ಹೋಂಡಾ ಬಿಆರ್-ವಿ; ಬಿಡುಗಡೆಗೂ ಮುನ್ನ ತಿಳಿದುಕೊಳ್ಳಬೇಕಾದ ವಿಷಯಗಳು

By Nagaraja

ಜಪಾನ್ ಮೂಲದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆ ಹೋಂಡಾ ಕಾರ್ಸ್ ಇಂಡಿಯಾ, ಅತಿ ನೂತನ ಬಿಆರ್ ವಿ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಬಿಡುಗಡೆಗೂ ಮುಂಚಿತವಾಗಿ ಸಾಮಾಜಿಕ ಜಾಲತಾಣಗಳಲ್ಲಿ #WhereNextWithBRV ಎಂಬ ಡಿಜಿಟಲ್ ಅಭಿಮಾನಯವನ್ನು ಆರಂಭಿಸಿದೆ.

ಏಷ್ಯಾ ಎನ್‌ಸಿಎಪಿ ಢಿಕ್ಕಿ ಪರೀಕ್ಷೆಯಲ್ಲಿ ಐದು ಸ್ಟಾರ್ ಗಳನ್ನು ಗಿಟ್ಟಿಸಿಕೊಂಡಿರುವ ಹೋಂಡಾ ಬಿಆರ್-ವಿ ಈಗಾಗಲೇ ಇಂಡೋನೇಷ್ಯಾ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದು, ಈಗ ಭಾರತದತ್ತ ಮುಖ ಮಾಡಿದೆ. ಈ ಸಂಬಂಧ ಓದುಗರು ತಿಳಿದುಕೊಳ್ಳಬೇಕಾದ ಮುಖ್ಯ ವಿಚಾರಗಳ ಬಗ್ಗೆ ಇಲ್ಲಿ ಹೇಳಿಕೊಡಲಿದ್ದೇವೆ.

ಬೆಲೆ ಪರಿಧಿ

ಬೆಲೆ ಪರಿಧಿ

ಭಾರತೀಯ ಮಾರುಕಟ್ಟೆಯಲ್ಲಿ ನೂತನ ಹೋಂಡಾ ಬಿಆರ್ ವಿ ಎಂಟರಿಂದ 12 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ.

ಪ್ರತಿಸ್ಪರ್ಧಿಗಳು

ಪ್ರತಿಸ್ಪರ್ಧಿಗಳು

ಪ್ರಮುಖವಾಗಿಯೂ ಹ್ಯುಂಡೈ ಕ್ರೆಟಾ, ರೆನೊ ಡಸ್ಟರ್ ಮತ್ತು ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಮಾರುತಿ ಸುಜುಕಿ ಬ್ರಿಝಾ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

ನಿರ್ಮಾಣ

ನಿರ್ಮಾಣ

ಥಾಯ್ಲೆಂಡ್ ನಲ್ಲಿ ಸ್ಥಿತಗೊಂಡಿರುವ ಹೋಂಡಾದ ಆರ್ ಆಂಡ್ ಡಿ ಏಷ್ಯಾ ಫೆಸಿಫಿಕ್ ಕಂಪನಿ ಲಿಮಿಟೆಡ್ ಘಟಕದಲ್ಲಿ ಅಭಿವೃದ್ಧಿಗೊಂಡಿರುವ ನೂತನ ಹೋಂಡಾ ಬಿಆರ್ ವಿ ರಾಜಸ್ತಾನದ ತಕಪುರದಲ್ಲಿ ಸ್ಥಿತಗೊಂಡಿರುವ ಸಂಸ್ಥೆಯ ಘಟಕದಲ್ಲಿ ನಿರ್ಮಾಣವಾಗಲಿದೆ.

ಬಿಡುಗಡೆ ದಿನಾಂಕ

ಬಿಡುಗಡೆ ದಿನಾಂಕ

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಹೋಂಡಾ ಬಿಆರ್ ವಿ ಮುಂಬರುವ ಮೇ1ರಂದು ಬಿಡುಗಡೆಯಾಗಲಿದೆ.

