ಮೋದಿ ಎಫೆಕ್ಟ್; ಭಾರತದಲ್ಲಿ ಟೆಸ್ಲಾ ವಿದ್ಯುತ್ ಕಾರು ಬ್ಯಾಟರಿ ಘಟಕ
2015 ಸೆಪ್ಟೆಂಬರ್ ತಿಂಗಳಾಂತ್ಯದಲ್ಲಿ ಅಮೆರಿಕ ಭೇಟಿಯಲ್ಲಿದ್ದ ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಗತ್ತಿನ ಮುಂಚೂಣಿಯ ವಿದ್ಯುತ್ ಚಾಲಿತ ಕಾರು ತಯಾರಿಕ ಸಂಸ್ಥೆ ಟೆಸ್ಲಾ ಮೋಟಾರ್ಸ್‌ನ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದರು.
Also Read: ಟೆಸ್ಲಾ ವಿದ್ಯುತ್ ಕಾರು ಘಟಕಕ್ಕೆ ಮೋದಿ ಭೇಟಿ; ಅಜೆಂಡಾ ಏನು? ಮುಂದಕ್ಕೆ ಓದಿ
ಕ್ಯಾಲಿಫೋರ್ನಿಯಾದ ಪಾವೊ ಆಲ್ಟೊದಲ್ಲಿರುವ ಟೆಸ್ಲಾ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದ ನರೇಂದ್ರ ಮೋದಿ, ಭವಿಷ್ಯತ್ತಿನ ವಾಹನ ವಿನ್ಯಾಸ, ತಂತ್ರಗಾರಿಕೆ ಹಾಗೂ ಚೈತನ್ಯ ಬಳಕೆಯ ಬಗ್ಗೆ ಅಲ್ಲಿನ ಸಂಸ್ಥೆಯ ಪ್ರತಿನಿಧಿಗಳಿಂದ ಮಾಹಿತಿ ಗಿಟ್ಟಿಸಿಕೊಂಡಿದ್ದರು. ಈ ವೇಳೆಯಲ್ಲಿ ಸುಸ್ಥಿರ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಪರ್ಯಾಯ ಚೈತನ್ಯದ ವ್ಯವಸ್ಥೆಯನ್ನು ರೂಪಿಸಲು ಸ್ಪಷ್ಟ ವೇದಿಕೆವೊದಗಿಸುವುದಕ್ಕೆ ಸಂಬಂಧಿಸಿದಂತೆ ಚರ್ಚೆಯೂ ನಡೆಸಲಾಗಿತ್ತು.

ಇದರ ಭವಿಷ್ಯತ್ ಪರಿಣಾಮವೆಂಬಂತೆ ಖುಷಿಯನ್ನುಂಟು ಮಾಡುವ ಸುದ್ದಿಯೊಂದರಲ್ಲಿ ಭಾರತದಲ್ಲೇ ವಿದ್ಯುತ್ ಚಾಲಿತ ಕಾರು ಬ್ಯಾಟರಿ ಘಟಕಕ್ಕೆ ಚಾಲನೆ ನೀಡಲು ಟೆಸ್ಲಾ ಸಂಸ್ಥೆಯು ನಿರ್ಧರಿಸಿದೆ. ಇದು ಪರಿಸರ ಸ್ನೇಹಿ ವಾಹನ ಬೆಳವಣಿವನ್ನು ಪ್ರೋತ್ಸಾಹಿಸುತ್ತಿರುವ ಭಾರತದಂತಹ ದೇಶಕ್ಕೆ ಸಂದಿರುವ ದೊಡ್ಡ ಜಯ ಎನ್ನಬಹುದಾಗಿದೆ.

