ದೇಶದ ಟಾಪ್ 5 ಐಷಾರಾಮಿ ಎಸ್‌ಯುವಿಗಳು

By Nagaraja

ಒಂದು ಸಾಮಾನ್ಯ ಕಾರಿಗಿಂತಲೂ ಮಿಗಿಲಾಗಿ ಸಕಲ ರೀತಿಯ ಸೌಲಭ್ಯಗಳನ್ನು ಕ್ರೀಡಾ ಬಳಕೆಯ ವಾಹನಗಳಲ್ಲಿ ಅನುಭವಿಸಬಹುದಾಗಿದೆ. ಇದು ಫ್ಯಾಮಿಲಿ ಅಗತ್ಯಗಳಿಂದ ಹಿಡಿದು ಆಫ್ ರೋಡ್ ತನಕ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.

ವಿದೇಶದಂತೆ ಭಾರತದಲ್ಲೂ ಎಸ್ ಯುವಿ ವಾಹನಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಇಂದಿನ ಈ ಲೇಖನದಲ್ಲಿ ದೇಶದಲ್ಲಿ ಲಭ್ಯವಿರುವ ಐದು ಐಷಾರಾಮಿ ಅಥವಾ ಅತಿ ದುಬಾರಿ ಕ್ರೀಡಾ ಬಳಕೆಯ ವಾಹನಗಳ ಬಗ್ಗೆ ಚರ್ಚಿಸಲಿದ್ದೇವೆ.

ರೇಂಜ್ ರೋವರ್ 5.0 ವಿ8 ಆಟೋಬಯೋಗ್ರಾಫಿ

ರೇಂಜ್ ರೋವರ್ 5.0 ವಿ8 ಆಟೋಬಯೋಗ್ರಾಫಿ

ಬೆಲೆ: 3.8 ಕೋಟಿ ರು.

ಲ್ಯಾಂಡ್ ರೋವರ್ ನ ಫ್ಲ್ಯಾಗ್ ಶಿಪ್ ಮಾದರಿಯಾಗಿರುವ ರೇಂಜ್ ರೋವರ್ ಆಟೋಬಯೋಗ್ರಾಫಿ ಆಕ್ರಮಣಕಾರಿ ವಿನ್ಯಾಸವನ್ನು ಪಡೆದುಕೊಂಡಿದೆ. ಇದರಲ್ಲಿ 5 ಲೀಟರ್ ವಿ8 ಅಥವಾ 4.4 ಲೀಟರ್ ವಿ8 ಡೀಸೆಲ್ ಎಂಜಿನ್ ಆಳವಡಿಸಲಾಗಿದೆ. ಸರಿ ಸುಮಾರು ನಾಲ್ಕು ಕೋಟಿ ರು.ಗಳಷ್ಟು ದುಬಾರಿಯ ಈ ಕಾರಿನಲ್ಲಿ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹಾಗೂ ಫೋರ್ ವೀಲ್ ಡ್ರೈವ್ ವ್ಯವಸ್ಥೆಯಿದ್ದು ಪರಿಪೂರ್ಣ ಆಫ್ ರೋಡ್ ಚಾಲನಾ ಅನುಭವವನ್ನು ನಿಮ್ಮದಾಗಿಸಲಿದೆ.

 ಮರ್ಸಿಡಿಸ್ ಜಿ63 ಎಎಂಜಿ

ಮರ್ಸಿಡಿಸ್ ಜಿ63 ಎಎಂಜಿ

ಬೆಲೆ: 1.78 ಕೋಟಿ ರು.

ಐಕಾನಿಕ್ ವಿನ್ಯಾಸವನ್ನು ತನ್ನದಾಗಿಸಿಕೊಂಡಿರುವ ಜಿ ಕ್ಲಾಸ್ ಅತ್ಯಂತ ಪವರ್ ಫುಲ್ ಎಸ್ ಯುವಿ ವಾಹನಗಳಲ್ಲಿ ಒಂದಾಗಿದೆ. ಇದರ 5.5 ಲೀಟರ್ ವಿ8 ಬೈ ಟರ್ಬೊ ಪೆಟ್ರೋಲ್ ಎಂಜಿನ್ 544 ಅಶ್ವಶಕ್ತಿ (760 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಸೆವನ್ ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹಾಗೂ ಮರ್ಸಿಡಿಸ್ 4 ಮ್ಯಾಟಿಕ್ ಫೋರ್ ವೀಲ್ ಡ್ರೈವ್ ವ್ಯವಸ್ಥೆಯಿರಲಿದೆ. ಇಲ್ಲಿ ಖರೀದಿಗಾರರಿಗೆ ಕಾರಿನ ಒಳಮೈಯನ್ನು ವೈಯಕ್ತಿಕವಾಗಿ ಕಸ್ಟಮೈಸ್ಡ್ ಮಾಡುವ ಅವಕಾಶವಿರಲಿದೆ. ಇನ್ನು ಲೆಥರ್ ಹೋದಿಕೆಯು ಇನ್ನಷ್ಟು ಐಷಾರಾಮಿ ಅನುಭವ ನೀಡಲಿದೆ.

