ಭವಿಷ್ಯದ ಹೈಡ್ರೋಜನ್ ವಾಹನಗಳತ್ತ ವಾಲಿದ ಟೊಯೊಟಾ
ಮುಂದಿನ 50 ವರ್ಷಗಳಲ್ಲಿ ಇಂಧನ ಶೇಖರಣೆಯಲ್ಲಿ ಭಾರಿ ಕೊರತೆ ಕಾಡಲಿದೆ. ಇನ್ನೊಂದೆಡೆ ಬಹುತೇಕ ವಾಹನ ತಯಾರಿಕ ಸಂಸ್ಥೆಗಳು ಇಂಧನ ಚಾಲಿತ ವಾಹನಗಳ ಹೊರತಾಗಿ ಪರಿಸರ ಸ್ನೇಹಿ ಕಾರುಗಳ ನಿರ್ಮಾಣದಲ್ಲಿ ತಲ್ಲೀನವಾಗಿದೆ.
ಆಧುನಿಕ ತಂತ್ರಜ್ಞಾನದ ಗರಿಷ್ಠ ಪ್ರಯೋಜನ ಪಡೆದುಕೊಂಡು ಪರಿಸರ ಸ್ನೇಹಿ ವಾಹನ ನಿರ್ಮಿಸುವುದು ಗುರಿಯಾಗಿದೆ. ಈಗಾಗಲೇ ಜಪಾನ್ ಮೂಲದ ಟೊಯೊಟಾ ಸಂಸ್ಥೆಯು ಹೈಡ್ರೋಜನ್ ಫ್ಲೂಯಲ್ ಸೆಲ್ ವಾಹನಗಳನ್ನು ಅಭಿವೃದ್ಧಿಪಡಿಸಿದ್ದು, ಎಲ್ಲ ಮೂಲಗಳಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಟೊಯೊಟಾ ಸಂಸ್ಥೆಯೇಗ ಹೈಡ್ರೋಜನ್ ವಾಹನಗಳೊಂದಿಗೆ ಕೈಜೋಡಿಸುವಂತೆಯೇ ಇಡೀ ಜಗತ್ತನೇ ಆಹ್ವಾನಿಸಿದ್ದು, ಹೈಡ್ರೋಜನ್ ಫ್ಲೂಯಲ್ ಸೆಲ್ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಹಕ್ಕುಸ್ವಾಮ್ಯವನ್ನು ಹಂಚಿಕೊಳ್ಳಲು ನಿರ್ಧರಿಸಿದೆ. 2015 ಅಂತರಾಷ್ಟ್ರೀಯ ಗ್ರಾಹಕ ಎಲೆಕ್ಟ್ರಾನಿಕ್ ಶೋದಲ್ಲಿ ಟೊಯೊಟಾ ಇಂತಹದೊಂದು ಘೋಷಣೆಯನ್ನು ಹೊರಡಿಸಿದೆ.

ಮೊದಲನೇ ತಲೆಮಾರಿನ ಹೈಡ್ರೋಜನ್ ಫ್ಲೂಯಲ್ ಸೆಲ್ ವಾಹನಗಳು 2015ರಿಂದ 2020 ಅವಧಿಯಲ್ಲಿ ಕಾಣಿಸಿಕೊಳ್ಳಲಿದ್ದು, ಆಟೋ ವಲಯದ ಪಾಲಿಗೆ ನಿರ್ಣಾಯಕವೆನಿಸಲಿದೆ.


Click it and Unblock the Notifications








