ಬಿಡುಗಡೆಗೂ ಮುನ್ನ ಫೋಕ್ಸ್‌ವ್ಯಾಗನ್ ಎಮಿಯೊ ಶಕ್ತಿ ಪ್ರದರ್ಶನ
ಮುಂಬರುವ ಎರಡು ವರ್ಷಗಳಿಗೊಮ್ಮೆ ನಡೆಯಲಿರುವ ದೇಶದ ಅತಿ ದೊಡ್ಡ ವಾಹನ ಪ್ರದರ್ಶನ ಮೇಳ 2016 ಆಟೋ ಎಕ್ಸ್ ಪೋದಲ್ಲಿ ಜರ್ಮನಿಯ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆ ಫೋಕ್ಸ್‌ವ್ಯಾಗನ್ ಅತಿ ನೂತನ 'ಎಮಿಯೊ' ಕಾರನ್ನು ಬಿಡುಗಡೆ ಮಾಡಲಿಡೆ.
ಈ ಸಂಬಂಧ ನೂತನ ಎಮಿಯೊ ಸಬ್ ಕಾಂಪಾಕ್ಟ್ ಸೆಡಾನ್ ಕಾರಿನ ಬಗ್ಗೆ ನೀವು ಅರಿತುಕೊಳ್ಳಬೇಕಾದ ಮಹತ್ವದ ವಿಚಾರಗಳನ್ನು ಇಲ್ಲಿ ಪಟ್ಟಿ ಮಾಡಿ ಕೊಡಲಿದ್ದೇವೆ.

ಮೊದಲ ಕಾಂಪಾಕ್ಟ್ ಸೆಡಾನ್ ಕಾರು
ಎಮಿಯೊ ಭಾರತದಲ್ಲಿ ಫೋಕ್ಸ್‌ವ್ಯಾಗನ್ ಸಂಸ್ಥೆ ಬಿಡುಗಡೆ ಮಾಡಲಿರುವ ಮೊದಲ ಕಾಂಪಾಕ್ಟ್ ಸೆಡಾನ್ ಕಾರಾಗಿರಲಿದೆ.

ಮೇಡ್ ಇನ್ ಇಂಡಿಯಾ
ಎಮಿಯೊ ವಿಶೇಷವಾಗಿಯೂ ಭಾರತೀಯರಿಗಾಗಿ ಸಂಪೂರ್ಣವಾಗಿಯೂ ಭಾರತದಲ್ಲೇ ನಿರ್ಮಿತ ಕಾಂಪಾಕ್ಟ್ ಸೆಡಾನ್ ಕಾರಾಗಿದೆ. ಇದರ ಬಹುತೇಕ ನಿರ್ಮಾಣ ಹಾಗೂ ಅಭಿವೃದ್ಧಿ ಕಾರ್ಯವನ್ನು ಸ್ಥಳೀಯಗೊಳಿಸಲಾಗಿದ್ದು, ಸಂಸ್ಥೆಯ ಚಕನ್ ಘಟಕದಲ್ಲಿ ನಿರ್ಮಿಸಲಾಗಿದೆ.

ಸಬ್ ಫೋರ್ ಮೀಟರ್
ನಾಲ್ಕು ಮೀಟರ್ ಉದ್ದ ಪರಿಧಿಯೊಳಗೆ ನಿರ್ಮಿತವಾಗಿರುವ ಒಂದು ಸುಂದರ ಕಾರು ಇದಾಗಿದ್ದು, ಸರಕಾರದಿಂದ ತೆರಿಗೆ ವಿನಾಯಿತಿ ಪೆಡದುಕೊಳ್ಳಲು ಸಹಕಾರಿಯಾಗಲಿದೆ.

