ಇವುಗಳೇ ದೇಶದ ಅತಿ ಕೆಟ್ಟ 10 ಕಾರುಗಳು; ಒಪ್ತೀರಾ?
ಬಜೆಟ್ ಕಾರುಗಳನ್ನು ನಿರ್ಮಿಸುವ ಸಹವಾಸದಲ್ಲಿ ದೇಶದ ಕೆಲವು ಜನಪ್ರಿಯ ಸಂಸ್ಥೆಗಳು ವಿನ್ಯಾಸ ನೀತಿಯನ್ನು ಮರೆತು ಬಿಟ್ಟಂತಿದೆ. ಪರಿಣಾಮ ಅತಿ ಕೆಟ್ಟ ವಿನ್ಯಾಸದ ಕಾರು ನಿರ್ಮಾಣಕ್ಕೆ ಎಡೆ ಮಾಡಿಕೊಟ್ಟಿದೆ.
ವಿಸ್ತಾರವಾಗಿ ಹರಡಿರುವ ದೇಶದ ಪ್ರಯಾಣಿಕ ಕಾರು ಮಾರುಕಟ್ಟೆ ಪರಿಗಣಿಸಿದಾಗ ಮಾರುತಿ ಸುಜುಕಿ, ಹ್ಯುಂಡೈ, ಹೋಂಡಾ, ಮಹೀಂದ್ರ ಹಾಗೂ ಟಾಟಾ ಸಂಸ್ಥೆಗಳು ಹೆಚ್ಚಿನ ಜನಪ್ರಿಯತೆಯನ್ನು ಕಾಪಾಡಿಕೊಂಡಿದೆ. ಹಾಗಿದ್ದರೂ ಕೆಲವು ಮಾದರಿಗಳನ್ನು ನೋಡಿದಾಗ ಮನಸ್ಸಿನಲ್ಲಿ ಕೆಟ್ಟ ಭಾವ ಮೂಡುತ್ತದೆ. ಹೀಗೆ ಪಟ್ಟಿ ಮಾಡಬಹುದಾದ 15 ಲಕ್ಷ ರು.ಗಳ ಬಜೆಟ್ ನಲ್ಲಿ ಕಂಡುಬಂದಿರುವ 10 ಕೆಟ್ಟ ಕಾರುಗಳನ್ನು ನಾವಿಂದು ಪರಿಚಯಿಸಲಿದ್ದೇವೆ.

01. ಟಾಟಾ ನ್ಯಾನೋ
ಈ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿ ಗುರುತಿಸಿಕೊಳ್ಳುವುದು ಖಂಡಿತವಾಗಿಯೂ ಅದು ಟಾಟಾ ನ್ಯಾನೋ ಆಗಿರಬಹುದು. ಏನು ಮಾಡಲು ಹೋಗಿ ಏನು ಮಾಡಿದೇ ನೀನು? ವಿಶ್ವದ ಅತಿ ಅಗ್ಗದ ಕಾರೆಂಬ ಕೀರ್ತಿ ಗಿಟ್ಟಿಸಲು ಹೋಗಿ ಕೊನೆಗೆ ಟಾಟಾ ನ್ಯಾನೋ ಆ ನೀತಿಯೇ ಮುಳುವಾಯಿತೇ ?

02. ಷೆವರ್ಲೆ ಬೀಟ್
ಸಣ್ಣ ಕಾರು ವಿಭಾಗದಲ್ಲಿ ಒಂದು ಸುಂದರ ಕಾರು ನಿರ್ಮಿಸುವ ಇರಾದೆ ಷೆವರ್ಲೆಯದ್ದಾಗಿತ್ತು. ಈ ಯೋಜನೆಯಲ್ಲಿ ಬಹುತೇಕ ಯಶಸ್ಸನ್ನು ಕಂಡಿದೆ. ಆದರೂ ಗ್ರಾಹಕರ ಮನ ಗೆಲ್ಲುವಲ್ಲಿ ಮಾತ್ರ ವಿಫಲವಾಗಿದೆ.

03. ಟೊಯೊಟಾ ಲಿವಾ
ಬ್ರಾಂಡ್ ಯಾವುದಾದರೂ ಪರವಾಗಿಲ್ಲ. ಕಾರು ಅತ್ಯುತ್ತಮವಾದರೆ ಸಾಕು. ಭಾರತೀಯರು ಹಿಂದು ಮುಂದೂ ನೋಡದೇ ಬರಮಾಡಿಕೊಳ್ಳುತ್ತಾರೆ. ಆದರೆ ಲಿವಾ ಪಾಲಿಗಿದು ವರ್ಕೌಟ್ ಆಗಿಲ್ಲ.

