ಹ್ಯುಂಡೈ ಜೆನಿಸಿಸ್ ಐಷಾರಾಮಿ ಕಾರು ಭರ್ಜರಿ ಅನಾವರಣ
ದಕ್ಷಿಣ ಕೊರಿಯಾ ಮೂಲದ ಮುಂಚೂಣಿಯ ವಾಹನ ಸಂಸ್ಥೆಯಾಗಿರುವ ಹ್ಯುಂಡೈ, 2016 ಆಟೋ ಎಕ್ಸ್ ಪೋದಲ್ಲಿ ಐಷಾರಾಮಿ ಕಾರು ಬ್ರಾಂಡ್ ಆಗಿರುವ 'ಜೆನಿಸಿಸ್' ಭರ್ಜರಿ ಅನಾವರಣಗೊಳಿಸಿದೆ.
ಹ್ಯುಂಡೈ ಜೆನಿಸಿಸ್ ಯಾವಾಗ ಭಾರತ ಮಾರುಕಟ್ಟೆ ತಲುಪಲಿದೆ ಎಂಬುದಕ್ಕೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಒಮ್ಮೆ ಭಾರತ ಮಾರುಕಟ್ಟೆ ತಲುಪಿದಾಗ ಜರ್ಮನಿಯ ಐಷಾರಾಮಿ ಕಾರು ಸಂಸ್ಥೆಗಳಿಗೆ ಪ್ರತಿಸ್ಪರ್ಧಿಯನ್ನು ಒಡ್ಡಲಿದೆ.

ಎರಡನೇ ತಲೆಮಾರಿನ ಜೆನಿಸಿಸ್ ಜಿ90 ಮಾದರಿಯು ಬಲ ಬದಿಯ ಚಾಲನಾ ವ್ಯವಸ್ಥೆಯನ್ನು ಪಡೆದಿದ್ದು, ರಿಯರ್ ವೀಲ್ ಡ್ರೈವಿಂಗ್ ಸಹ ಪ್ರಮುಖ ಆಕರ್ಷಣೆಯಾಗಲಿದೆ.

ಹ್ಯುಂಡೈನ ಜನಪ್ರಿಯ ಫ್ಲೂಯಿಡಿಕ್ 2.0 ವಿನ್ಯಾಸ ತತ್ವಶಾಸ್ತ್ರವನ್ನು ಇದರಲ್ಲೂ ಅನುಸರಿಸಲಾಗಿದ್ದು, ನಿಕಟ ಭವಿಷ್ಯದಲ್ಲಿ ಭಾರಿ ಬದಲಾವಣೆಯನ್ನುಂಟು ಮಾಡಲಿದೆ.

ಉದ್ದವಾದ ಬೊನೆಟ್, ಪ್ರೀಮಿಯಂ ಲುಕ್ ಹೊಂದಿರುವ ಹ್ಯುಂಡೈ ಜೆನಿಸಿಸ್ ಪ್ರಮುಖವಾಗಿಯೂ ಬೆಂಝ್ ಸಿ ಕ್ಲಾಸ್ ಸವಾಲನ್ನು ಎದುರಿಸಲಿದೆ.

ಎಂಜಿನ್ ತಾಂತ್ರಿಕತೆ
3.0 ಲೀಟರ್ ಲಂಬ್ಡಾ II ಜಿಡಿಐ ಪೆಟ್ರೋಲ್
249 ಅಶ್ವಶಕ್ತಿ, 304 ಎನ್‌ಎಂ ತಿರುಗುಬಲ
ರಿಯರ್ ವೀಲ್ ಡ್ರೈವ್ ಅಥವಾ ಆಲ್ ವೀಲ್ ಡ್ರೈವ್

ಎಂಜಿನ್ ತಾಂತ್ರಿಕತೆ
3.3 ಲೀಟರ್ ಲಂಬ್ಡಾ ಜಿಡಿಐ ಪೆಟ್ರೋಲ್
282 ಅಶ್ವಶಕ್ತಿ, 347 ಎನ್‌ಎಂ ತಿರುಗುಬಲ
ರಿಯರ್ ವೀಲ್ ಡ್ರೈವ್

ಎಂಜಿನ್ ತಾಂತ್ರಿಕತೆ
3.8 ಲೀಟರ್ ಲಂಬ್ಡಾ II ಜಿಡಿಐ ಪೆಟ್ರೋಲ್
315 ಅಶ್ವಶಕ್ತಿ, 397 ಎನ್‌ಎಂ ತಿರುಗುಬಲ
ರಿಯರ್ ವೀಲ್ ಡ್ರೈವ್ ಅಥವಾ ಆಲ್ ವೀಲ್ ಡ್ರೈವ್

ಎಂಜಿನ್ ತಾಂತ್ರಿಕತೆ
5.0 ಲೀಟರ್ ಟಾವೂ ಜಿಟಿಐ ಪೆಟ್ರೋಲ್
413 ಅಶ್ವಶಕ್ತಿ, 505 ಎನ್‌ಎಂ ತಿರುಗುಬಲ
ರಿಯರ್ ವೀಲ್ ಡ್ರೈವ್
ಗೇರ್ ಬಾಕ್ಸ್: ಸ್ಟ್ಯಾಂಡರ್ಡ್ 8 ಸ್ಪೀಡ್ ಆಟೋಮ್ಯಾಟಿಕ್

ಹೊರಮೈ
- ಎಲ್‌ಇಡಿ ಹೆಡ್ ಲ್ಯಾಂಪ್,
- ಎಲ್ ಇಡಿ ಫ್ರಂಟ್ ಮತ್ತು ರಿಯರ್ ಫಾಗ್ ಲ್ಯಾಂಪ್,
- ಜೆನಿಸಿಸ್ ಲಾಂಛನ
- 19 ಇಂಚುಗಳ ಅಲಾಯ್ ಚಕ್ರಗಳು,
- ಎಲ್ ಇಡಿ ಟೈಲ್ ಲ್ಯಾಂಪ್,
- ಡ್ಯುಯಲ್ ಟ್ವಿನ್ ಎಕ್ಸಾಸ್ಟ್ ಟೈಲ್ ಪೈಪ್.
- ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಲ್ಲಿ 7 ಇಂಚುಗಳ ಟಿಎಫ್ ಟಿ ಎಲ್ ಸಿಡಿ,
- 9.2 ಇಂಚುಗಳ ಎಚ್ ಡಿ ಇನ್ಪೋಟೈನ್ಮೆಂಟ್ ಸಿಸ್ಟಂ,
- 17 ಸ್ಪೀಕರ್ ಲೆಕ್ಸಿಕನ್ ಸೌಂಡ್ ಸಿಸ್ಟಂ,
- ಡ್ಯುಯಲ್ ಮಾನಿಟರ್ ರಿಯರ್ ಸೀಟು ಮನರಂಜನಾ ವ್ಯವಸ್ಥೆ.



Click it and Unblock the Notifications








