ಹ್ಯುಂಡೈ ಮನಮೆಚ್ಚಿದ ಎಸ್‌ಯುವಿ ಕಾನ್ಸೆಪ್ಟ್ ರಂಗ ಪ್ರವೇಶ

By Nagaraja

ನೆರೆದಿದ್ದ ವಾಹನ ಪ್ರೇಮಿಗಳಲ್ಲಿ ಅಚ್ಚರಿ ಮೂಡಿಸಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಂಸ್ಥೆಯು 2016 ಆಟೋ ಎಕ್ಸ್ ಪೋದಲ್ಲಿ ಅತಿ ನೂತನ ಎಚ್‌ಎನ್‌ಡಿ-14 ಕ್ರೀಡಾ ಬಳಕೆಯ ವಾಹನದ ಪರಿಕಲ್ಪನೆಯನ್ನು ಪ್ರದರ್ಶಿಸಿದೆ.

ದೆಹಲಿಯಲ್ಲಿ ನಡೆಯುತ್ತಿರುವ 13ನೇ ಆಟೋ ಎಕ್ಸ್ ಪೋಗೂ ಮುಂಚಿತವಾಗಿ ಹ್ಯುಂಡೈ ಎಚ್‌ಎನ್‌ಡಿ-14 (HND-14) ಅನಾವರಣಗೊಳ್ಳುವ ಬಗ್ಗೆ ಯಾವುದೇ ಮಾಹಿತಿಗಳಿರಲಿಲ್ಲ. ಈ ನಡುವೆ ಹ್ಯುಂಡೈ ಮನಮೆಚ್ಚಿದ ಕಾನ್ಸೆಪ್ಟ್ ರಂಗಪ್ರವೇಶವಾಗಿದೆ.

ಹ್ಯುಂಡೈ ಎಚ್‌ಎನ್‌ಡಿ-14 ಎಸ್‌ಯುವಿ ಕಾನ್ಸೆಪ್ಟ್


ಎಂಜಿನ್ ತಾಂತ್ರಿಕತೆ
ಹ್ಯುಂಡೈ ಐ20 ತಳಹದಿಯಲ್ಲಿ ನಿರ್ಮಾಣವಾಗಿರುವ ಎಚ್‌ಎನ್‌ಡಿ-14 ಕಾರಿನಲ್ಲೂ ಈ ಜನಪ್ರಿಯ ಕಾರಿನ ಎಂಜಿನ್ ತಾಂತ್ರಿಕತೆಗಳು ಆಳವಡಿಸುವ ಸಾಧ್ಯತೆಯಿದೆ. ಅಂದರೆ ಇದರಲ್ಲಿ 1.2 ಲೀಟರ್ ಪೆಟ್ರೋಲ್ ಹಾಗೂ 1.4 ಲೀಟರ್ ಡೀಸೆಲ್ ಎಂಜಿನ್ ಗಳು ಬಳಕೆಯಾಗಲಿದೆ.

1.2 ಲೀಟರ್ ಪೆಟ್ರೋಲ್: 82 ಅಶ್ವಶಕ್ತಿ (115 ಎನ್‌ಎಂ ತಿರುಗುಬಲ)
1.4 ಲೀಟರ್ ಡೀಸೆಲ್: 89 ಅಶ್ವಶಕ್ತಿ (220 ಎನ್‌ಎಂ ತಿರುಗುಬಲ)

ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್ ಅಥವಾ 4 ಸ್ಪೀಡ್ ಎಎಂಟಿ ಗೇರ್ ಬಾಕ್ಸ್.

ವಿನ್ಯಾಸ
ಹ್ಯುಂಡೈನ ವಿಶ್ವ ವಿಖ್ಯಾತ ಫ್ಯೂಯಿಡಿಕ್ 2.0 ಡಿಸೈನ್ ತತ್ವಶಾಸ್ತ್ರದ ಅಡಿಯಲ್ಲಿ ಎಚ್‌ಎನ್‌ಡಿ-14 ಅಭಿವೃದ್ಧಿಗೊಳ್ಳಲಿದೆ. ಹೊರಮೈಯಲ್ಲಿ ಇದರ ದೃಢಕಾಯಾದ ಲುಕ್ ಪ್ರಮುಖ ಆಕರ್ಷಣೆಯಾಗಲಿದ್ದು, ಕಾರಿನ ಒಳಗಡೆ ಗರಿಷ್ಠ ವೈಶಿಷ್ಟ್ಯಗಳಿಗೆ ಒತ್ತು ಕೊಡಲಾಗಿದೆ.

ಲಭ್ಯತೆ ಮತ್ತು ಪ್ರತಿಸ್ಪರ್ಧಿಗಳು
ಒಟ್ಟಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಕ್ರೆಟಾ ಕ್ರೀಡಾ ಬಳಕೆಯ ವಾಹನದ ಭರ್ಜರಿ ಯಶಸ್ಸಿನ ಬಳಿಕ ಪುಳಕಿತಗೊಂಡಿರುವ ಹ್ಯುಂಡೈ, 2017ನೇ ಸಾಲಿನಲ್ಲಿ ಮಗದೊಂದು ಆಕರ್ಷಕ ಎಸ್‌ಯುವಿ ಕಾರನ್ನು ಬಿಡುಗಡೆ ಮಾಡುವ ಯೋಚನೆಯಲ್ಲಿದೆ. ಇದು ಪ್ರಮುಖವಾಗಿಯೂ ಮಹೀಂದ್ರ ಟಿಯುವಿ300 ಮತ್ತು ಫೋರ್ಡ್ ಇಕೊಸ್ಪೋರ್ಟ್ ಗಳಂತಹ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

More from DriveSpark

Article Published On: Monday, February 8, 2016, 12:44 [IST]
English summary
2016 Auto Expo: Hyundai HND-14 Concept SUV Revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+