ಹಬ್ಬದ ಸಂಭ್ರಮ; ಯಾವ ಕಾರು ಖರೀದಿ ಸೂಕ್ತ?
ಈ ಹಬ್ಬದ ಆವೃತ್ತಿಯಲ್ಲಿ ಅನೇಕ ಕಾರು ತಯಾರಿಕ ಸಂಸ್ಥೆಗಳು ಹೊಸ ಹಾಗೂ ಪರಿಷ್ಕೃತ ಮಾದರಿಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಇವೆಲ್ಲದರ ಮೂಲಕ ಗರಿಷ್ಠ ಮಾರಾಟ ಗಿಟ್ಟಿಸಿಕೊಳ್ಳುವ ಗುರಿಯನ್ನು ಇಟ್ಟುಕೊಂಡಿದೆ.
ಹಾಗಿರಬೇಕಾದರೆ ಈ ಹಬ್ಬದ ಸಂಭ್ರಮದಲ್ಲಿ ಯಾವ ಕಾರು ಖರೀದಿ ಮಾಡಬೇಕೆಂಬ ಗೊಂದಲದಲ್ಲಿದ್ದೀರಾ? ಇಂದಿನ ಈ ಲೇಖನದಲ್ಲಿ ದೇಶದ ಮಧ್ಯಮ ವರ್ಗದವರು ಖರೀದಿಸಬಹುದಾದ ಲಭ್ಯವಿರುವ ಎಲ್ಲ ಸೆಗ್ಮೆಂಟ್ ಗಳ ಅತ್ಯುತ್ತಮ ಕಾರುಗಳನ್ನು ಪರಿಚಯ ಮಾಡುವ ಪ್ರಯತ್ನ ಮಾಡಲಾಗುವುದು.

ರೆನೊ ಕ್ವಿಡ್
ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ರೆನೊ ಕ್ವಿಡ್ ಬಿಡುಗಡೆಯಾದ ಎರಡು ವಾರದೊಳಗೆ 25,000 ಬುಕ್ಕಿಂಗ್ ಗಳನ್ನು ದಾಟಿಕೊಂಡಿದ್ದು, ಮಾರುತಿ ಆಲ್ಟೊಗೆ ಕಠಿಣ ಪ್ರತಿಸ್ಪರ್ಧೆಯನ್ನು ಒಡ್ಡುತ್ತಿದೆ [ಆಲ್ಟೊ, ಇಯಾನ್ ಜೊತೆ ಕ್ವಿಡ್ ಬೆಲೆ ಹೋಲಿಕೆ - ಮುಂದಕ್ಕೆ ಓದಿ].
ರೆನೊ ಕ್ವಿಡ್ ಸಂಪೂರ್ಣ ಚಾಲನಾ ವಿಮರ್ಶೆ
ರೆನೊ ಕ್ವಿಡ್ ಸಂಪೂರ್ಣ ಬಾಡಿ ಸ್ಕ್ಯಾನಿಂಗ್

ಮಾರುತಿ ಆಲ್ಟೊ 800
ದಶಕದಿಂದಲೂ ತನ್ನ ಜನಪ್ರಿಯತೆಯನ್ನು ಕಾಪಾಡಿಕೊಂಡು ಬಂದಿರುವ ಮಾರುತಿ ಆಲ್ಟೊ ಪ್ರತಿ ತಿಂಗಳಲ್ಲಿ ಸರಾಸರಿ 20,000 ಯುನಿಟ್ ಗಳಷ್ಟು ಮಾರಾಟವನ್ನು ಕಾಪಾಡಿಕೊಂಡಿದೆ.
ನಮ್ಮ ಆಲ್ಟೊ ವಿಶ್ವಕ್ಕೆ ಅಗ್ರ

