2015 ಹೊಸ ವರ್ಷ ಆಗಮನವಾದಂತೆಯೇ ಬಹುತೇಕ ಎಲ್ಲ ವಾಹನ ತಯಾರಿಕ ಸಂಸ್ಥೆಗಳು ತನ್ನೆಲ್ಲ ಮಾದರಿಗಳಿಗೂ ಬೆಲೆ ಏರಿಕೆಯನ್ನು ಘೋಷಿಸಿದೆ. ಇದರಿಂದ ಚಿಂತೆಗೀಡಾಗಿರುವ ಗ್ರಾಹಕರು ಹೊಸ ವರ್ಷದಲ್ಲಿ ಕಾರು ಖರೀದಿಸಬೇಕೇ ಎಂಬ ಗೊಂದಲದಲ್ಲಿದ್ದಾರೆ.
ಆದರೆ ಇವೆಲ್ಲಕ್ಕಿಂತಲೂ ವಿಭಿನ್ನವಾಗಿರುವ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಈ ಹೊಸ ವರ್ಷದ ಅವಧಿಯಲ್ಲಿ ಗ್ರಾಹಕರಿಗೆ ಗರಿಷ್ಠ ಪ್ರಯೋಜನ ನೀಡಲು ಮುಂದಾಗಿದೆ. ಹೌದು, ಟಾಟಾ ಸಂಸ್ಥೆಯು ಈ ಹೊಸ ವರ್ಷದಲ್ಲಿ ಮನೆಗೆ ಹೊಸ ಕಾರನ್ನು ತನ್ನಿ ಎಂಬ ವಿಶೇಷ ಆಫರ್ ಮುಂದಿಟ್ಟಿದೆ. 2015 ಜನವರಿ 7ರಿಂದ ಆರಂಭವಾಗಿರುವ ಈ ಆಫರ್ 31ರ ವರೆಗೆ ಅಥವಾ ಸ್ಟೋಕ್ ಖಾಲಿಯಾಗುವ ವೆರೆಗೆ ಮುಂದುವರಿಯಲಿದೆ.
ಹಾಗಿದ್ದರೂ ಟಾಟಾ ಆಫರ್ ಪಟ್ಟಿಯಲ್ಲಿ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಹಾಗೂ ಇನ್ನಷ್ಟೇ ಬಿಡುಗಡೆಯಾಗಬೇಕಾಗಿರುವ ಬೋಲ್ಟ್ ಹ್ಯಾಚ್‌ಬ್ಯಾಕ್ ಕಾರನ್ನು ಹೊರತುಪಡಿಸಲಾಗಿದೆ. ಈ ಸಂದರ್ಭದಲ್ಲಿ ಗ್ರಾಹಕರು ಗರಿಷ್ಠ 80,000 ರು.ಗಳ ವರೆಗೆ (ಎಕ್ಸ್ ಶೋ ರೂಂ. ದೆಹಲಿ, ಟಾಟಾ ಸಫಾರಿ ಸ್ಟ್ರೋಮ್) ಪ್ರಯೋಜನ ತಮ್ಮದಾಗಿಸಬಹುದಾಗಿದೆ.
ವಿ.ಸೂ: ಷರತ್ತುಗಳು ಅನ್ವಯ, ಈ ಎಲ್ಲ ಆಫರುಗಳು ಡೀಲರುಗಳಿಂದ ಮಾತ್ರ ಲಭ್ಯ.