04. ಮಹೀಂದ್ರ ಕ್ವಾಂಟೊ
ತಾವು ಏನೇ ಮಾಡಿದರೂ ವಾಹನ ಪ್ರೇಮಿಗಳು ಸ್ವೀಕರಿಸುತ್ತಾರೆಂಬ ಮಹೀಂದ್ರ ಅತಿಯಾಸೆಗೆ ಪೆಟ್ಟು ಬಿದ್ದಿದ್ದೇ ಇಲ್ಲಿ. ಪರಿಣಾಮ ಕ್ವಾಂಟೊ ಎಂಬ ಎಂಪಿವಿ ಮಾದರಿ ಹಿನ್ನೆಡೆ ಅನುಭವಿಸಬೇಕಾಯಿತು.

05. ಮಾರುತಿ ರಿಟ್ಜ್
ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಹಾಗಿದ್ದರೂ ಈಗಲೂ ಒಂದು ವಿಭಾಗದ ಜನರು ರಿಟ್ಜ್ ಕಾರನ್ನು ಇಷ್ಟಪಡುತ್ತಾರೆ.

06. ಹೋಂಡಾ ಬ್ರಿಯೊ
ಹೋಂಡಾ ವೈಫಲ್ಯದ ಸಾಲಿನಲ್ಲಿ ಬ್ರಿಯೊ ಕಾರನ್ನು ಸೇರಿಸಬಹುದಾಗಿದೆ. ಇಲ್ಲಿ ವಿನ್ಯಾಸಗಿಂತಲೂ ಮಿಗಿಲಾಗಿ ಬೆಲೆ, ನಿರ್ವಹಣೆ ಹಾಗೂ ಸರ್ವಿಸ್ ಹಾಗೂ ಡೀಲರ್ ಜಾಲವು ಪ್ರಮುಖ ಪಾತ್ರವನ್ನು ವಹಿಸುತ್ತದೆ.

07. ರೇವಾ ಇ2ಒ ಎಲೆಕ್ಟ್ರಿಕ್ ಕಾರು
ಸಾಮಾನ್ಯ ಕಾರುಗಿಂತಲೂ ಭಿನ್ನವಾಗಿ ನಗರ ಪ್ರದೇಶದ ಚಾಲನೆಗೆ ಮಾತ್ರ ಸೀಮಿತವಾಗಿರುವ ರೇವಾ ಇ2ಒ ಗ್ರಾಹಕರ ಎರಡನೇ ಕಾರಾಗಿ ಹೊರಹೊಮ್ಮುವಲ್ಲಿ ನಿರೀಕ್ಷಿಸಿದಷ್ಟು ಯಶ ಕಂಡಿಲ್ಲ.

08. ನಿಸ್ಸಾನ್ ಸನ್ನಿ/ರೆನೊ ಸ್ಕಾಲಾ
ನಿಸ್ಸಾನ್ ಸನ್ನಿ ಲಾಂಛನ ಪರಿವರ್ತನೆಯಾದಾಗ ರೂಪುಗೊಂಡಿರುವ ಕಾರೇ ರೆನೊ ಸ್ಕಾಲಾ ಆಗಿರುವುದರಿಂದ ಇವೆರಡನ್ನು ಒಂದೇ ಪಟ್ಟಿಯಲ್ಲಿಡಲಾಗಿದೆ. ಏನೇ ಮಾಡಿದರೂ ನಿಸ್ಸಾನ್ ಸನ್ನಿ ಹಾಗೂ ರೆನೊ ಸ್ಕಾಲಾ ಯಶಸ್ಸು ಮಾತ್ರ ಪರಿಮಿತವಾಗಿದೆ.

09. ಟಾಟಾ ಮಾಂಝಾ, ಮೂವಸ್, ಆರಿಯಾ
ಟಾಟಾ ವೈಫಲ್ಯಗಳ ಕಾರುಗಳನ್ನು ಪಟ್ಟಿ ಮಾಡ ಹೊರಟರೆ ಬಹುಶ: ಈ ಪುಟವೇ ಸಾಲದು. ಇಲ್ಲಿ ಕೆಟ್ಟ ವಿನ್ಯಾಸಗಳ ಸಾಲಿನಲ್ಲಿ ಟಾಟಾ ಮಾಂಝಾ, ಮೂವಸ್ ಹಾಗೂ ಆರಿಯಾ ಸಹ ಸೇರಿಸಬಹುದಾಗಿದೆ.

10. ಮಹೀಂದ್ರ ವೆರಿಟೊ ವೈಬ್
ವೆರಿಟೊ ವೈಬ್ ಮುಖಾಂತರ ಹೊಸ ವಿನ್ಯಾಸ ತಂತ್ರಗಾರಿಕೆಗೆ ಮೊರೆ ಹೋಗಿದ್ದ ಮಹೀಂದ್ರ ಸಂಸ್ಥೆಗೆ ಭಾರಿ ಹಿನ್ನೆಡೆಯುಂಟಾಗಿದೆ. ಪರಿಣಾಮ ಮಾರಾಟದಲ್ಲೂ ಕುಸಿತ ಅನುಭವಿಸಿದೆ.


Click it and Unblock the Notifications