ಪೋರ್ಷೆ ಕೆಯಾನ್ ಟರ್ಬೊ

ಪೋರ್ಷೆ ಕೆಯಾನ್ ಟರ್ಬೊ

ಬೆಲೆ: 1.78 ಕೋಟಿ ರು.

ಕ್ರೀಡಾತ್ಮಕ ಚಾಲನೆ, ಐಷಾರಾಮಿ ಒಳಮೈ ಹಾಗೂ ಶಕ್ತಿಶಾಲಿ ಎಂಜಿನ್ ಮುಂತಾದ ವೈಶಿಷ್ಟ್ಯಗಳಿಂದಾಗಿ ಪೋರ್ಷೆ ಕೆಯಾನ್ ಟರ್ಬೊ ಪ್ರೀಮಿಯಂ ಎಸ್ ಯುವಿ ಹೆಸರು ಮಾಡಿದೆ. ಪ್ರೀಮಿಯಂ ಕ್ರೀಡಾ ಕಾರಿಗಿಂತಲೂ ಅದ್ಭುತ ಆಲ್ ವೀಲ್ ಡ್ರೈವ್ ಚಾಲನಾ ಅನುಭವ ಇದರಲ್ಲಿ ಲಭ್ಯವಾಗಲಿದೆ. ಇದರ 4.8 ಲೀಟರ್ ವಿ8 ಪೆಟ್ರೋಲ್ ಎಂಜಿನ್ 500 ಅಶ್ವಶಕ್ತಿ (700 ತಿರುಗುಬಲ) ಉತ್ಪಾದಿಸಲಿದ್ದು, 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ರೇಂಜ್ ರೋವರ್ ಸ್ಪೋರ್ಟ್ ಆಟೋಬಯೋಗ್ರಾಫಿ

ರೇಂಜ್ ರೋವರ್ ಸ್ಪೋರ್ಟ್ ಆಟೋಬಯೋಗ್ರಾಫಿ

ಬೆಲೆ: 1.74 ಕೋಟಿ ರು.

ರೇಂಜ್ ರೋವರ್ ಸೋದರನಾಗಿರುವ ರೇಂಜ್ ರೋವರ್ ಸ್ಪೋರ್ಟ್ ಆಟೋಬಯೋಗ್ರಾಫಿ ಪರಿಪೂರ್ಣ ಆಡಂಬರದ ಸಂಕೇತವಾಗಿದೆ. ಇದರ 5 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಬರೋಬ್ಬರಿ 503 ಅಶ್ವಶಕ್ತಿ (625 ತಿರುಗುಬಲ) ಉತ್ಪಾದಿಸುತ್ತಿದ್ದು, 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇರಲಿದೆ. ಇನ್ನು ಫೋರ್ ವೀಲ್ ಡ್ರೈವ್ ಎಂತಹುದೇ ಭೂಪ್ರದೇಶದಲ್ಲೂ ಚಲಿಸುವ ಸಾಮರ್ಥ್ಯವನ್ನು ನೀಡುತ್ತದೆ.

ಮರ್ಸಿಡಿಸ್ ಜಿಎಲ್ 63 ಎಎಂಜಿ

ಮರ್ಸಿಡಿಸ್ ಜಿಎಲ್ 63 ಎಎಂಜಿ

ಬೆಲೆ: 1.69 ಕೋಟಿ ರು.

ನಿಮಗೆ ಗರಿಷ್ಠ ಸ್ಥಳಾವಕಾಶ ಐಷಾರಾಮಿ ಒಳಮೈಯ ಕಾರ್ಯನಿರ್ವಾಹಕ ಹಾಗೂ ಹೆಚ್ಚು ಪ್ರಾಯೋಗಿಕ ಆಡಂಬರದ ಎಸ್ ಯುವಿ ಬೇಕಾಗಿದ್ದರೆ ನೀವು ಮರ್ಸಿಡಿಸ್ ಜಿಎಲ್ 63 ಎಎಂಜಿ ಕಾರನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು 5.5 ಲೀಟರ್ ವಿ8 ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಐದು ಸೆಕೆಂಡುಗಳಲ್ಲೇ 0-100 ಕೀ.ಮೀ. ವೇಗವರ್ಧಿಸಲಿದ್ದು, ಆಲ್ ವೀಲ್ ಡ್ರೈವ್ ವ್ಯವಸ್ಥೆಯನ್ನು ಪಡೆದುಕೊಂಡಿದೆ.

ದೇಶದ ಟಾಪ್ 5 ಐಷಾರಾಮಿ ಎಸ್‌ಯುವಿಗಳು

ಈಗ ನಿಮ್ಮ ನೆಚ್ಚಿನ ಎಸ್ ಯುವಿ ಕಾರು ಹಾಗೂ ಅದರಲ್ಲಿ ನಿಮಗಿಷ್ಟವಾದ ವೈಶಿಷ್ಟ್ಯವಾದ ಬಗ್ಗೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿರಿ

More from DriveSpark

Article Published On: Tuesday, May 12, 2015, 10:01 [IST]
English summary
Top 5 luxury SUVs in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+