ನ್ಯಾನೋ ಟ್ವಿಸ್ಟ್
ಗರಿಷ್ಠ ಪ್ರಯೋಜನ: 41,000 ರು.ಗಳ ವರೆಗೆ
ವೈಶಿಷ್ಟ್ಯಗಳು
- ಬೆಸ್ಟ್ ಇನ್ ಕ್ಲಾಸ್ ಎಸಿ,
- ಮೈಲೇಜ್ - 25 km/l
- 4 ವರ್ಷ/60,000 ಕೀ.ಮೀ. ವಾರಂಟಿ ಸೌಲಭ್ಯ
ಇಂಡಿಕಾ ಇವಿ2
ಗರಿಷ್ಠ ಪ್ರಯೋಜನ: 45,000 ರು.ಗಳ ವರೆಗೆ
ವೈಶಿಷ್ಟ್ಯಗಳು
- ಸಂಸ್ಕರಿಸಿದ ಸಿಆರ್4 ಎಂಜಿನ್,
- ಮೈಲೇಜ್ - 25 km/l
- ಸ್ಟೈಲಿಷ್ ಎಫ್ ಶಿಫ್ಟ್ ಗೇರ್ ಬಾಕ್ಸ್,
- ಡ್ಯುಯೊ ಫ್ಲೋಟ್ ಸಸ್ಪೆಷನ್,
- ಡ್ಯುಯಲ್ ಟೋನ್ ಇಂಟಿರಿಯರ್
ವಿಸ್ಟಾ
ಗರಿಷ್ಠ ಪ್ರಯೋಜನ: 35,000 ರು.ಗಳ ವರೆಗೆ
ವೈಶಿಷ್ಟ್ಯಗಳು
- ಟಚ್ ಸ್ಕ್ರೀನ್ ಮಲ್ಟಿ ಮಿಡೀಯಾ ಸಿಸ್ಟಂ ಜೊತೆ ಜಿಪಿಎಸ್,
- ಸಂಸ್ಕರಿಸಿದ 75 ಪಿಎಸ್ ಕ್ವಾಡ್ರಾಜೆಟ್ ಡೀಸೆಲ್ ಎಂಜಿನ್
- ಡ್ರೈವ್ ಪ್ರೊ ಕನ್ಸಾಲ್ ಮತ್ತು ಡಿಐಎಸ್
ಇಂಡಿಗೊ ಇಸಿಎಸ್
ಗರಿಷ್ಠ ಪ್ರಯೋಜನ: 30,000 ರು.ಗಳ ವರೆಗೆ
ವೈಶಿಷ್ಟ್ಯಗಳು
- ಸಂಸ್ಕರಿಸದ ಸಿಆರ್4 ಎಂಜಿನ್,
- ಮೈಲೇಜ್ - 25 km/l
- ಡ್ಯುಯೊ ಫ್ಲೋಟ್ ಸಸ್ಪೆಷನ್,
- ಮ್ಯೂಸಿಕ್ ಸಿಸ್ಟಂ.
ಸುಮೋ ಗೋಲ್ಡ್
ಗರಿಷ್ಠ ಪ್ರಯೋಜನ: 35,000 ರು.ಗಳ ವರೆಗೆ
ವೈಶಿಷ್ಟ್ಯಗಳು
- ಶಕ್ತಿಶಾಲಿ 3 ಲೀಟರ್ ಸಿಆರ್4 ಎಂಜಿನ್,
- ರೂಫ್ ಮೌಂಟೆಡ್ ಡ್ಯುಯಲ್ ಎಸಿ,
- ಡಬಲ್ ವಿಶ್‌ಬೋನ್ ಸಸ್ಪೆಷನ್
ಮೂವಸ್
ಪ್ರಾರಂಭಿಕ ಬೆಲೆ: 6.99 ಲಕ್ಷ ರು.ಗಳಿಂದ
ವೈಶಿಷ್ಟ್ಯಗಳು
- 2.2 ಲೀಟರ್ ವ್ಯಾರಿಕೋರ್ ಎಂಜಿನ್, 120 ಪಿಎಸ್ ಪವರ್
- ಮೈಲೇಜ್ - 15.16 km/l
- ಬಾಗಿಸಬಹುದಾದ ಆಸನ ವ್ಯವಸ್ಥೆ, 7/8/9 ಸೀಟರ್ ಆಯ್ಕೆ
ಸಫಾರಿ ಸ್ಟ್ರೋಮ್
ಗರಿಷ್ಠ ಪ್ರಯೋಜನ: 80,000 ರು.ಗಳ ವರೆಗೆ
ವೈಶಿಷ್ಟ್ಯಗಳು
- ಪವರ್ ಫುಲ್ 2.2 ಲೀಟರ್ ವ್ಯಾರಿಕೋರ್ ಎಂಜಿನ್, 140 ಪಿಎಸ್, 320 ಎನ್‌ಎಂ
- 4x4 ಇಎಸ್‌ಒಎಫ್ (ಎಲೆಕ್ಟ್ರಾನಿಕ್ ಶಿಫ್ಟ್ ಆನ್ ಫ್ಲೈ)
- 3 ವರ್ಷ/1,00,000 ಕೀ.ಮೀ. ವಾರಂಟಿ ಸೌಲಭ್ಯ
ಟಾಟಾ ಆರಿಯಾ
ಪ್ರಾರಂಭಿಕ ಬೆಲೆ: 9.95 ಲಕ್ಷ ರು.
ವೈಶಿಷ್ಟ್ಯಗಳು
- ಹೊಸ 2.2 ಲೀಟರ್ ವ್ಯಾರಿಕೋರ್ ಎಂಜಿನ್, 150 ಪಿಎಸ್, 320 ಎನ್‌ಎಂ
- ಮೈಲೇಜ್ - 15.05 km/l
- 3 ವರ್ಷ/1,00,000 ಕೀ.ಮೀ. ವಾರಂಟಿ ಸೌಲಭ್ಯ


Click it and Unblock the Notifications