ಪ್ರತಿಸ್ಪರ್ಧಿಗಳು
ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್,
ಹ್ಯುಂಡೈ ಎಕ್ಸ್‌ಸೆಂಟ್,
ಫೋರ್ಡ್ ಫಿಗೊ ಆಸ್ಪೈರ್,
ಟಾಟಾ ಜೆಸ್ಟ್

ಎಮಿಯೊ ಹೆಸರಲ್ಲೇನಿದೆ?
'ಎಮೊ' ಎಂಬ ಲ್ಯಾಟಿನ್ ಪದದಿಂದ ಎಮಿಯೊ ಉಲ್ಲೇಖಿಸಲಾಗಿದೆ. ಇಲ್ಲಿ ಎಮೊ ಎಂಬುದು 'ಐ ಲವ್' ಎಂಬ ಅರ್ಥವನ್ನು ನೀಡುತ್ತದೆ.

ಪೊಲೊಗೆ ಸಾಮ್ಯತೆ
ಫೋಕ್ಸ್ ವ್ಯಾಗನ್ ಸಂಸ್ಥೆಯ ಜನಪ್ರಿಯ ಪೊಲೊ ಹ್ಯಾಚ್ ಬ್ಯಾಕ್ ಕಾರಿನೊಂದಿಗೆ ತಳಹದಿಯನ್ನು ಹಂಚಿಕೊಂಡಿರುವ ಎಮಿಯೊ ಹಲವಾರು ವಿನ್ಯಾಸ ಸಾಮತ್ಯೆಯನ್ನು ಪಡೆದುಕೊಂಡಿದೆ.

ಬೆಸ್ಟ್ ಇನ್ ಕ್ಲಾಸ್ ಸೇಫ್ಟಿ
ಕಾಂಪಾಕ್ಟ್ ಸೆಡಾನ್ ಕಾರಿನ ಹೊರತಾಗಿಯೂ ಗರಿಷ್ಠ ಸುರಕ್ಷಾ ಮಾನದಂಡಗಳಿಗೆ ಫೋಕ್ಸ್ ವ್ಯಾಗನ್ ಗಮನ ನೀಡಿದೆ. ಅಲ್ಲದೆ ಎಬಿಎಸ್, ಇಬಿಡಿ ಹಾಗೂ ಏರ್ ಬ್ಯಾಗ್ ಗಳ ಸೌಲಭ್ಯಗಳು ಲಭ್ಯವಾಗುವುದಂತೂ ಗ್ಯಾರಂಟಿ.

ಎಂಜಿನ್ ತಾಂತ್ರಿಕತೆ
ಫೋಕ್ಸ್ ವ್ಯಾಗನ್ ಪೊಲೊ ಜೊತೆ ಎಂಜಿನ್ ತಾಂತ್ರಿಕತೆ ಹಂಚಿಕೊಳ್ಳಲಿರುವ ನೂತನ ಎಮಿಯೊ 1.2 ಲೀಟರ್ ಎಂಪಿಐ ಪೆಟ್ರೋಲ್ ಹಾಗೂ 1.5 ಲೀಟರ್ ಟಿಡಿಐ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ. ಅಲ್ಲದೆ ಏಳು ಸ್ಪೀಡ್ ಡಿಜಿಎಸ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಗಮನವಾಗುವ ನಿರೀಕ್ಷೆಯೂ ಇದೆ.

ಆರಾಮ ಹಾಗೂ ಅನುಕೂಲ
ಅತ್ಯುತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಲಿರುವ ನೂತನ ಫೋಕ್ಸ್ ವ್ಯಾಗನ್ ಎಮಿಯೊ ಆರಾಮ ಹಾಗೂ ಅನುಕೂಲದಲ್ಲೂ ತನ್ನ ಪ್ರತಿಸ್ಪರ್ಧಿಗಳನ್ನು ಮೀರಿ ನಿಲ್ಲಲಿದೆ.

2016 ಆಟೋ ಎಕ್ಸ್ ಪೋ
ಬಹು ನಿರೀಕ್ಷಿತ ಫೋಕ್ಸ್ ವ್ಯಾಗನ್ ಎಮಿಯೊ ಬಹುನಿರೀಕ್ಷಿತ 2016 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಾಣಲಿದೆ. ತದಾ ಬಳಿಕ ಭರ್ಜರಿ ಬಿಡುಗಡೆ ಕಾಣಲಿದೆ.


Click it and Unblock the Notifications








