ಮಾರುತಿ ಸಿಯಾಝ್‌ಗೆ ಹ್ಯುಂಡೈ ವೆರ್ನಾ ಹೈಬ್ರಿಡ್ ಕಾರಿನ ಸೆಡ್ಡು
ಹ್ಯುಂಡೈ ವೆರ್ನಾ ಹೈಬ್ರಿಡ್ ಭಾರತದತ್ತ ಮುಖ ಮಾಡಿದ್ದು, ಮಾರುತಿ ಸುಜುಕಿ ಸಿಯಾಝ್ ಗೆ ನೇರ ಪ್ರತಿಸ್ಪರ್ಧಿಯಾಗಲಿದೆ.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಚೆಂಗ್ಡು ಮೋಟಾರು ಶೋದಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ 2017 ಹ್ಯುಂಡೈ ವೆರ್ನಾ, ಮುಂಬರುವ ವರ್ಷದ ದ್ವಿತಿಯಾರ್ಧದಲ್ಲಿ ಭಾರತಕ್ಕೆ ಪ್ರವೇಶಿಸಲಿದೆ. ಈಗ ಬಂದಿರುವ ತಾಜಾ ಮಾಹಿತಿಗಳ ಪ್ರಕಾರ 2017 ಹ್ಯುಂಡೈ ವೆರ್ನಾ, ಸಣ್ಣ ಪ್ರಮಾಣದ ಮೈಲ್ಡ್ ಹೈಬ್ರಿಡ್ ತಂತ್ರಗಾರಿಕೆಯನ್ನು ಪಡೆಯಲಿದೆ.

ಸುಜುಕಿ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ ಸಿಸ್ಟಂ ಮೈಲ್ಡ್ ಹೈಬ್ರಿಡ್ ತಂತ್ರಗಾರಿಕೆಗೆ ವಿರುದ್ಧವಾಗಿ ಹ್ಯುಂಡೈ ಸಹ ವೆರ್ನಾ ಕಾರಿನಲ್ಲಿ ರಿಜನರೇಟಿವ್ ಬ್ರೇಕಿಂಗ್ ಸಿಸ್ಟಂ ಬಳಕೆಯಾಗಲಿದೆ.

ಬ್ರೇಕಿಂಗ್ ವೇಳೆ ಉತ್ಪನ್ನವಾಗುವ ಶಕ್ತಿಯನ್ನು ವಿದ್ಯುತ್ತಾಗಿ ಮಾರ್ಪಾಡಿಸಿ ಬ್ಯಾಟರಿಯಲ್ಲಿ ಶೇಖರಿಸಿಡಲಾಗುವುದು. ಇದು ಇಂಟೇಗ್ರೇಟಡ್ ಸ್ಟ್ಯಾರ್ಟರ್ ಜನರೇಟರಿಗೆ ಸಂಪರ್ಕವಾಗಿರಲಿದೆ.

ರಿಜನರೇಟಿವ್ ಮುಖಾಂತರ ಶೇಖರಿಸಿದ ಶಕ್ತಿಯು ಕಾರಿನ ಎಲೆಕ್ಟ್ರಿಕ್ ಘಟಕಗಳು ಬೇಕಾದ ಶಕ್ತಿಯನ್ನು ರವಾನಿಸಲಿದೆ. ಇದರಿಂದ ಇಂಧನ ಉಳಿತಾಯವಾಗಲಿದೆ.

ನೂತನ ವೆರ್ನಾ ಕಾರಿನಲ್ಲಿ ಪ್ರಮುಖವಾಗಿಯೂ ಆಟೋಮ್ಯಾಟಿಕ್ ಎಂಜಿನ್ ಸ್ಟಾಪ್-ಸ್ಟ್ಯಾರ್ಟ್ ಸಿಸ್ಟಂ ಜೊತೆಗೆ ರಿಜನರೇಟಿವ್ ಬ್ರೇಕಿಂಗ್ ತಂತ್ರಜ್ಞಾನ ಬಳಕೆಯಾಗಲಿದೆ. ಈ ತಂತ್ರಜ್ಞಾನದ ಮೂಲಕ ಟ್ರಾಫಿಕ್ ನಂತಹ ಪ್ರದೇಶಗಳಲ್ಲಿ ವಾಹನ ನಿಲುಗಡೆಯಾದಾಗ ಸ್ವಯಂಚಾಲಿತವಾಗಿ ಎಂಜಿನ್ ಆಫ್ ಆಗಲಿದೆ. ಬಳಿಕ ಕ್ವಚ್ ಬಿಡುಗಡೆ ಮಾಡಿದಾಗ ಎಂಜಿನ್ ಮರು ಚಾಲನೆಯಾಗಲಿದೆ.

2017 ಹ್ಯುಂಡೈ ವೆರ್ನಾದಲ್ಲಿ ಪರಿಷ್ಕೃತ ಎಂಜಿನ್ ಬಳಕೆಯಾಗಲಿದೆ. ಇದು 1.4 ಲೀಟರ್ ಪೆಟ್ರೋಲ್ ಮತ್ತು 1.6 ಲೀಟರ್ ಡೀಸೆಲ್ ಎಂಜಿನ್ ಪಡೆಯಲಿದೆ.

ಈ ಪೈಕಿ 1.6 ಲೀಟರ್ ಡೀಸೆಲ್ ಆವೃತ್ತಿಯಲ್ಲಿ ಹೈಬ್ರಿಡ್ ತಂತ್ರಜ್ಞಾನವು ಜೋಡಣೆಯಾಗಲಿದೆ. ಇದು ಪ್ರಮುಖವಾಗಿಯೂ ಮಾರುತಿ ಸುಜುಕಿ ಸಿಯಾಝ್ ಎಸ್ ಎಚ್ ವಿಎಸ್ ಮಾದರಿಗೆ ಪೈಪೋಟಿಯನ್ನು ಒಡ್ಡಲಿದೆ.

ನ್ಯಾಷನಲ್ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್ ಪ್ಲ್ಯಾನ್ ಅಡಿಯಲ್ಲಿ ಗುರುತಿಸಿಕೊಳ್ಳುವುದರಿಂದ ಕೇಂದ್ರ ಸರಕಾರದಿಂದ ತೆರಿಗೆ ವಿನಾಯಿತಿ ಗಿಟ್ಟಿಸಿಕೊಳ್ಳಲುವ ಹ್ಯುಂಡೈ ವೆರ್ನಾ ಹೈಬ್ರಿಡ್ ಕಾರಿಗೆ ಸಾಧ್ಯವಾಗಲಿದೆ.

ಹ್ಯುಂಡೈ ಹೊಸ ವೆರ್ನಾ ಕಾರು ಯುರೋಪ್ IV ಮಾಲಿನ್ಯ ಮಟ್ಟಕ್ಕೆ ಸಮಾನವಾಗಿ ಭಾರತ್ ಸ್ಟೇಜ್ IV ಎಮಿಷನ್ ಮಟ್ಟವನ್ನು ಕಾಪಾಡಿಕೊಳ್ಳಲಿದೆ.


Click it and Unblock the Notifications