ಏಳು ಸೀಟು

ಏಳು ಸೀಟು

ಏಳು ಸೀಟುಗಳ ಆಯ್ಕೆಗಳಲ್ಲಿ ಹೋಂಡಾ ಬಿಆರ್ ವಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಆಯಾಮ (ಎಂಎಂ)

ಆಯಾಮ (ಎಂಎಂ)

ಉದ್ದ: 4455

ಅಗಲ: 1735

ಎತ್ತರ: 1650

ಚಕ್ರಾಂತರ: 2660

ಗ್ರೌಂಡ್ ಕ್ಲಿಯರನ್ಸ್: 201

ಚಕ್ರಗಳು

ಚಕ್ರಗಳು

16 ಇಂಚುಗಳ ಡೈಮಂಡ್ ಫಿನಿಶಿಂಗ್ ಅಲಾಯ್ ವೀಲ್ ಗಳು ಪ್ರಮುಖ ಆಕರ್ಷಣೆಯಾಗಲಿದೆ.

195/60 R16 ಮುಂಭಾಗ ಮತ್ತು ಹಿಂಭಾಗದ ಚಕ್ರಗಳು

ಎಂಜಿನ್ ಆಯ್ಕೆಗಳು

ಎಂಜಿನ್ ಆಯ್ಕೆಗಳು

ಭಾರತೀಯ ಮಾದರಿಯು 1.5 ಲೀಟರ್ ಐ-ವಿಟೆಕ್ ಪೆಟ್ರೋಲ್ ಮತ್ತು 1.5 ಲೀಟರ್ ಐ-ಡಿಟೆಕ್ ಎಂಜಿನ್ ಗಳು ಇದರಲ್ಲಿರಲಿದೆ.

ಆಕ್ಟಿವ್ ಸಾಲಿಡ್ ಮೋಷನ್

ಆಕ್ಟಿವ್ ಸಾಲಿಡ್ ಮೋಷನ್

ಆಕ್ಟಿವ್ ಸಾಲಿಡ್ ಮೋಷನ್ ಡಿಸೈನ್ ತತ್ವಶಾಸ್ತ್ರದಲ್ಲಿ ನಿರ್ಮಾಣವಾಗಿರುವ ಹೋಂಡಾ ಬಿಆರ್ ವಿ ಅತ್ಯುತ್ತಮ ರಸ್ತೆ ಸಾನಿಧ್ಯವನ್ನು ಪಡೆದಿದ್ದು, ಸದೃಢ ನಿರ್ಮಾಣ ಗುಣಮಟ್ಟತೆ ಕಾಪಾಡಿಕೊಂಡಿದೆ.

ಸುರಕ್ಷತೆ

ಸುರಕ್ಷತೆ

ಡ್ಯುಯಲ್ ಫ್ರಂಟ್ ಎಸ್ ಆರ್ ಎಸ್ ಸಿಸ್ಟಂ

ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ

ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರಿಬ್ಯೂಷನ್

ಹಿಲ್ ಸ್ಟ್ಯಾರ್ಟ್ ಅಸಿಸ್ಟ್

ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ದೊಡ್ಡದಾದ ರೂಫ್ ರೈಲ್,

ಹೆಚ್ಚು ಗ್ರೌಂಡ್ ಕ್ಲಿಯರನ್ಸ್,

6 ಇಂಚುಗಳ ಅಲಾಯ್ ವೀಲ್,

ಎಲ್ ಇಡಿ ಟೈಲ್ ಲೈಟ್,

ಕ್ಯಾಬಿನ್ ಜಾಗ,

ಬಹು ಕ್ರಿಯಾತ್ಮಕ ಪರದೆ

ಹಿಂಬದಿಯಲ್ಲೂ ಎಸಿ

ಆರು ಬಣ್ಣಗಳು

ಆರು ಬಣ್ಣಗಳು

ಟಫೆಟಾ ವೈಟ್,

ಮಿಸ್ಟಿ ಗ್ರೀನ್ ಪಿಯರ್ಲ್,

ಪ್ಯಾಶನ್ ರೆಡ್ ಪಿಯರ್ಲ್,

ಕ್ರೈಸ್ಟಲ್ ಬ್ಲ್ಯಾಕ್ ಪಿಯರ್ಲ್,

ಮಾರ್ಡನ್ ಸ್ಟೀಲ್ ಮೆಟ್ಯಾಲಿಕ್,

ಲೂನಾರ್ ಸಿಲ್ವರ್ ಮೆಟ್ಯಾಲಿಕ್

Article Published On: Monday, April 11, 2016, 6:01 [IST]
English summary
All you want to know about new Honda BR-V
Read more on ಹೋಂಡಾ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+