ವೆಚ್ಚ ಕಡಿತ; 2 ಮಾರಾಟ ಮಳಿಗೆಗೆ ಬೀಗ ಜಡಿದ ಫೋಕ್ಸ್‌ವ್ಯಾಗನ್

By Nagaraja

ಜರ್ಮನಿಯ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಪೋಕ್ಸ್ ವ್ಯಾಗನ್ ಭಾರತದಲ್ಲಿ ತನ್ನದೇ ಆದ ಮಾರಾಟ ವಲಯವನ್ನು ಹೊಂದಿದೆ. ಪ್ರಸ್ತುತ ಸಂಸ್ಥೆಯೀಗ ವೆಚ್ಚ ಕಡಿತದ ಹಿನ್ನೆಲೆಯಲ್ಲಿ ತನ್ನ ಎರಡು ಮಾರಾಟ ಮಳಿಗೆಗೆ ಬೀಗ ಜಡಿದಿದೆ.

ಸಂಸ್ಥೆಯ ಬೆಂಗಳೂರು ಹಾಗೂ ದೆಹಲಿಯಲ್ಲಿರುವ ಸ್ಥಳೀಯ ಮಾರಾಟ ಕಚೇರಿಯನ್ನು ಮುಚ್ಚುಗಡೆಗೊಳಿಸಲಾಗಿದೆ. ಅಂದ ಹಾಗೆ ಪುಣೆಯ ಚಕನ್ ಘಟಕದಲ್ಲಿ ನಿರ್ಮಾಣವನ್ನು ಹೊಂದಿರುವ ಸಂಸ್ಥೆಯು ವಾರ್ಷಿಕವಾಗಿ 1,30,000 ಯುನಿಟ್‌ಗಳಷ್ಟು ವಾಹನಗಳನ್ನು ಉತ್ಪಾದಿಸುತ್ತಿದೆ.

volkswagen jetta

ಅತ್ಯುತ್ತಮ ಗುಟಮಟ್ಟವನ್ನು ಹೊಂದಿರುವ ಹೊರತಾಗಿಯೂ ಭಾರತೀಯ ಮಾರುಕಟ್ಟೆಯಲ್ಲಿ ಫೋಕ್ಸ್ ವ್ಯಾಗನ್ ನಿರೀಕ್ಷಿತ ಮಾರಾಟ ಸಾಧಿಸಲು ಯಶಸ್ವಿಯಾಗಲಿಲ್ಲ. ಹಾಗಿದ್ದರೂ ಭಾರತದಲ್ಲಿ ನಿರ್ಮಾಣವಾದ ವಾಹನಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತಿದೆ.

ವಿಶೇಷವೆಂದರೆ ಫೋಕ್ಸ್‌ವ್ಯಾಗನ್‌ನಿಂದ ದೇಶದಲ್ಲಿ ನಿರ್ಮಾಣವಾಗುತ್ತಿರುವ ಶೇ.60ರಷ್ಟು ವಾಹನಗಳು ರಫ್ತಾಗುತ್ತಿದೆ. ಪ್ರಸ್ತುತ ಮಾರಾಟ ಹಿನ್ನಡೆಯಲ್ಲಿ ಹೊಸ ಉತ್ಪನ್ನಗಳತ್ತ ದೃಷ್ಟಿ ಹಾಯಿಸುತ್ತಿದೆ.

ನಿಮ್ಮ ಮಾಹಿತಿಗಾಗಿ ಫೆಬ್ರವರಿ 17ರಂದು ಫೋಕ್ಸ್‌ವ್ಯಾಗನ್ ಸಂಸ್ಥೆಯು ಜೆಟ್ಟಾ ಸೆಡಾನ್ ಕಾರಿನ ಪರಿಷ್ಕೃತ ಮಾದರಿಯನ್ನು ಬಿಡುಗಡೆ ಮಾಡಲಿದೆ. ಕೆಲವು ಸಮಯಗಳ ಹಿಂದೆಯಷ್ಟೇ ಪರಿಷ್ಕೃತ ಪೊಲೊ ಮಾದರಿಯನ್ನು ಪರಿಚಯಿಸಲಾಗಿತ್ತು. ಭಾರತದಲ್ಲಿ ಪೊಲೊ, ಕ್ರಾಸ್ ಪೊಲೊ, ವೆಂಟೊ ಹಾಗೂ ಜೆಟ್ಟಾ ಮಾದರಿಗಳು ಮಾರಾಟದಲ್ಲಿದೆ.

More from DriveSpark

Article Published On: Thursday, February 12, 2015, 12:44 [IST]
English summary
Volkswagen India has shut down two of its sales offices. The first in Bangalore and the second in Delhi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+