ಚಿಕಾಗೊ ಚುಂಬಿಸಿದ 2016 ಹೋಂಡಾ ಪೈಲಟ್

By Nagaraja

ಪ್ರತಿಷ್ಠಿತ ಚಿಕಾಗೊ ಆಟೋ ಶೋದಲ್ಲಿ ಎಲ್ಲ ಹೊಸತನದಿಂದ ಕೂಡಿದ 2016 ಹೋಂಡಾ ಪೈಲಟ್ ಕಾರನ್ನು ಅನಾವರಣಗೊಳಿಸಲಾಗಿದೆ. ಈ ಮೂಲಕ ತನ್ನ ಬದ್ಧತೆಯನ್ನು ಹೋಂಡಾ ಪ್ರದರ್ಶಿಸಿದೆ.

ಹಿಂದಿನ ಮಾದರಿಗೆ ಹೋಲಿಸಿದಾಗ ಪ್ರಮುಖ ಬದಲಾವಣೆಯೆಂದರೆ ಹೊಸ ಪೈಲಟ್ ಒಂಬತ್ತು ಸೆಂಟಿಮೀಟರ್‌ಗಳಷ್ಟು ಹೆಚ್ಚಿನ ಉದ್ದಳತೆಯನ್ನು ಹಾಗೂ 136 ಕೆ.ಜಿ ಹೆಚ್ಚು ತೂಕವನ್ನು ಪಡೆದುಕೊಂಡಿರುತ್ತದೆ.

ಚಿಕಾಗೊ ಆಟೋ ಶೋದಲ್ಲಿ 2016 ಹೋಂಡಾ ಪೈಲಟ್ ಅನಾವರಣ

ಇನ್ನು ಟಾಪ್ ಎಂಡ್ ವೆರಿಯಂಟ್‌ನಲ್ಲಿ ಎಲ್‌ಇಡಿ ಹೆಡ್ ಲೈಟ್, ಎಲ್‌ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್, ಪ್ಯಾನರಾಮಿಕ್ ಗ್ಲಾಸ್ ರೂಫ್ ಮತ್ತು 20 ಇಂಚಿನ್ ಅಲಾಯ್ ವೀಲ್‌ಗಳು ಕಂಡುಬರಲಿದೆ.

ಚಿಕಾಗೊ ಆಟೋ ಶೋದಲ್ಲಿ 2016 ಹೋಂಡಾ ಪೈಲಟ್ ಅನಾವರಣ

ಇವೆಲ್ಲವೂ ಹೊರಮೈಯ ವೈಶಿಷ್ಟ್ಯಗಳಾಗಿದ್ದರೆ ಇನ್ನು ಕಾರಿನ ಒಳಗಡೆ ಮೃದುತ್ವ ಹಾಗೂ ಗರಿಷ್ಠ ಗುಣಮಟ್ಟದ ಉಪಕರಣಗಳಿಗೆ ಆದ್ಯತೆ ಕೊಡಲಾಗಿದೆ.

ಚಿಕಾಗೊ ಆಟೋ ಶೋದಲ್ಲಿ 2016 ಹೋಂಡಾ ಪೈಲಟ್ ಅನಾವರಣ

ಇದರಲ್ಲಿ ದೊಡ್ಡದಾದ ಸೆಂಟರ್ ಕನ್ಸೋಲ್, ಆಡಿಯೋ ಸಿಸ್ಟಂ, ಎಂಟು ಇಂಚಿನ ಪರದೆ, ಹೀಟಡ್/ವೆಂಟಿಲೇಟಡ್ ಫ್ರಂಟ್ ಸೀಟು, ಹೀಟಡ್ ಎರಡನೇ ಸಾಲಿನ ಆಸನ, ಹೀಟಡ್ ಸ್ಟೀರಿಂಗ್ ವಿಲ್ ಮತ್ತು ಹಿಂದುಗಡೆಯೂ 9 ಇಂಚಿನ ಮನರಂಜನಾ ವ್ಯವಸ್ಥೆ ಇರಲಿದೆ. ಅಂತೆಯೇ ಎರಡನೇ ಸಾಲಿನಲ್ಲಿ ಕಾಪ್ಟನ್ ಆಸನವನ್ನು ಪಡೆಯಬಹುದಾಗಿದೆ.

ಚಿಕಾಗೊ ಆಟೋ ಶೋದಲ್ಲಿ 2016 ಹೋಂಡಾ ಪೈಲಟ್ ಅನಾವರಣ

ಕಾರಿನಡಿಯಲ್ಲಿ ಡಿಆಕ್ಟಿವೇಷನ್ ತಂತ್ರಗಾರಿಕೆಯ 3.5 ಲೀಟರ್ ವಿ6 ಎಂಜಿನ್ ಇರಲಿದೆ. ಇದು 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸಹ ಪಡೆಯಲಿದೆ. ಇವೆಲ್ಲದರ ಜೊತೆಗೆ 9 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಕೂಡಾ ಇರಲಿದೆ. ಅಷ್ಟೇ ಯಾಕೆ ಫ್ರಂಟ್ ಅಥವಾ ರಿಯರ್ ವೀಲ್ ಚಾಲನಾ ವ್ಯವಸ್ಥೆಯನ್ನು ಪಡೆಯಲಿದೆ.

ಚಿಕಾಗೊ ಆಟೋ ಶೋದಲ್ಲಿ 2016 ಹೋಂಡಾ ಪೈಲಟ್ ಅನಾವರಣ

ಇನ್ನು ಗರಿಷ್ಠ ಸುರಕ್ಷತೆಯ ದೃಷ್ಟಿಕೋನದಲ್ಲಿ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಬ್ರೇಕ್ ಅಸಿಸ್ಟ್ ಮತ್ತು ಹಿಲ್ ಅಸಿಸ್ಟ್, ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್, ಡ್ರೈವರ್ ಮಿರರ್‌ನಲ್ಲಿ ಗೋಚರತೆ ವೃದ್ಧಿ, ಡ್ಯುಯಲ್ ಸ್ಟೇಜ್, ಫ್ರಂಟ್ ಏರ್ ಬ್ಯಾಗ್, ಚಾಲಕ ಹಾಗೂ ಮುಂಭಾಗದ ಪ್ರಯಾಣಿಕರಿಗೆ ಸ್ಮಾರ್ಟ್ ವೆಂಟ್ ಬದಿಯ ಏರ್ ಬ್ಯಾಗ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂಗಳನ್ನು ಪಡೆಯಲಿದೆ.

ಚಿಕಾಗೊ ಆಟೋ ಶೋದಲ್ಲಿ 2016 ಹೋಂಡಾ ಪೈಲಟ್ ಅನಾವರಣ

ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಹೋಂಡಾ ಪೈಲಟ್ ಕಾರು ಹೆಚ್ಚಿನ ಆಕರ್ಷಣೆಗೆ ಕಾರಣವಾಗಲಿದೆ ಎಂಬುದು ಆಟೋ ತಜ್ಞರ ಭವಿಷ್ಯವಾಣಿಯಾಗಿದೆ.

More from DriveSpark

Article Published On: Tuesday, February 17, 2015, 10:24 [IST]
English summary
2016 Honda Pilot revealed at Chicago Auto Show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+