ಹ್ಯುಂಡೈ ಇಯಾನ್
ಎಂಟ್ರಿ ಲೆವೆಲ್ ಕಾರು ಖರೀದಿಗಾರರಲ್ಲಿ ಹ್ಯುಂಡೈ ಈಗಲೂ ತನ್ನ ಜನಪ್ರಿಯತೆಯನ್ನು ಕಾಪಾಡಿಕೊಂಡು ಬಂದಿದೆ. ಆಲ್ಟೊ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದ ಹ್ಯುಂಡೈ ತನ್ನದೇ ಆದ ಮಾರಾಟ ವಲಯವನ್ನು ಸೃಷ್ಟಿಸಿತ್ತು.
ಹ್ಯುಂಡೈ ಇಯಾನ್ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಾರುತಿ ವ್ಯಾಗನಾರ್
ಎಂಟ್ರಿ ಲೆವೆಲ್ ಕಾರು ನಿಮಗಿಷ್ಟವಾಗದಿದ್ದಲ್ಲಿ ಇನ್ನು ಸ್ವಲ್ಪ ಬಜೆಟ್ ವ್ಯಯಿಸಲು ತಯಾರಾಗಿದ್ದಲ್ಲಿ ನಿಮಗೆ ಅಂದವಾದ 'ಟಾಲ್ ಬಾಯ್' ಖ್ಯಾತಿಯ ವ್ಯಾಗನಾರ್ ಆಯ್ಕೆ ಮಾಡಬಹುದಾಗಿದೆ.
ಶ್ರೀಮಂತರ ರೇಸ್ ನಲ್ಲಿ ಗೆದ್ದ ಬಡವರ ಕಾರು

ಹ್ಯುಂಡೈ ಐ10
ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಂಸ್ಥೆಯಿಂದ ದೇಶದಲ್ಲಿ ಲಭ್ಯವಿರುವ ಅತ್ಯುತ್ತಮ ಕಾರುಗಳಲ್ಲಿ ಹ್ಯುಂಡೈ ಐ10 ಒಂದಾಗಿದೆ. ಇದಾದ ಬಳಿಕ ಸ್ವಲ್ಪ ಪ್ರೀಮಿಯಂ ಶೈಲಿಯ ಗ್ರಾಂಡ್ ಐ10 ಬಿಡುಗಡೆ ಮಾಡಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಹ್ಯುಂಡೈ ಢಿಕ್ಕಿ ಪರೀಕ್ಷೆ

ಮಾರುತಿ ಆಲ್ಟೊ ಕೆ10
ಆಲ್ಟೊ ಶಕ್ತಿಶಾಲಿ ವರ್ಷನ್ ಇದಾಗಿದ್ದು, ಅತ್ಯುತ್ತಮ ಚಾಲನಾ ಅನುಭವ ನಿಮ್ಮದಾಗಿಸಲಿದೆ.
ಮಾರುತಿ ಆಲ್ಟೊ ಕೆ10 ಅರ್ಬನೊ ಸೀಮಿತ ಆವೃತ್ತಿ ಬಿಡುಗಡೆ

ಮಾರುತಿ ಸ್ವಿಫ್ಟ್
ದೇಶದ ಸರ್ವಕಾಲಿಕ ಶ್ರೇಷ್ಠ ಕಾರುಗಳಲ್ಲಿ ಮಾರುತಿ ಸ್ವಿಫ್ಟ್ ಕಾಣಿಸಿಕೊಂಡಿದೆ. ನಿಕಟ ಭವಿಷ್ಯದಲ್ಲಿ ಮಾರುತಿ ಹೈಬ್ರಿಡ್ ಮಾದರಿಯು ಬಿಡುಗಡೆಯಾದ್ದಲ್ಲಿ ಅಚ್ಚರಿಪಡಬೇಕಾಗಿಲ್ಲ.
ಮಾರುತಿ ಸ್ವಿಫ್ಟ್ vs ಫೋರ್ಡ್ ಫಿಗೊ: ಮುಂದಕ್ಕೆ ಓದಿ
ಮಾರುತಿ ಸ್ವಿಫ್ಟ್ ಹೈಬ್ರಿಡ್ ಕಾರು ಭಾರತಕ್ಕೆ

