ಹೊಸ ಸ್ವರೂಪದಲ್ಲಿ ಮಾರುಕಟ್ಟೆ ಪ್ರವೇಶಿಸಿದ ವೆಂಟೊ
ದೇಶದ ಮಾರುಕಟ್ಟೆಯಟ್ಟೆಯಲ್ಲಿ ಮಾರುತಿ, ಹೋಂಡಾ ಹಾಗೂ ಹ್ಯುಂಡೈ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿರುವ ಜರ್ಮನಿ ಮೂಲದ ಫೋಕ್ಸ್ ವ್ಯಾಗನ್ ಸಂಸ್ಥೆಯು ಹೊಸ ಸ್ವರೂಪದ ವೆಂಟೊ ಕಾರನ್ನು ಪರಿಚಯಿಸಿದೆ.
ಮಧ್ಯಮ ವರ್ಗದ ಸೆಡಾನ್ ವಿಭಾಗದಲ್ಲಿ ಹೋಂಡಾ ಸಿಟಿ, ಮಾರುತಿ ಸಿಯಾಝ್ ಹಾಗೂ ಹ್ಯುಂಡೈ ವೆರ್ನಾ ಅತ್ಯುತ್ತಮ ಮಾರಾಟವನ್ನು ಕಾಯ್ದಕೊಂಡಿದೆ. ಈ ನಡುವೆ ವೆಂಟೊ ಶಕ್ತಿ ಪ್ರದರ್ಶನ ಮಾಡಿದ್ದು, ಮಾರಾಟಕ್ಕೆ ಉತ್ತೇಜನ ನೀಡುವ ನಿರೀಕ್ಷೆಯಲ್ಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)
ವೆಂಟೊ 1.6 ಎಂಪಿಐ ಎಂಟಿ: 7.70 - 9.24 ಲಕ್ಷ ರು.
ವೆಂಟೊ 1.2 ಟಿಎಸ್‌ಐ ಡಿಎಸ್‌ಜಿ: 9.68 - 10.42 ಲಕ್ಷ ರು.
ವೆಂಟೊ 1.5 ಟಿಡಿಐ ಎಂಟಿ: 8.93 - 10.47 ಲಕ್ಷ ರು.
ವೆಂಟೊ 1.5 ಟಿಡಿಐ ಡಿಎಸ್‌ಜಿ - 10.91 - 11.64 ಲಕ್ಷ ರು.

ಸುರಕ್ಷತೆ
ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ (ಸ್ಟ್ಯಾಂಡರ್ಡ್),
ಎಬಿಎಸ್,
ಇಎಸ್ ಪಿ (ಡಿಎಸ್ ಜಿ ಟ್ರಾನ್ಸ್ ಮಿಷನ್ ಮಾದರಿಯಲ್ಲಿ ಮಾತ್ರ),
ಹಿಲ್ ಹೋಲ್ಡ್ ಕಂಟ್ರೋಲ್ (ಡಿಎಸ್ ಜಿ ಟ್ರಾನ್ಸ್ ಮಿಷನ್ ಮಾದರಿಯಲ್ಲಿ ಮಾತ್ರ),
ಎಲೆಕ್ಟ್ರಾನಿಕ್ ಎಂಜಿನ್ ಇಂಮೊಬಿಲೈಜರ್ ಜೊತೆ ಫ್ಲೋಟಿಂಗ್ ಕೋಡ್,
ಫ್ರಂಟ್ ಫಾಗ್ ಲ್ಯಾಂಪ್ ಜೊತೆ ಸ್ಟಾಟಿಕ್ ಕಾರ್ನರಿಂಗ್ ಲೈಟ್,
ಪವರ್ ವಿಂಡೋ ಜೊತೆ ಎಲ್ಲ ಡೋರ್ ಗಳಲ್ಲೂ ಪಿಂಚ್ ಗಾರ್ಡ್ ಕ್ರಿಯಾತ್ಮಕತೆ

ಎಂಜಿನ್
1.2 ಲೀಟರ್ ಟಿಎಸ್ ಐ ಟರ್ಬೊ ಚಾರ್ಜ್ಡ್ ಡೈರಕ್ಟ್ ಇಂಜೆಕ್ಷನ್ ಪೆಟ್ರೋಲ್ ಎಂಜಿನ್ 103.52 ಅಶ್ವಶಕ್ತಿ (175 ತಿರುಗುಬಲ) ಉತ್ಪಾದಿಸಲಿದೆ. ಇದು 7 ಸ್ಪೀಡ್ ಡಿಎಸ್ ಜಿ ಟ್ರಾನ್ಸ್ ಮಿಷನ್ ಮಾದರಿಯಲ್ಲಿ ಮಾತ್ರ ದೊರಕಲಿದ್ದು, ಪ್ರತಿ ಲೀಟರ್ ಗೆ 18.19 ಕೀ.ಮೀ. ಮೈಲೇಜ್ ನೀಡಲಿದೆ.

