ತಂತ್ರಕ್ಕೆ ಪ್ರತಿತಂತ್ರ ರೂಪಿಸಿದ ಮಾರುತಿಯಿಂದ ಸಣ್ಣ ಕಾರು

By Nagaraja

ತಂತ್ರಕ್ಕೆ ಪ್ರತಿತಂತ್ರ ರೂಪಿಸುವುದರಲ್ಲಿ ನಿಸ್ಸೀಮವೆನಿಸಕೊಂಡರುವ ದೇಶದ ನಂ.1 ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ, ಹೊಚ್ಚ ಹೊಸ ಸಣ್ಣ ಕಾರನ್ನು ನಿಕಟ ಭವಿಷ್ಯದಲ್ಲೇ ಬಿಡುಗಡೆಗೊಳಿಸಲಿದೆ.

ರೆನೊ ಕ್ವಿಡ್ ಹಾಗೂ ದಟ್ಸನ್ ರೆಡಿ ಗೊದಂತಹ ಪ್ರತಿಸ್ಪರ್ಧಿಗಳಿಂದ ಪೈಪೋಟಿ ಹೆಚ್ಚಾಗಿರುವುದನ್ನು ಮನಗಂಡಿರುವ ಮಾರುತಿಗೆ ಸಣ್ಣ ಕಾರು ಮಾರುಕಟ್ಟೆಯಲ್ಲಿ ತನ್ನ ದೀರ್ಘ ಕಾಲದ ಅಧಿಪತ್ಯವು ನಷ್ಟವಾಗುವ ಭೀತಿ ಕಾಡುತ್ತಿದೆ. ಇದನ್ನೆಲ್ಲ ಸಮರ್ಥವಾಗಿ ಎದುರಿಸುವುದರ ಜೊತೆಗೆ ದೀರ್ಘಾವಧಿಯ ಯೋಜನೆ ಜಾರಿ ಮಾಡಲಿದೆ.

ಮಾರುತಿ ಸಣ್ಣ ಕಾರು

ತನ್ನ ಜನಪ್ರಿಯ ಮಾರುತಿ ಆಲ್ಟೊ 800 ಮರು ಪರಿಚಯಿಸುವುದು ಮಾರುತಿ ಯೋಜನೆಯಾಗಿದೆ. ತದಾ ಬಳಿಕ 2018ರಲ್ಲಿ ನೂತನ ಹ್ಯಾಚ್ ಬ್ಯಾಕ್ ಕಾರಿನ ಪ್ರವೇಶವಾಗಲಿದೆ.

ಜಪಾನ್ ಮಾರುಕಟ್ಟೆಯಲ್ಲಿ ಸದ್ಯ ಮಾರಾಟದಲ್ಲಿರುವ ಮಾರುತಿ 800 ಭಾರತಕ್ಕೆ ಪರಿಚಯವಾಗುವ ಸಾಧ್ಯತೆಯಿದೆ. ಇದು ಜಪಾನ್ ಮಾದರಿಗೆ ಸಮಾನವಾದ ವೈಶಿಷ್ಟ್ಯಗಳು ಒಳಗೊಂಡಿರಲಿದೆ. ಇದರ ಜೊತೆ ಗಮನಾರ್ಹ ವಿಶಿಷ್ಟತೆಗಳನ್ನು ನಿರೀಕ್ಷೆ ಮಾಡಬಹುದಾಗಿದೆ.

ಹೊಸ ಆಲ್ಟೊ 800 ಕಾರಿನಡಿಯಲ್ಲಿ ಹೆಚ್ಚಿನ ಬದಲಾವಣೆ ಕಂಡುಬರುವ ಸಾಧ್ಯತೆ ಕಡಿಮೆಯಾಗಿದೆ. ಇದು 800 ಹಾಗೂ 1.0 ಕೆ-ಸಿರೀಸ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 5 ಸ್ಪೀಡ್ ಮತ್ತು ಎಎಂಟಿ ಗೇರ್ ಬಾಕ್ಸ್ ಇರಲಿದೆ.

More from DriveSpark

Article Published On: Monday, September 26, 2016, 16:08 [IST]
English summary
Maruti Suzuki Is Developing An All-New Small Car For 2017
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+