ಫೋರ್ಡ್ ಫಿಗೊ
ಈಗಷ್ಟೇ ಬಿಡುಗಡೆಯಾಗಿರುವ ಫೋರ್ಡ್ ಫಿಗೊ ಕಾರಿನಲ್ಲಿ ಅಂತದ್ದೇನಿದೆ ? ಸಂಪೂರ್ಣ ಮಾಹಿತಿಗಾಗಿ ಚಾಲನಾ ವಿಮರ್ಶೆ ಓದಿರಿ

ಹ್ಯುಂಡೈ ಗ್ರಾಂಡ್ 10
ನಾವು ಈಗಾಗಲೇ ಮಾಹಿತಿ ಕೊಟ್ಟಿರುವಂತೆಯೇ ಹ್ಯುಂಡೈ ಗ್ರಾಂಡ್ ಐ10 ಭಾರತೀಯ ರಸ್ತೆ ಪರಿಸ್ಥಿತಿಗೆ ಹೆಚ್ಚು ಯೋಗ್ಯವೆನಿಸಲಿದೆ.
ಹ್ಯುಂಡೈ ಗ್ರಾಂಡ್ ಐ10 ಢಿಕ್ಕಿ ಪರೀಕ್ಷೆ

ಹ್ಯುಂಡೈ ಎಲೈಟ್ ಐ20
ಸದ್ಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುತ್ತಿರುವ ಕಾರುಗಳಲ್ಲಿ ಎಲೈಟ್ ಐ20 ಒಂದಾಗಿದೆ. ಇದರ ಪ್ರೀಮಿಯಂ ವಿನ್ಯಾಸ ಹಾಗೂ ರಸ್ತೆ ಸಾನಿಧ್ಯವು ವಾಹನ ಪ್ರೇಮಿಗಳನ್ನು ಅತಿ ಹೆಚ್ಚು ಆಕರ್ಷಿಸಲು ಸಹಕಾರಿಯಾಗಿದೆ.

ಹೋಂಡಾ ಜಾಝ್
ಕಳೆದ ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾಗಿದ್ದ ಹೋಂಡಾ ಜಾಝ್ ಅತಿ ಹೆಚ್ಚು ನಿರೀಕ್ಷೆಯನ್ನಿಟ್ಟುಕೊಂಡಿದೆ. ಹೊಸ ವಿನ್ಯಾಸ ತಂತ್ರಗಾರಿಕೆ ನಿಮಗೆ ಇಷ್ಟವಾದ್ದಲ್ಲಿ ಜಾಝ್ ಆಯ್ಕೆ ಮಾಡಬಹುದಾಗಿದೆ.
ಹೋಂಡಾ ಜಾಝ್ ಸಮಗ್ರ ವಿಮರ್ಶೆ

ಮಾರುತಿ ಸುಜುಕಿ ಬಲೆನೊ
ಇನ್ನಷ್ಟೇ ಬಿಡುಗಡೆಯಾಗಲಿರುವ ಬಲೆನೊ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ಬಲೆನೊ ಅತಿ ಹೆಚ್ಚು ನಿರೀಕ್ಷೆಗೆ ಕಾರಣವಾಗಿದೆ.

ಮಾರುತಿ ಡಿಜೈರ್
ದೇಶದಲ್ಲಿ ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಅಗ್ರ ಎರಡು ಕಾರುಗಳಲ್ಲಿ ಮಾರುತಿ ಸ್ವಿಫ್ಟ್ ಡಿಜೈರ್ ಒಂದಾಗಿದೆ. ಇದರಿಂದಲೇ ಡಿಜೈರ್ ಜನಪ್ರಿಯತೆಯನ್ನು ನೀವು ಮನಗಾಣಬಹುದಾಗಿದೆ.
ಡಿಜೈರ್ vs ಆಸ್ಪೈರ್: ಯಾವುದು ಅತ್ಯುತ್ತಮ ?