ಇನ್ನು 1.6 ಲೀಟರ್ ಎಂಪಿಐ ನೈಸರ್ಗಿಕವಾಗಿ ಚೋಷಿತ ಮಲ್ಟಿ ಪಾಯಿಂಗ್ ಫ್ಲೂಯಲ್ ಇಂಜೆಕ್ಷನ್ ಪೆಟ್ರೋಲ್ ಎಂಜಿನ್ ಕೂಡಾ ಇರಲಿದ್ದು 103.52 ಅಶ್ವಶಕ್ತಿ (153 ತಿರುಗುಬಲ) ಉತ್ಪಾದಿಸಲಿದೆ. ಇದರಲ್ಲಿ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಕಂಡುಬರಲಿದ್ದು, ಪ್ರತಿ ಲೀಟರ್ ಗೆ 16.09 ಕೀ.ಮೀ. ಮೈಲೇಜ್ ನೀಡಲಿದೆ.

ಇನ್ನುಳಿದಂತೆ 1.5 ಲೀಟರ್ ಟಿಡಿಐ ಟರ್ಬೊ ಚಾರ್ಜ್ಡ್ ಕಾಮನ್ ರೈಲ್ ಡೈರಕ್ಟ್ ಇಂಜೆಕ್ಷನ್ ಡೀಸೆಲ್ ಎಂಜಿನ್ 103.52 ಅಶ್ವಶಕ್ತಿ (250 ತಿರುಗುಬಲ) ಉತ್ಪಾದಿಸಲಿದ್ದು, 5 ಹಾಗೂ 7 ಸ್ಪೀಡ್ ಗೇರ್ ಬಾಕ್ಸ್ ಗಳಲ್ಲಿ ಲಭ್ಯವಾಗಲಿದೆ. ಫೋಕ್ಸ್ ವ್ಯಾಗನ್ ವೆಂಟೊ ಮ್ಯಾನುವಲ್ ಹಾಗೂ ಡಿಎಸ್ ಜಿ ಮಾದರಿಗಳಲ್ಲಿ ಅನುಕ್ರಮವಾಗಿ 20.64 ಹಾಗೂ 21.50 ಕೀ.ಮೀ. ಮೈಲೇಜ್ ನೀಡಲಿದೆ.

ವೈಶಿಷ್ಟ್ಯ
ಪರಿಷ್ಕೃತ ಫ್ರಂಟ್ ಮತ್ತು ರಿಯರ್ ಬಂಪರ್,
ಕ್ರೋಮ್ ಗ್ರಿಲ್,
ಡೋರ್ ಹ್ಯಾಂಡಲ್ ನಲ್ಲಿ ಕ್ರೋಮ್ ಸ್ಪರ್ಶ,
15 ಇಂಚು ಅಲಾಯ್ ವೀಲ್,
ಓಆರ್ ವಿಎಂ ಜೊತೆ ಟರ್ನ್ ಇಂಡಿಕೇಟರ್,
3 ಡಿ ಎಫೆಕ್ಟ್ ಟೈಲ್ ಲ್ಯಾಂಪ್,
ಬಹು ಕ್ರಿಯಾತ್ಮಕ ಕನ್ಸೋಲ್,
ಸ್ಮಾರ್ಟ್ ಕಂಟ್ರೋಲ್ ಸ್ಟೀರಿಂಗ್ ವೀಲ್,
ಕೂಲ್ಡ್ ಗ್ಲೋವ್ ಬಾಕ್ಸ್,
ಸ್ಪೇಸ್ ಮ್ಯಾಕ್ಸ್ ತಂತ್ರಗಾರಿಕೆ,
ಎರಡು ಹೊಸ ಬಣ್ಣಗಳು (ಟೈಟಾನಿಯಂ ಬೀಜ್ ಮತ್ತು ಕಾರ್ಬನ್ ಸ್ಟೀಲ್)


Click it and Unblock the Notifications