ಟೆಸ್ಲಾ ಭಾರತದಲ್ಲಿ ತೆರೆದುಕೊಳ್ಳಲಿರುವ ಎಲೆಕ್ಟ್ರಿಕ್ ವಾಹನ ಘಟಕವು 'ಗಿಗಾ ಫಾಕ್ಟರಿ' ಎಂದು ಹೆಸರಿಸಿಕೊಳ್ಳಲಿದ್ದು, ಇಲ್ಲಿಂದಲೇ ಲಿಥಿಯಂ ಇಯಾನ್ ಬ್ಯಾಟರಿ ನಿರ್ಮಾಣವಾಗಲಿದೆ.

ಭಾರತದಲ್ಲಿ ಹೂಡಿಕೆ ಮಾಡುವಂತೆ ಟೆಸ್ಲಾ ಮೋಟಾರ್ಸ್ ಸಂಸ್ಥೆಯಲ್ಲಿ ತಮ್ಮ ಭೇಟಿಯ ವೇಳೆ ಪ್ರಧಾನಿ ಮೋದಿ ಕೋರಿಕೊಂಡಿದ್ದರು. ಇದಾದ ಬಳಿಕ ಟ್ವೀಟಿಸಿರುವ ಟೆಸ್ಲಾ ಸಂಸ್ಥೆಯ ಸಿಇಒ ಎಲಾನ್ ಮಸ್ಕ್, "ದೀರ್ಘಾವಧಿಯ ಯೋಜನೆಯಲ್ಲಿ ಗರಿಷ್ಠ ಸ್ಥಳೀಯ ಬೇಡಿಕೆಯ ಹಿನ್ನೆಲೆಯಲ್ಲಿ ಗಿಗಾಫಾಕ್ಟರಿ ಭಾರತದಲ್ಲಿ ತೆರೆದುಕೊಳ್ಳುವುದು ಉಪಯುಕ್ತವೆನಿಸುವುದು" ಎಂದಿದ್ದಾರೆ.

ಸದ್ಯ ಅಮೆರಿಕದಲ್ಲಿ ಇದಕ್ಕೆ ಸಮಾನವಾದ ಫಾಕ್ಟರಿ ತೆರೆದುಕೊಳ್ಳಲಿರುವ ಟೆಸ್ಲಾ, 2017ರ ವೇಳೆಯಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಇರಾದೆಯಲ್ಲಿದೆ. ಇನ್ನೊಂದೆಡೆ ಭಾರತದಲ್ಲಿ ರಿಚಾರ್ಜ್ ಹಾಗೂ ಎನರ್ಜಿ ಶೇಖರಣೆ ಮಾಡುವ ಸಾಮರ್ಥ್ಯ ಹೊಂದಿರುವ ಲಿಥಿಯಂ ಬ್ಯಾಟರಿ ನಿರ್ಮಾಣದೊಂದಿಗೆ ಕಡಿಮೆ ವೆಚ್ಚದಲ್ಲಿ ಗರಿಷ್ಠ ನಿರ್ಮಾಣದ ಗುರಿ ಹೊಂದಿದೆ.

ಮೋದಿ ನೇತೃತ್ವದಲ್ಲಿ ಭಾರತವು 2022ರ ವೇಳೆಯಾಗುವಾಗ 100 ಗಿಗಾ ವ್ಯಾಟ್ ಸೌರಶಕ್ತಿ ಉತ್ಪಾದಿಸುವ ಯೋಜನೆ ಹೊಂದಿದೆ. ಈ ನಿಟ್ಟಿನಲ್ಲಿ ಮುಂದಿನ ಏಳು ವರ್ಷಗಳಲ್ಲಿ ಬರೋಬ್ಬರಿ 100 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ನಿರೀಕ್ಷೆ ಮಾಡುತ್ತಿದೆ.

ವಿದ್ಯುತ್ ಕಾರಿಗೆ ಚಾರ್ಜ್ ಮಾಡಿಸಲು 'ಲೋಹದ ಹಾವು' ಮುಂದಕ್ಕೆ ಓದಿ


Click it and Unblock the Notifications








