ಭಾರತಕ್ಕೆ ಬರುತ್ತಿದೆ ಟೊಯೊಟಾ ಹೈಏಸ್ ಮಿನಿವ್ಯಾನ್

By Nagaraja

ವಿಸ್ತಾರವಾಗಿ ಹರಡಿರುವ ಭಾರತೀಯ ಮಾರುಕಟ್ಟೆಗೆ ಇತ್ತೀಚೆಗಷ್ಟೇ ಫಾರ್ಚ್ಯುನರ್ ಹಾಗೂ ಇನ್ನೋವಾ ಹೊಸ ವೆರಿಯಂಟ್‌ಗಳನ್ನು ಜಪಾನ್‌ನ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಟೊಯೊಟಾ ಬಿಡುಗಡೆಗೊಳಿಸಿತ್ತು.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ದೇಶದ ಗ್ರಾಹಕರು ಉಪಯುಕ್ತ ವಾಹನಗಳನ್ನು ಅತಿ ಹೆಚ್ಚು ನೆಚ್ಚಿಕೊಂಡಿದ್ದಾರೆ. ಈಗ ಟೊಯೊಟಾ ಸಂಸ್ಥೆಯು ದೇಶಕ್ಕೆ ಮಗದೊಂದು ಕೊಡುಗೆ ನೀಡಲು ಮುಂದಾಗುತ್ತಿದೆ. ಅದುವೇ 'ಹೈಏಸ್ ಮಿನಿವ್ಯಾನ್'.

ಟೊಯೊಟಾ ಹೈಏಸ್ ಮಿನಿವ್ಯಾನ್

ವಿಶೇಷವೆಂದರೆ 2015 ಸಾಲಿನಲ್ಲಿ ಹೈಏಸ್ ಮಿನಿವ್ಯಾನ್ ಭಾರತ ವಾಹನ ಮಾರುಕಟ್ಟೆಯನ್ನು ತಲುಪಲಿದೆ. ಈ ಬಗ್ಗೆ ಬಂದಿರುವ ವರದಿಗಳನ್ನು ಖಚಿತಪಡಿಸಿರುವ ಟೊಯೊಟಾ ಸಂಸ್ಥೆಯು 2015 ಮಧ್ಯಂತರ ಅವಧಿಯಲ್ಲಿ ಹೈಏಸ್ ಮಿನಿವ್ಯಾನ್ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

ಟೊಯೊಟಾ ಹೈಏಸ್ ಮಿನಿವ್ಯಾನ್

ಈಗಾಗಲೇ ಗ್ರೇಟರ್ ನೋಯ್ಡಾದಲ್ಲಿ ನಡೆದ ವಿಶೇಷ ಪ್ರದರ್ಶನ ಮೇಳದಲ್ಲಿ ಈ ಬಗ್ಗೆ ಘೋಷಣೆ ಹೊರಡಿಸಿರುವ ಟೊಯೊಟಾ ಕಿರ್ಲೊಸ್ಕರ್ ಮೋಟಾರು ಪ್ರೈವೇಟ್ ಲಿಮಿಟೆಡ್ ಸೇಲ್ ಆಂಡ್ ಮಾರ್ಕೆಟಿಂಗ್ ಹಿರಿಯ ಉಪಾಧ್ಯಕ್ಷ ಹಾಗೂ ನಿರ್ದೇಶಕರಾಗಿರುವ ಎನ್ ರಾಜಾ, ಸ್ಪರ್ಧಾತ್ಮಕ ಬೆಲೆಯಲ್ಲಿ ಹೈಏಸ್ ಬಿಡುಗಡೆಯಾಗಲಿದೆ ಎಂದಿದ್ದಾರೆ.

ಟೊಯೊಟಾ ಹೈಏಸ್ ಮಿನಿವ್ಯಾನ್

10 ಸೀಟುಗಳ ಈ ಪ್ರಯಾಣಿಕ ಮಿನಿವ್ಯಾನ್ ನಾಲ್ಕು ಸಾಲುಗಳ ಆಸನ ವ್ಯವಸ್ಥೆಯನ್ನು ಹೊಂದಿರುತ್ತದೆ.

ಟೊಯೊಟಾ ಹೈಏಸ್ ಮಿನಿವ್ಯಾನ್

ಗ್ರಾಹಕರ ಬೇಡಿಕೆಗಳಿಗೆ ಅನುಸಾರವಾಗಿ ಪ್ರೀಮಿಯಂ ಸೌಲಭ್ಯಗಳನ್ನು ನೀಡುವುದರಲ್ಲಿ ಸದಾ ಬದ್ಧವಾಗಿದೆ ಎಂದು ಸಂಸ್ಥೆಯು ತಿಳಿಸಿದೆ. ಇದರಿಂದಲೇ ಮುಂಬರುವ ಹೈಏಸ್ ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆಯಲಿದೆ ಎಂಬುದು ಖಚಿತವಾಗಿದೆ.