ಫಿಗೊ ಆಸ್ಪೈರ್
ಭಾರತಕ್ಕೆ ಫೋರ್ಡ್ ಸಂಸ್ಥೆಯಿಂದ ಪರಿಚಯವಾಗಲಿರುವ ನೂತನ ಮಾದರಿಗಳಲ್ಲಿ ಫೋರ್ಡ್ ಫಿಗೊ ಆಸ್ಪೈರ್ ಒಂದಾಗಿದೆ. ಇದು ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಗಿದೆ.
ಆಸ್ಪೈರ್ ಸಂಪೂರ್ಣ ಚಾಲನಾ ವಿಮರ್ಶೆ

ಹೊಂಡಾ ಸಿಟಿ
ಮಧ್ಯಮ ಗಾತ್ರದ ಸೆಡಾನ್ ಕಾರು ವಿಭಾಗವನ್ನು ಹೋಂಡಾ ಸಿಟಿ ಮುನ್ನಡೆಸುತ್ತಿದೆ. ಅತ್ಯುತ್ತಮ ವಿನ್ಯಾಸ, ಎಂಜಿನ್, ನಿರ್ವಹಣೆ ಹಾಗೂ ಚಾಲನಾ ಅನುಭವ ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಹೋಂಡಾ ಸಿಟಿ ಅತಿ ಹೆಚ್ಚು ಮಾರಾಟವಾಗುವ ಮಿಡ್ ಸೈಜ್ ಸೆಡಾನ್ ಕಾರು ಏಕೆ ? ಮುಂದಕ್ಕೆ ಓದಿ

ಮಾರುತಿ ಸಿಯಾಝ್
ಹೋಂಡಾ ಸಿಟಿ ಕಾರಿಗೆ ನಿಕಟ ಪೈಪೋಟಿ ಒಡ್ಡುತ್ತಿರುವ ಸಿಯಾಝ್, ದೇಶದೆಲ್ಲೆಡೆ ವಿಸ್ತಾರವಾಗಿ ಹರಡಿರುವ ಸರ್ವಿಸ್ ಹಾಗೂ ಡೀಲರ್ ಜಾಲದಿಂದ ತನ್ನ ಜನಪ್ರಿಯತೆಯನ್ನು ಕಾಪಾಡಿಕೊಂಡಿದೆ.
ಸಿಯಾಝ್ ಹೈಬ್ರಿಡ್ ದೇಶಕ್ಕೆ ಎಂಟ್ರಿ

ಹ್ಯುಂಡೈ ವೆರ್ನಾ
ಕೆಲವು ವರ್ಷಗಳ ಹಿಂದೆಯೇ ವೆರ್ನಾ, ಹೋಂಡಾ ಸಿಟಿಗಳಂತಹ ಹೊಸ ಹೊಸ ಕಾರುಗಳ ಆಗಮನದೊಂದಿಗೆ ನಿಧಾನವಾಗಿ ಹಿನ್ನೆಡೆಯನ್ನು ಅನುಭವಿಸಿತ್ತು. ಹಾಗಿದ್ದರೂ ಪರಿಷ್ಕೃತ ಮಾದರಿಗಳ ಬಿಡುಗಡೆಯೊಂದಿಗೆ ತನ್ನ ಜನಪ್ರಿಯತೆಯನ್ನು ಕಾಪಾಡಿಕೊಳ್ಳುವ ಪ್ರಯತ್ನದಲ್ಲಿದೆ.

