1 ಲಕ್ಷ ರು.ಗಳಿಗೆ ಅಂದವಾದ ಬೀಟ್ಲ್ ಬುಕ್ ಮಾಡಿಕೊಳ್ಳಿರಿ
ಈ ಮೊದಲೇ ಮಾಹಿತಿ ಕೊಟ್ಟಿರುವಂತೆಯೇ ಹೊಸತಾದ ಫೋಕ್ಸ್ ವ್ಯಾಗನ್ ಬೀಟ್ಲ್ ಭಾರತ ಮಾರುಕಟ್ಟೆಯನ್ನು ಪ್ರವೇಶಿಸಲು ಸಜ್ಜಾಗಿ ನಿಂತಿದ್ದು, ಇದರಂತೆ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.
ಆಸಕ್ತ ಗ್ರಾಹಕರು ಒಂದು ಲಕ್ಷ ರುಪಾಯಿಗಳನ್ನು ಮುಂಗಡವಾಗಿ ಪಾವತಿಸಿ ಫೋಕ್ಸ್ ವ್ಯಾಗನ್ ಬೀಟ್ಲ್ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಫೋಕ್ಸ್ ವ್ಯಾಗನ್ ಅಧಿಕೃತ ವೆಬ್ ಸೈಟ್ ನಲ್ಲೂ ಅವಕಾಶ ಒದಗಿಸಲಾಗಿದೆ.

ಗ್ರಾಹಕರು ಇಲ್ಲಿ ಅಗತ್ಯ ಮಾಹಿತಿಗಳೊಂದಿಗೆ ಡೀಲರ್ ಆಯ್ಕೆ ಮಾಡಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ವಿತರಕ ಜಾಲದವರು ನಿಮ್ಮನ್ನು ಸಂಪರ್ಕಿಸಲಿದ್ದಾರೆ.
ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಫೋಕ್ಸ್ ವ್ಯಾಗನ್ ಬೀಟ್ಲ್ ಲಭ್ಯವಾಗಲಿದೆ. ಅವುಗಳೆಂದರೆ, ಕೇಸರಿ, ನೀಲಿ, ಕೆಂಪು ಮತ್ತು ಬಿಳಿ. ನಿಮ್ಮ ಮಾಹಿತಿಗಾಗಿ, ದೇಶದಲ್ಲಿ ಫೋಕ್ಸ್ ವ್ಯಾಗನ್ ಬೀಟ್ಲ್ ಎರಡು ಡೋರ್ ಆಯ್ಕೆಗಳಲ್ಲೂ ಲಭ್ಯವಾಗಲಿದೆ.
1.4 ಲೀಟರ್ ಟಿಎಸ್‌ಐ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸ್ಪಡುವ ಹೊಸ ಬೀಟ್ಲ್ 147.52 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ 7 ಸ್ಪೀಡ್ ಆಟೋಮ್ಯಾಟಿಕ್ ಡಿಎಸ್‌ಜಿ ಗೇರ್ ಬಾಕ್ಸ್ ಇದರಲ್ಲಿರಲಿದೆ.
ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾ (ಇಎಸ್‌ಪಿ), ಆರು ಏರ್ ಬ್ಯಾಗ್ ಗಳು ಸ್ಟ್ಯಾಂಡರ್ಡ್ ಆಗಿ ದೊರೆಯಲಿದೆ. ಇನ್ನುಳಿದಂತೆ ಎಲ್ಲ ಹೊಸತನದ ಬೀಟ್ಲ್ ನಲ್ಲಿ KESSY ಎಂಬ ಹೊಸ ವೈಶಿಷ್ಟ್ಯ ದೊರಕಲಿದದ್ದು, ಕೀಲೆಸ್ ಆಸೆಸ್ ಮತ್ತು ಫುಶ್ ಬಟನ್ ಸ್ಟ್ಯಾರ್ಟ್ ತಂತ್ರಗಾರಿಕೆಯನ್ನು ಒಳಗೊಂಡಿರಲಿದೆ.
16 ಇಂಚುಗಳ ಅಲಾಯ್ ವೀಲ್ ನೊಂದಿಗೆ ಆಗಮನವಾಗಲಿರುವ ಫೋಕ್ಸ್ ವ್ಯಾಗನ್ ಬೀಟ್ಲ್ ಬೈ ಕ್ಸೆನಾನ್ ಹೆಡ್ ಲೈಟ್ ಜೊತೆ ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಗಳ ಸೇವೆಯೂ ಇರಲಿದೆ. ಇನ್ನು ಕಾರಿನೊಳಗೆ ಲೆಥರ್ ಸೀಟು, ಪ್ಯಾನರಾಮಿಕ್ ಸನ್ ರೂಫ್ ಸೌಲಭ್ಯಗಳು ಕಂಡುಬರಲಿದೆ.
ವರ್ಷಾಂತ್ಯದೊಳಗೆ ಅಥವಾ ಮುಂದಿನ ವರ್ಷಾರಂಭದಲ್ಲಿ ಬಿಡುಗಡೆಯಾಗಲಿರುವ ಫೋಕ್ಸ್ ವ್ಯಾಗನ್ ಬೀಟ್ಲ್ 25 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.


Click it and Unblock the Notifications