ತಾಂತ್ರಿಕತೆ

ತಾಂತ್ರಿಕತೆ

  • 2982 ಸಿಸಿ ಎಂಜಿನ್,
  • ಯುರೋ 4 ಡೀಸೆಲ್ ಮಿಲ್,
  • ಗರಿಷ್ಠ ಅಶ್ವಶಕ್ತಿ 134, 300 ಎನ್‌ಎಂ ಟಾರ್ಕ್,
  • 4 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್
  • ವಿಶಿಷ್ಟತೆ

    ವಿಶಿಷ್ಟತೆ

    • ಪವರ್ ಸ್ಟೀರಿಂಗ್,
    • ಪವರ್ ವಿಂಡೋಸ್,
    • ವಿದ್ಯುನ್ಮಾನ ನಿಯಂತ್ರಿತ ಬದಿಯ ಬಾಗಿಲು,
    • ಎಸಿ,
    • ಎಂಜಿನ್ ಇಂಮೊಬಿಲೈಜರ್,
    • ವಿಶಿಷ್ಟತೆ

      ವಿಶಿಷ್ಟತೆ

      • ರಿವರ್ಸ್ ಕ್ಯಾಮೆರಾ,
      • ಫ್ಯಾಬ್ರಿಕ್ ಸೀಟು,
      • ಮುಂಭಾಗದಲ್ಲಿ ಡ್ಯುಯಲ್ ಎಸ್‌ಆರ್‌ಎಸ್ ಏರ್ ಬ್ಯಾಗ್,
      • ಎಬಿಎಸ್,
      • ಫಾಗ್ ಲೈಟ್,
      • ಆಡಿಯೋ ಸಿಸ್ಟಂ ಜೊತೆ ಆರು ಸ್ಪೀಕರ್
      • ಟೊಯೊಟಾ ಹೈಏಸ್ ಮಿನಿವ್ಯಾನ್

        140 ರಾಷ್ಟ್ರಗಳಲ್ಲಿ ತನ್ನ ಸಾನಿಧ್ಯ ವ್ಯಕ್ತಪಡಿಸಿರುವ ಟೊಯೊಟಾ ಹೈಏಸ್ ಈಗಾಗಲೇ ಆರು ಮಿಲಿಯನ್ ಯುನಿಟ್‌ಗಳಷ್ಟು ಮಾರಾಟವನ್ನು ಕಂಡುಕೊಂಡಿದೆ.

        ಟೊಯೊಟಾ ಹೈಏಸ್ ಮಿನಿವ್ಯಾನ್

        ದೇಶದಲ್ಲಿ ಟೊಯೊಟಾ ಹೈಏಸ್ ನಿರ್ದಿಷ್ಟ ವಾಣಿಜ್ಯ ವಿಭಾಗವನ್ನು ಗುರಿಯಾಗಿರಿಸಲಿದ್ದು, ಆಟ್ಯೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳಂತಹ ವಿಶೇಷತೆ ಇನ್ನಷ್ಟು ಆರಾಮದಾಯಕ ಚಾಲನೆ ಪ್ರದಾನ ಮಾಡಲಿದೆ.

        ಟೊಯೊಟಾ ಹೈಏಸ್ ಮಿನಿವ್ಯಾನ್

        ಇನ್ನು ಎಬಿಎಸ್‌ಗಳಂತಹ ಸೇಫ್ಟಿ ವೈಶಿಷ್ಟ್ಯಗಳನ್ನು ಹೊಂದಿರುವುದು ಪ್ರಯಾಣಿಕರಿಗೆ ಸುರಕ್ಷಿತ ಚಾಲನೆಯನ್ನು ಖಾತ್ರಿಪಡಿಸಲಿದೆ.

        ಟೊಯೊಟಾ ಹೈಏಸ್ ಮಿನಿವ್ಯಾನ್

        ದೇಶದ ಮಾರುಕಟ್ಟೆಯಲ್ಲಿರುವ ಟಾಟಾ ವಿಂಗರ್ ಹಾಗೂ ಫೋರ್ಸ್‌ ಟೆಂಪೊ ಟ್ರಾವೆಲರ್‌‌ಗೆ ಹೋಲಿಸಿದಾಗ ಇದೇ ಸಾಲಿನಲ್ಲಿ ಎಂಟ್ರಿ ಕೊಡಲಿರುವ ಟೊಯೊಟಾ ಹೈಏಸ್, ಎಲ್ಲ ವಿಧದಲ್ಲೂ ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ. ಇದು ಪ್ರತಿಸ್ಪರ್ಧಿಗಳನ್ನು ಹಿಮ್ಮೆಟ್ಟಿಸಲು ಸಹಕಾರಿಯಾಗಲಿದೆ.


More from DriveSpark

Article Published On: Friday, January 16, 2015, 10:01 [IST]
English summary
Currently, the Japanese manufacturer is present at the fourth Bus and Special vehicle exhibition in Greater Noida, India. They have now confirmed that they will launch the HiAce minivan by mid-2015.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+