ಮಾರುತಿ ಎರ್ಟಿಗಾ
ಎಲ್ಲ ವಿಭಾಗದಲ್ಲೂ ಅತ್ಯುತ್ತಮ ಕಾರುಗಳ ಆಯ್ಕೆಯನ್ನು ನೀಡಿರುವುದೇ ಮಾರುತಿ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಕಾಂಪಾಕ್ಟ್ ಬಹು ಬಳಕೆಯ ವಾಹನ ವಿಭಾಗ ಸಹ ಇದರಿಂದ ಹೊರತಾಗಿಲ್ಲ.
ಎರ್ಟಿಗಾ ಸುತ್ತ ಹದ್ದು ನೋಟ

ಹೋಂಡಾ ಮೊಬಿಲಿಯೊ
ನೀವು ನಿಮ್ಮ ಕುಟುಂಬದ ಜೊತೆಗಿನ ವಾರಂತ್ಯದ ಪ್ರವಾಸಕ್ಕೆ ಅತ್ಯುತ್ತಮ ಕಾರಿನ ಹುಡುಕಾಟದಲ್ಲಿದ್ದೀರಾ ? ಇಲ್ಲಿದೆ ನೋಡಿ ಹೋಂಡಾ ಮೊಬಿಲಿಯೊ ವಿಮರ್ಶೆ
ಮೊಬಿಲಿಯೊ ಹೊಸ ಕಾರು ಪುಟ

ರೆನೊ ಲೊಡ್ಜಿ
ರೆನೊ ಲೊಡ್ಜಿ ಒಂದು ಪರಿಪೂರ್ಣ ಎಂಪಿವಿ ಕಾರಾಗಿದ್ದು, ನಿಮ್ಮ ಪಯಣವನ್ನು ಆರಾಮದಾಯಕವಾಗಿಸಲಿದೆ.

ಹ್ಯುಂಡೈ ಕ್ರೆಟಾ
ಹ್ಯುಂಡೈ ಕ್ರೆಟಾ ಈ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುತ್ತಿರುವ ಕಾರುಗಳಲ್ಲಿ ಒಂದಾಗಿದೆ. ಇದರಿಂದಾಗಿ ನಿರ್ಮಾಣ ಸಾಮರ್ಥ್ಯವನ್ನು ವೃದ್ಧಿಸಲು ಹ್ಯುಂಡೈ ನಿರ್ಧರಿಸಿದೆ.
ಕ್ರೆಟಾ ನಂಬರ್ ವನ್

ಫೋರ್ಡ್ ಇಕೊಸ್ಪೋರ್ಟ್
ಇಕೊಸ್ಪೋರ್ಟ್ ಇದೀಗಷ್ಟೇ ಹೊಸ ಸ್ವರೂಪವನ್ನು ಪಡೆದುಕೊಂಡಿದೆ. ವರದಿ ಇಲ್ಲಿದೆ ಓದಿ
ಇಕೊಸ್ಪೋರ್ಟ್ ಅಪಘಾತದಲ್ಲಿ ಮಾಧ್ಯಮ ಮಿತ್ರರು ಪಾರು

ರೆನೊ ಡಸ್ಟರ್
ರೆನೊ ಡಸ್ಟರ್ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನ ವಿಭಾಗಕ್ಕೆ ಹೊಸ ಆಯಾಮವನ್ನು ನೀಡಿತ್ತು.
ಹ್ಯುಂಡೈ ಕ್ರೆಟಾ vs ರೆನೊ ಡಸ್ಟರ್: ಮುಂದಕ್ಕೆ ಓದಿ

ಮಹೀಂದ್ರ ಟಿಯುವಿ300
ಕಾಂಪಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಎಂಟ್ರಿ ಕೊಟ್ಟಿರುವ ಅತಿ ನೂತನ ಕಾರುಗಳಲ್ಲಿ ಮಹೀಂದ್ರ ಟಿಯುವಿ300 ಒಂದಾಗಿದೆ.
ಇಕೊಸ್ಪೋರ್ಟ್ vs ಟಿಯುವಿ300: ಯಾವುದು ಬೆಸ್ಟ್ ?

ಈ ಹಬ್ಬದ ಆವೃತ್ತಿಯಲ್ಲಿ ಹೊಸ ಕಾರು ಖರೀದಿಗಾರರರಿಗೆ ಈ ಲೇಖನ ನೆರವಾಗುವ ಭರವಸೆ ನಮ್ಮದಾಗಿದೆ. ಈಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.


Click it and Unblock the Notifications








