಜೊತೆಗೆ ಈಗ ಆಟೋ ಸೇವೆಯನ್ನು ಗ್ರಾಹಕರು ಪಡೆಯಬಹುದಾಗಿದೆ.

ನ್ಯಾನೋಗೆ ಹೋಲಿಸಿದರೆ ಆಟೋ ಶುಲ್ಕ ಸ್ವಲ್ಪ ದುಬಾರಿಯೆನಿಸಿದೆ. ಬೆಂಗಳೂರು ತಳಹದಿಯ ತ್ರಿ ವೀಲ್ಸ್ ಯುನೈಟೆಡ್ ಜೊತೆ ಸೇರಿಕೊಂಡು ಆಟೋ ರಿಕ್ಷಾ ಸೇವೆಯನ್ನು ಟ್ಯಾಕ್ಸಿಫಾರ್‌ಶ್ಯೂರ್ ಆರಂಭಿಸಿದೆ. ಅಂತೆಯೇ ಆರಂಭದಲ್ಲಿ 500 ಆಟೋ ರಿಕ್ಷಾಗಳನ್ನು ಪರಿಚಯಿಸಲಾಗುವುದು ಎಂದಿದೆ.
ಶುಲ್ಕ ವಿವರ ಇಂತಿದೆ:
ನ್ಯಾನೋ:
ಮೊದಲ 2 ಕೀ.ಮೀ. ರು. 25 ಹಾಗೂ ನಂತರದ ಪ್ರತಿ ಕೀ.ಮೀ. ಹೆಚ್ಚುವರಿ 10 ರು. ತಗಲುವುದು.
ಆಟೋ ರಿಕ್ಷಾ:
ಮೊದಲ 1.8 ಕೀ.ಮೀ. ರು. 25 ಹಾಗೂ ನಂತರದ ಪ್ರತಿ ಕೀ.ಮೀ. ಹೆಚ್ಚುವರಿ 13 ರು. ತಗಲುವುದು.
ಟಾಟಾ ಇಂಡಿಕಾ ಎಸಿ:
ಮೊದಲ 4 ಕೀ.ಮೀ. ರು. 49 ಹಾಗೂ ನಂತರದ ಪ್ರತಿ ಕೀ.ಮೀ. ಹೆಚ್ಚುವರಿ 14 ರು. ತಗಲುವುದು.
ಸೆಡಾನ್
ಮೊದಲ 4 ಕೀ.ಮೀ. ರು. 49 ಹಾಗೂ ನಂತರದ ಪ್ರತಿ ಕೀ.ಮೀ. ಹೆಚ್ಚುವರಿ 16 ರು. ತಗಲುವುದು.


Click it and Unblock the Notifications








