ಫೋಕ್ಸ್‌ವ್ಯಾಗನ್‌ನಿಂದ ಪವರ್‌ಫುಲ್ ಹ್ಯಾಚ್‌ಬ್ಯಾಕ್‌ಗೆ ತಯಾರಿ
ನಿಮಗೆಲ್ಲರಿಗೂ ತಿಳಿದಿರುವಂತೆಯೇ ಪರಿಷ್ಕೃತ ಪೊಲೊ ಹ್ಯಾಚ್‌ಬ್ಯಾಕ್ ಕಾರನ್ನು 2014ನೇ ಸಾಲಿನಲ್ಲೇ ಬಿಡುಗಡೆಗೊಳಿಸಲಾಗಿತ್ತು. ಇನ್ನು ಅಂತರಾಷ್ಟ್ರೀಯ ಮಾರುಕಟ್ಟೆಯ ಬೇಡಿಕೆಯ ತಕ್ಕಂತೆ ನಿರಂತರ ಅಂತರಾಳದಲ್ಲಿ ಹೊಸ ಹೊಸ ಮಾದರಿಗಳನ್ನು ಸಂಸ್ಥೆಯು ಪರಿಚಯಿಸುತ್ತಲೇ ಬಂದಿದೆ.
ಅಂದ ಹಾಗೆ ಶಕ್ತಿಶಾಲಿ ಪೊಲೊ ಜಿಟಿ ಮಾದರಿಯನ್ನು ಸಹ ದೇಶಕ್ಕೆ ಪರಿಚಯಿಸಲಾಗಿತ್ತು. ಈಗ ಜರ್ಮನಿಯ ಮೂಲದ ಈ ಸಂಸ್ಥೆಯು ಇನ್ನಷ್ಟು ಪವರ್‌ಫುಲ್ ಹ್ಯಾಚ್‌ಬ್ಯಾಕ್ ಕಾರನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಅತ್ಯುತ್ತಮ ಚಾಲನಾ ಅನುಭವಕ್ಕಾಗಿ ರೇಸಿಂಗ್ ಮಾದರಿಯ ಉಪಕರಣಗಳನ್ನು ಕಾರಿಗೆ ಜೋಡಣೆ ಮಾಡುವುದು ಸಂಸ್ಥೆಯ ಇರಾದೆಯಾಗಿದೆ. ಪ್ರಸ್ತುತ ಕಾರು ಫಿಯೆಟ್ ಅಬಾರ್ತ್ ಹಾಗೂ ಪುಂಟೊ ಮಾದರಿಗಳಿಗೆ ಸವಾಲಾಗಲಿದೆ.
ಫೋಕ್ಸ್‌ವ್ಯಾಗನ್ ಪೊಲೊ ಜಿಟಿ ತಾಂತ್ರಿಕ ಮಾಹಿತಿ
ಪೆಟ್ರೋಲ್ ಎಂಜಿನ್: 1.2 ಲೀಟರ್ ಎಂಪಿಐ (103 ಬಿಎಚ್‌ಪಿ, 175 ಎನ್‌ಎಂ ಟಾರ್ಕ್), 7 ಸ್ಪೀಡ್ ಗೇರ್ ಬಾಕ್ಸ್
ಮೈಲೇಜ್: 16.47 kpl
ಡೀಸೆಲ್ ಎಂಜಿನ್: 1.5 ಲೀಟರ್ ಟಿಡಿಐ (103 ಬಿಎಚ್‌ಪಿ, 250 ಪೀಕ್ ಟಾರ್ಕ್), 5 ಸ್ಪೀಡ್ ಗೇರ್ ಬಾಕ್ಸ್
ಮೈಲೇಜ್: 19.91 kpl


Click it and Unblock the Notifications








